ಅಂತರಾಷ್ಟ್ರೀಯ ಕ್ರಿಕೆಟ್ ಮಾಜಿ ಆಟಗಾರ ರಘುರಾಮ್ ಭಟ್, ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ಗೌರವ ಸನ್ಮಾನ
-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ*
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ಮತ್ತು ಗಮಕ ಕಲಾರತ್ನ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಕಾವ್ಯವಾಚನ ಕಾರ್ಯಕ್ರಮ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ರವರು, ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ಎಸ್.ರಘುನಾಥ್ ರವರು* ಬ್ರಾಹ್ಮಣ ಸಮುದಾಯ ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ ಮತ್ತು ವಿಜ್ಞಾನ, ತಂತ್ರಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿರುವವರು ಸಾಕಷ್ಟು ಜನರು ಇದ್ದಾರೆ ಅವರನ್ನ ಗುರುತಿಸಿ ಗೌರವಿಸಿ ಸನ್ಮಾನ ಮಾಡಬೇಕು ಎಂಬ ಉದ್ದೇಶದಿಂದ ಮಹಾಸಭಾ ವತಿಯಿಂದ ಪ್ರತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬ್ರಾಹ್ಮಣ ಮಹಾಸಭಾ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡು ಬರಲಾಗುತ್ತಿದೆ.
ಶಿಕ್ಷಣ ಮತ್ತು ಆರೋಗ್ಯ ಹಾಗೂ ಸಮುದಾಯದ ಸಂಘಟನೆ ಆದ್ಯತೆ ನೀಡಲಾಗಿದೆ.
ಮಹಾಸಭಾದಲ್ಲಿ 100ಕೋಟಿ ದತ್ತಿನಿಧಿ ಪ್ರಾರಂಭಿಸಲಾಗಿದೆ. ದತ್ತನಿಧಿಯನ್ನು ಬ್ಯಾಂಕ್ ಠೇವಣಿ ಇಟ್ಟು ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಮುದಾಯದ ಅಭಿವೃದ್ದಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
*ಆರ್.ಲಕ್ಷ್ಮಿಕಾಂತ್ ರವರು* ಮಾತನಾಡಿ ಪ್ರತಿ ತಿಂಗಳು ಕೊನೆಯ ಶುಕ್ರವಾರ ನಮ್ಮ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ.
ಗಮಕ ಕಲೆಯಲ್ಲಿ ಇಂದು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಗಂಗಮ್ಮ ಕೇಶವಮೂರ್ತಿ ರವರು ಕಂಚಿನ ಕಂಠ ಇಡಿ ದೇಶಕ್ಕೆ ಪರಿಚಯವಿದೆ. ಗಮಕ ಕಲೆಯ ಉಳಿಸುವಲ್ಲಿ ಗಂಗಮ್ಮ ಕೇಶವಮೂರ್ತಿ ಕೂಡುಗೆ ಅಪಾರ.
ವಯಲಿನ್ ನಳಿನಮೋಹನ್ ರವರು ನಾಡಿನ ಖ್ಯಾತ ವಯಲಿನ್ ಪಟುವಾಗಿದ್ದಾರೆ. ಮೃದಂಗ ವಿದ್ವಾನ್ ಕೆ.ವಿ.ರವಿಶಂಕರ್ ವರ್ಣಚಿತ್ರಕಾರ ಅಶ್ವಥ್ ಕುಮಾರ್ ಮತ್ತು ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ರಘುರಾಮ್ ಭಟ್ ರವರನ್ನು ಸನ್ಮಾನಿಸಲಾಗುತ್ತಿದೆ.
ಗಮಕ ಕಲಾರತ್ನ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಮಾಜಿ ಟೆಸ್ಟ್ ಆಟಗಾರ, ಭಾರತ ಕ್ರಿಕೆಟ್ ಮಂಡಳಿ ಆಡಳಿತ ಮಂಡಳಿ ಖಜಾಂಚಿಗಳಾದ ರಘುರಾಮ್ ಭಟ್, ವಯಲಿನ್ ವಿದುಷಿ ಶ್ರೀಮತಿ ನಳಿನ ಮೋಹನ್, ಮೃದಂಗ ವಿದ್ವಾನ್ ಕೆ.ವಿ.ರವಿಶಂಕರ್, ವರ್ಣಚಿತ್ರಕಾರ ಅಶ್ವಥ್ ಕುಮಾರ್ ರವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೌರವ ಸನ್ಮಾನ ನೇರವೆರಿತು.
ಸಮಾಜದ ಮುಖಂಡರುಗಳಾದ ಪ್ರಹ್ಲಾದ್ ಬಾಬು, ಸುದರ್ಶನಂ, ಕೆ.ಎನ್.ರವಿಕುಮಾರ್, ಸತೀಶ್ ಉರಾಳ್,ಎಂ.ಆರ್.ಶಿವಶಂಕರ್ , ಮಾಲಿನಿ ರಾಮಪ್ರಸಾದ್, ರಥಯಾತ್ರೆ ಸುರೇಶ್, ಗಿರಿನಗರ ಸಂಗೀತ ಸತೀಶ್ ಮತ್ತು ಸಂಘದ ಸದಸ್ಯರು ಸಮಾಜದವರು ಭಾಗವಹಿಸಿದ್ದರು.