Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

CRIME: ಪ್ರಿಯಕರನ ಜೊತೆ ಸೇರಿ ಪತ್ನಿ ಹತ್ಯೆಗೈದಿದ್ದ ಪತ್ನಿ ಸೇರಿ ನಾಲ್ವರು ಅರೆಸ್ಟ್

ವಿಜಯಪುರ: ಪತಿಯ ಹತ್ಯೆಗೆ ಸ್ಕೆಚ್ ಹಾಕಿ, ಸ್ಕಾರ್ಪಿಯೋ ಕಾರಿನಿಂದ ಗುದ್ದಿಸಿ ಕೊಲೆ ಮಾಡಿ ಬಳಿಕ ಅದು ಕೇವಲ 'ರಸ್ತೆ ಅಪಘಾತ' ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನು ಹತ್ಯೆ ಮಾಡಿಸಿದ ಪತ್ನಿ ಅಶ್ವಿನಿ, ಆಕೆಯ ಪ್ರಿಯಕರ ಆನಂದ ಕಲ್ಲೂರು ಹಾಗೂ ಕೃತ್ಯಕ್ಕೆ ಸಾಥ್ ನೀಡಿದ ಸಚಿನ್ ಬಡಳ್ಳಿ ಬಂಧಿತ ಆರೋಪಿಗಳು. ಇವರೊಂದಿಗೆ ಭಾಗಿಯಾಗಿದ್ದ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೇಂಟಿಂಗ್ ಕೆಲಸಕ್ಕೆ ಬಂದವನ ಜೊತೆ ಅಕ್ರಮ ಸಂಬಂಧ!

ವಿಜಯಪುರ ನಗರದಲ್ಲಿ ವಾಸವಾಗಿದ್ದ ರಾಜಶೇಖರ್ ಎಂಬುವವರ ಮನೆಗೆ ಆನಂದ ಕಲ್ಲೂರು ಪೇಂಟಿಂಗ್ ಕೆಲಸಕ್ಕಾಗಿ ಬರುತ್ತಿದ್ದ. ಈ ವೇಳೆ ಆತನೊಂದಿಗೆ ರಾಜಶೇಖರ್ ಪತ್ನಿ ಅಶ್ವಿನಿಗೆ ಪರಿಚಯವಾಗಿ, ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತಿಯ ಅರಿವಿಗೆ ಬಾರದಂತೆ ಪ್ರೇಮಾಲಾಪ ನಡೆಸುತ್ತಿದ್ದ ಈ ಜೋಡಿ, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರಾಜಶೇಖರ್‌ನನ್ನು ಜೀವಸಹಿತ ಮುಗಿಸಲು ಸಂಚು ರೂಪಿಸಿತ್ತು.

ಸ್ಕಾರ್ಪಿಯೋ ಕಾರು ಗುದ್ದಿಸಿ ಕೊಲೆ, ಅಪಘಾತವೆಂದು ಕಥೆ!

ಯೋಜನೆಯಂತೆ ಅಕ್ಟೋಬರ್ 4ರಂದು ರಾಜಶೇಖರ್ ರಸ್ತೆಯಲ್ಲಿ ವಾಕಿಂಗ್ ತೆರಳುತ್ತಿದ್ದಾಗ, ಆರೋಪಿಗಳು ಸ್ಕಾರ್ಪಿಯೋ ಕಾರಿನಿಂದ ರಭಸವಾಗಿ ಡಿಕ್ಕಿ ಹೊಡೆಸಿ ಸ್ಥಳದಲ್ಲೇ ಕೊಲೆಗೈದಿದ್ದರು. ಕೃತ್ಯ ಎಸಗಿದ ಬಳಿಕ ಏನೂ ಅರಿಯದವಳಂತೆ ನಟಿಸಿದ ಪತ್ನಿ ಅಶ್ವಿನಿ, ತನ್ನ ಪತಿ ಎಂದಿನಂತೆ ವಾಕಿಂಗ್ ಹೋಗಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು.

ತನಿಖೆ ವೇಳೆ ಬಯಲಾಯ್ತು ಪಾಪಿ ಪತ್ನಿಯ ಕಳ್ಳಾಟ

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಘಟನಾ ಸ್ಥಳ ಹಾಗೂ ಸನ್ನಿವೇಶಗಳ ಬಗ್ಗೆ ತೀವ್ರ ಅನುಮಾನ ಮೂಡಿತ್ತು. ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆಳವಾದ ವಿಚಾರಣೆ ನಡೆಸಿದಾಗ, ಇದು ಆಕಸ್ಮಿಕ ಅಪಘಾತವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಪೊಲೀಸರು ತಮ್ಮದೇ ಶೈಲಿಯಲ್ಲಿ ಅಶ್ವಿನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಿಯಕರ ಆನಂದ ಕಲ್ಲೂರು ಮತ್ತು ಆತನ ಸಹಚರರೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿಸಿದ ಕರಾಳ ಸತ್ಯವನ್ನು ಆಕೆ ಬಾಯ್ಬಿಟ್ಟಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಶ್ವಿನಿ, ಪ್ರಿಯಕರ ಆನಂದ ಹಾಗೂ ಸಚಿನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದು, ಅಪ್ರಾಪ್ತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!