Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರ ಮಾಜಿ ಸಚಿವ ಮನೀಶ್ ತಿವಾರಿ ಪತ್ರಿಕಾಗೋಷ್ಠಿ

ಸುದ್ದಿಮೂಲ ವಾರ್ತೆ

ಬೆಂಗಳೂರು,ಮೇ 30:ಕರ್ನಾಟಕ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ನೀಡುವ ಮೂಲಕ ಇಡೀ ದೇಶಕ್ಕೆ ವಿಭಜನೆ ರಾಜಕೀಯವನ್ನು ಹೇಗೆ ಮಣಿಸುವುದು ಎಂಬ ಸಂದೇಶವನ್ನು ರವಾನಿಸಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಯಾವುದೇ ಸರ್ಕಾರದ ಕಾರ್ಯವೈಖರಿಯನ್ನು ಐದು ಮಾನದಂಡಗಳ ಮೇಲೆ ನಿರ್ಧರಿಸಲಾಗುವುದು. ಮೊದಲನೆಯದು ಹೊರದೇಶಗಳಿಂದ ಭಾರತದ ಭದ್ರತೆ. ಎರಡನೆಯದು ದೇಶದ ಆರ್ಥಿಕತೆ, ಮೂರನೇಯದು ಸಾಮಾಜಿಕ ಭದ್ರತೆ, ನಾಲ್ಕನೆಯದು ಆಂತರಿಕ ಭದ್ರತೆ ಹಾಗೂ ಐದನೆಯದು ಭಾರತದ ವಿದೇಶಾಂಗ ನೀತಿ.

ಈ ಎಲ್ಲ ವಿಚಾರಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಂದು ಭಾರತವು ಹಿಂದೆಂದಿಗಿಂತಲೂ ಬಾಹ್ಯ ಶಕ್ತಿಗಳಿಂದ ಭದ್ರತೆಯ ಸವಾಲನ್ನು ಎದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯು ಭಾರತದ ನೆಲವನ್ನು ಅತಿಕ್ರಮಣ ಮಾಡಿದ್ದು ನಮ್ಮ ನೆಲದಿಂದ ಅವರು ಜಾಗ ಖಾಲಿ ಮಾಡಿಲ್ಲ. ವರದಿಯೊಂದರ ಪ್ರಕಾರ ಚೀನಾ ಭಾರತದ ಡೆಪ್ ಸಾಂಗ್ ಕಣಿವೆ ಸುಮಾರು 15ರಿಂದ 20 ಕಿಲೋ ಮೀಟರ್ ಗಳಷ್ಟು ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದೆ.

ಸುಮಾರು 1ಸಾವಿರ ಕಿ.ಮೀ. ನಷ್ಟು ಉದ್ದದ ಈ ಜಾಗವು ಪಾಕಿಸ್ತಾನ ಹಾಗೂ ಚೀನಾ ಗಡಿಯನ್ನು ಬೇರ್ಪಡಿಸಿದೆ. ಹೀಗಾಗಿ ಭಾರತದ ಪಾಲಿಗೆ ಈ ಜಾಗ ಅತ್ಯಂತ ಮಹತ್ವದ್ದಾಗಿದೆ. ಆದರೂ ಬಿಜೆಪಿ ಸರ್ಕಾರ ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ.

ಈ ವಿಚಾರವಾಗಿ ಸಂಸತ್ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಯಾವುದೇ ರೀತಿಯ ಉತ್ತರವನ್ನು ನೀಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಭಾರತದ ಗಡಿ ನಿಯಂತ್ರಣ ರೇಖೆ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ.

ಇನ್ನು ಆರ್ಥಿಕತೆಯ ಕುರಿತು ಚರ್ಚೆ ಮಾಡುವುದಾದರೆ, ಬೆಲೆ ಏರಿಕೆ ಹಾಗೂ ಹಣದುಬ್ಬರ ದೇಶದ ಜನಸಾಮಾನ್ಯರ ಜೀವನವನ್ನು ದುಸ್ಥಿತಿಗೆ ದೂಡಿದೆ. ಆಹಾರ ಹಣದುಬ್ಬರ ದೇಶದ ಪ್ರತಿಯೊಂದು ಕುಟುಂಬದ ವೆಚ್ಚದ ಮೇಲೆ ದುಷ್ಪರಿಣಾಮ ಬೀರಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ಎನ್ ಡಿಎ ಸರ್ಕಾರ ದೇಶದ ಜನರಿಗೆ ಅಚ್ಛೇದಿನ ನೀಡುವುದಾಗಿ ಹೇಳಿತ್ತು. ಆದರೆ ಇಂದು ಅಡುಗೆ ಅನಿಲ ಸಿಲಿಂಡರ್ ಬೆಲೆ 1105 ರೂ. ಆಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 110 ರೂ. ಆಗಿದೆ.

ಬಿಜೆಪಿ ಸರ್ಕಾರ ವಶಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, ಆ ಮೂಲಕ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಒಟ್ಟು 18 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ದೇಸಿ ಜನರಿಗೆ ಕೊಟ್ಟ ಭರವಸೆಯಂತೆ 18 ಕೋಟಿ ಉದ್ಯೋಗಗಳು ಎಲ್ಲಿ ಹೋದವು?

ಯಾವುದೇ ದೇಶದ ಆರ್ಥಿಕತೆ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಸುಮಾರು 60% ಜನರು ಉದ್ಯೋಗ ಹೊಂದಿರಬೇಕು. ನಮ್ಮ ದೇಶದಲ್ಲಿ 140 ಕೋಟಿ ಜನರು ಇದ್ದು ಅದರಲ್ಲಿ ಕನಿಷ್ಠ 80 ಕೋಟಿ ಜನರು ಉದ್ಯೋಗವನ್ನು ಹೊಂದಿರಬೇಕು. ಆದರೆ ದೇಶದಲ್ಲಿ ಉದ್ಯೋಗ ಹೊಂದಿರುವವರ ಸಂಖ್ಯೆ ಕೇವಲ 40 ಕೋಟಿ ಮಾತ್ರ. ಈ ಸರ್ಕಾರ ಉದ್ಯೋಗ ಸೃಷ್ಟಿಸಲು ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ.

2023ರ ಈ ಪ್ರೀತಿಗಳ ವರೆಗಿನ ನಿರುದ್ಯೋಗ ಪ್ರಮಾಣ 8.11% ನಷ್ಟಿದೆ. ದೇಶದ ಆರ್ಥಿಕ ಅಸಮಾನತೆ ಪ್ರಮಾಣವು ಎಷ್ಟಿದೆ ಎಂದರೆ ದೇಶದ 98 ಜನ ಶ್ರೀಮಂತರ ಬಳಿ, ದೇಶದ ಉಳಿದ 55 ಕೋಟಿ ಜನರ ಬಳಿ ಇರುವಷ್ಟು ಆಸ್ತಿಯನ್ನು ಹೊಂದಿದ್ದಾರೆ. ಕಳೆದ 9 ವರ್ಷಗಳಲ್ಲಿ ಸರ್ಕಾರದ ಶ್ರೀಮಂತರ ಸ್ನೇಹಿತರ ಆಸ್ತಿ ಹೆಚ್ಚಾಗಿದೇಯೆ ಹೊರತು, ಜನಸಾಮಾನ್ಯರ ಆಸ್ತಿ ಪ್ರಮಾಣ ಹೆಚ್ಚಾಗಿಲ್ಲ.

ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿತ್ತು ಈಗ ಗೃಹ ಸಚಿವರು ಮಣಿಪುರಕ್ಕೆ ಭೇಟಿ ನೀಡುವ ಮನಸು ಮಾಡಿದ್ದಾರೆ. 2015ರಲ್ಲಿ ಕೈಗೊಳ್ಳದಾಗ ನಾಗಾಲ್ಯಾಂಡ್ ಒಪ್ಪಂದ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ 2019ರಲ್ಲಿ ಮಾಡಿದ್ದಾರೆ. ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಇಂದು ಭರವಸೆ ನೀಡಿ ಇದುವರೆಗೂ ಅಲ್ಲಿ ಚುನಾವಣೆ ನಡೆಸಿಲ್ಲ.

ಕೇಂದ್ರ ಸರ್ಕಾರ ಸರಿಯಾದ ಉತ್ತರ ತೆಗೆದುಕೊಂಡಿದ್ದೆ ಆಗಿದ್ದಲ್ಲಿ ಅವರು ಚುನಾವಣೆ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ?

2014ರಿಂದ 2019ರವರೆಗೆ ಬಿಜೆಪಿಯು ಯಾವುದೇ ರಾಜ್ಯಗಳಲ್ಲಿ ತನ್ನ ಅಭಿವೃದ್ಧಿಯ ಕೆಲಸದ ಆಧಾರದ ಮೇಲೆ ಚುನಾವಣೆ ನಡೆಸಿಲ್ಲ. ಅದಕ್ಕೆ ಉದಾಹರಣೆ ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆ. ದೇಶದಲ್ಲಿ ಕೋಮು ಸಂಘರ್ಷ ಕಾವು ಸದಾ ಇರುವಂತೆ ನೋಡಿಕೊಳ್ಳಲು ಬಿಜೆಪಿ ಸರ್ಕಾರ ಬಯಸುತ್ತದೆ. ಆ ಮೂಲಕ ವಿಭಜನೆ ರಾಜಕೀಯ ಮಾಡಿ ಬಿಜೆಪಿ ಸರ್ಕಾರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಇದು ದೇಶಕ್ಕೆ ಮಾರಕವಾದ ವಿಚಾರ.

ಇನ್ನು ವಿದೇಶಾಂಗ ನೀತಿ ವಿಚಾರಕ್ಕೆ ಬರುವುದಾದರೆ, ವಿದೇಶಾಂಗ ಸಚಿವ ಜಯಶಂಕರ್ ಅವರಿಗೆ ಕೇವಲ ಮೂರು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಪಡೆಯಲು ಕಳೆದ ಏಳು ವರ್ಷಗಳಿಂದ ಯಾವುದೇ ಪ್ರಯತ್ನ ನಡೆದಿಲ್ಲ ಯಾಕೆ? ಅನ್ವಸ್ತ್ರ ಸರಬರಾಜು ಸಮೂಹದಲ್ಲಿ ಭಾರತ ಸದಸ್ಯತ್ವ ಪಡೆಯಲು ಸಾಧ್ಯವಾಗಿಲ್ಲ ಯಾಕೆ? 2018 ರಿಂದ ಇಲ್ಲಿಯವರೆಗೂ ಭಾರತದಲ್ಲಿ ಸಾರ್ಕ್ ಸಮಾವೇಶ ನಡೆದಿಲ್ಲ ಯಾಕೆ? ಭಾರತದ ನೆರೆ ರಾಷ್ಟ್ರಗಳಲ್ಲಿ ಚೀನಾದ ಪ್ರಭಾವ ಇಚ್ಚುತ್ತಿರುವುದಕ್ಕೆ ಪ್ರತಿಯಾಗಿ ಭಾರತದ ಪ್ರತಿ ತಂತ್ರಗಳು ರೂಪಿಸಲಾಗುತ್ತಿಲ್ಲ ಯಾಕೆ?

ಈ ಸರ್ಕಾರ ಸುಳ್ಳು ವೈಭವೀಕರಣ ಪ್ರಚಾರದ ಹೊರತಾಗಿ ಉಳಿದ ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಕರ್ನಾಟಕ ರಾಜ್ಯವು ತನ್ನ ಚುನಾವಣೆಯಲ್ಲಿ ಬುದ್ದಿವಂತಿಕೆಯಿಂದ ತಮ್ಮ ಆಯ್ಕೆ ಮಾಡಿದೆ. ಇದೇ ರೀತಿ ದೇಶದ ಜನರು ಕೂಡ 2024ರ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ಬಹಳ ಬುದ್ಧಿವಂತಿಕೆಯಿಂದ ಸರ್ಕಾರವನ್ನು ಆರಿಸಬೇಕಿದೆ ಎಂದು ಮನವಿ ಮಾಡುತ್ತೇನೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ