LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ನಿಮ್ಮ ಧರ್ಮ ಪಾಲನೆ ಮಾಡಿ, ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ' - ಸಿಎಂ ಸಿದ್ದರಾಮಯ್ಯ

ಬಳ್ಳಾರಿ :ನಿಮ್ಮ ಧರ್ಮ ಪಾಲನೆ ಮಾಡಿ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕ್ರೈಸ್ತ ಧರ್ಮಕ್ಷೇತ್ರ ಅಮೃತೋತ್ಸವ ಹಿನ್ನೆಲೆಯಲ್ಲಿ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು.

ಅಂಬೇಡ್ಕರ್ ಸಂವಿಧಾನದಲ್ಲಿ ನಿಮ್ಮ ಧರ್ಮ ಪಾಲನೆ ಮಾಡಿ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದು ಹೇಳಿದ್ದಾರೆ. ಬೇರೆ ಧರ್ಮವನ್ನು ಸಹಿಸುವ ಸಹಿಷ್ಣುತೆ ಇರಬೇಕು. ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಬೇಕು. ಎಲ್ಲರನ್ನೂ ಗೌರವಿಸಿದರೆ ಅಂಬೇಡ್ಕರ್, ಸಂವಿಧಾನ ಮತ್ತು ಧರ್ಮ ಗುರುಗಳಿಗೆ ಗೌರವ ನೀಡಿದಂತೆ ಎಂದು ಹೇಳಿದರು.

ಕೆಲವರು ಸಿದ್ದರಾಮಯ್ಯ ಮುಸಲ್ಮಾನರನ್ನು, ಕ್ರಿಶ್ಚಿಯನ್​ರನ್ನು ಓಲೈಸಿ, ಹಿಂದುಗಳನ್ನು ವಿರೋಧ ಮಾಡುತ್ತಾರೆ ಅಂತಾರೆ. ಅದೆಲ್ಲ ಸುಳ್ಳು ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ತಾರತಮ್ಯ, ಅಸಮಾನತೆ ಎಂಬುವುದು ನಮ್ಮಲ್ಲಿರುವ ಜಾತೀಯತೆಯಿಂದ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST