
ಮಾಗಡಿ ರಸ್ತೆಯ ಪೊಲೀಸ್ ಕಾಲೋನಿಯಲ್ಲಿರುವ 'ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ'ದ ಆವರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ,ಸಂಘದ ಅಧ್ಯಕ್ಷ ಬೆಟ್ಟೇಗೌಡ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು.
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆತೀಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನುರಿತ ವೈದ್ಯರಿಂದ ಕಣ್ಣು, ದಂತ ಹಾಗೂ ಕಿವಿ-ಮೂಗು-ಗಂಟಲು,ಸಕ್ಕರೆ ಕಾಯಿಲೆ,ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸಲಾಯಿತು.
ಇದರೊಂದಿಗೆ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾದರು. ದೂರದೃಷ್ಟಿ ಮತ್ತು ಸಮೀಪದೃಷ್ಟಿ ದೋಷವಿರುವವರಿಗೆ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆಯನ್ನು ನೀಡಲಾಯಿತು.

ನಿವೃತ್ತ ಎಸಿಪಿ ಹಾಗು ಮಾಜಿ ಸಂಘದ ಅಧ್ಯಕ್ಷ ಬಿಕೆ ಶಿವರಾಂ ಮಾತನಾಡಿ, ಸಂಘದಿಂದ ಸಮಾಜಮುಖಿ ಕಾರ್ಯ ಒಳ್ಳೆಯದು, ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ
ಈಗಾಗಲೇ 8 ರಿಂದ 10,000 ಗಿಡಗಳನ್ನು ನೆಟ್ಟಿದ್ದೇವೆ, ನಾವು ಇಲಾಖೆಯಲ್ಲಿ ಇದ್ದಾಗಲೂ ಜನಸೇವೆಯನ್ನು ಮಾಡುತ್ತಿದ್ದೇವೆ ನಿವೃತ್ತರಾದ ಮೇಲೂ ಸಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದರು. ಇಂತಹ ಸಮಾಜಮುಖಿ ಕೆಲಸಗಳು ನಿತ್ಯ ನಿರಂತರವಾಗಿ ನಡೆಯಬೇಕು. ಕೇವಲ ಪೊಲೀಸ್ ಅಧಿಕಾರಿಗಳಿಗೆ ನಿವೃತ್ತ ಅಧಿಕಾರಿಗಳಿಗೆ ಮಾತ್ರವಲ್ಲದೇ ಸಾರ್ವಜನಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನ ಸಾರ್ತಕವಾಗುತ್ತದೆ.
ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ಸಂಘ ಪ್ರಾರಂಭವಾಗಿನಿಂದಲೂ ಹಿಡಿದು ಇಲ್ಲಿಯವರೆಗೂ ಹಲವು ಸಮಾಜಮುಖಿ ಹಾಗೂ ನಿವೃತ್ತ ಅಧಿಕಾರಿಗಳ ಒಳಗೊಂಡ ಚಟುವಟಿಕೆಗಳನ್ನು ಮಾಡಿಕೊಂಡು ಬರಲಾಗುತ್ತದೆ, ಇಂತಹ ಸಮಾಜಮುಕಿ ಕಾರ್ಯಗಳನ್ನು ಮಾಡಬೇಕಾದರೆ ಎಲ್ಲರೂ ಸಹ ಮುಂದೆ ಬರಬೇಕು, ಆರೋಗ್ಯ ಶಿಬಿರ ಗಿಡ ನೆಡುವ ಶಿಬಿರ ಸೇರಿದಂತೆ ಇಂತಹ ಸಮಾಜಮುಖಿ ಕಾರ್ಯಗಳನ್ನು ಪ್ರತಿ ತಿಂಗಳು ಮಾಡಬೇಕು ಎನ್ನುವ ನನ್ನ ಹಂಬಲವಿದೆ. ಮುಂಬರುವ ಮೊದಲ ಮಳೆಗಾಲದಲ್ಲಿ 1000 ಸಸಿಗಳನ್ನು ನೆಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ನಾನು ಲಯನ್ಸ್ ಕ್ಲಬ್ ನಲ್ಲಿ ಇದ್ದಾಗ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇನೆ ಅದನ್ನು ಸಂಘದ ವತಿಯಿಂದ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ವಿಜಯನಗರ ಪೋಲೀಸ್ ಠಾಣೆಯ ಎಸಿಪಿ ಚಂದನ್ ಕುಮಾರ್ ಮಾತನಾಡಿ, ಹಿರಿಯ,ನಿವೃತ್ತ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನನ್ನ ಕಾಯಕ ಮಾಡುತ್ತೇನೆ, ಆರೋಗ್ಯ ತಪಾಸಣಾ ಶಿಬಿರಗಳು ಪ್ರಸ್ತುತ ಬೇಕಾಗಿದೆ. ಅವುಗಳನ್ನು ಸಮಾಜಮುಕಿಯಾಗಿ ಸಂಘದ ವತಿಯಿಂದ ಮಾಡಲಾಗುತ್ತಿರುವುದು ಹೆಗ್ಗಳಿಕೆಯ ವಿಚಾರ. ಸಂಘಕ್ಕೆ ತನ್ನಿಂದ ಕೈಲಾದ ಸಹಾಯ ಮಾಡಲು ಸಿದ್ದನಿದ್ದೇನೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿಗಳಾ ಬಿ.ಕೆ. ಶಿವರಾಂ, ಕೆ.ಎಚ್. ಜಗದೀಶ್, ಎಸ್.ಪಿ. ಕರಿನಿಂಗ್, ಸಂಘದ ಖಜಾಂಚಿ ಏಆರ್ ಬಡಿಗೇರ್ ವಾಸನ್ ರ್ಆಸ್ಪತ್ರೆ ವೈದ್ಯರಾದ ಡಾ.ಸೌಜನ್ಯ, ಸಂಘದ ಪಾದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.