LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೆ.22 ರಿಂದ ‘ಶ್ರೀಕಾಂತಣ್ಣ ಕಪ್’ ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗ,ಫೆ. 20 : ಕ್ರೀಡಾಕೂಟ ಆಯೋಜನೆಗಳಿಂದ ಹಲ ವಾರು ಪ್ರಯೋಜನಗಳಿವೆ ಎಂದು ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ ಅಭಿಪ್ರಾಯ ವ್ಯಕ್ತಪಡಿಸಿದರು.  ಬುಧವಾರ ಸಂಜೆ ನಗರದ ಹೊಟೆಲ್ ವೊಂದರಲ್ಲಿ ಆಯೋಜಿಸಲಾಗಿದ್ದ “ಶ್ರೀಕಾಂತಣ್ಣ ಕಪ್" ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬಹುಮಾನ ಟ್ರೋಫಿಗಳ ಅನಾ ವರಣ ಹಾಗೂ ತಂಡಗಳ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.  ಕ್ರೀಡಾಕೂಟಗಳ ಆಯೋಜ ನೆಯಿಂದಾಗಿ ಭ್ರಾತೃತ್ವ ಬೆಳೆಯುತ್ತದೆ.  ಜೊತೆಗೆ ಸಮಾನ ಮನಸ್ಕರನ್ನು, ಸ್ನೇಹಿತರನ್ನು ಒಗ್ಗೂಡಿ ಸುತ್ತದೆ ಎಂದರು.
ಎಲ್ಲಾ ಕ್ರೀಡೆಗಳಲ್ಲಿ ಸೋಲು ಗೆಲುವು ಎಂಬುದು ಸಹಜವಾಗಿದ್ದು, ಇದನ್ನು ಯುವ ಕರು, ಸಮಾನವಾಗಿ ಸ್ವೀಕರಿಸಬೇಕು.  ಪ್ರತಿ ಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢ ವಾಗಿರುತ್ತದೆ ಎಂದರು.  ಅದರಲ್ಲೂ ಸಮು ದಾಯಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ನಿಜಕ್ಕೂ ಹರ್ಷ ದಾಯಕ ವಿಚಾರವಾಗಿದ್ದು, ಶ್ರೀಕಾಂತಣ್ಣ ಕಪ್ ಪಂದ್ಯಾವಳಿ ಸಮಯೋಚಿತವಾಗಿದೆ ಎಂದು ಹೇಳಿದರು.
ಈ ವೇಳೆ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾ ವಳಿಯ ಬಹುಮಾನ ಟ್ರೋಫಿ ಅನಾವರಣ ಗೊಳಿಸಲಾಯಿತು.  ಜೊತೆಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ 12 ತಂಡಗಳ ಸಮವಸ್ತ್ರ ಗಳನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಯೋಜಕರಾದ ವಿನಯ್ ತಾಂದ್ಲೆ ಹಾಗೂ ಮಂಜುನಾಥ್ ಬೇದ್ರೆ ಇವರು ಪಂದ್ಯಾವಳಿ ಕುರಿತು ಎಲ್ಲಾ ತಂಡಗಳ ಆಟಗಾರರಿಗೆ ಮಾಹಿತಿ ನೀಡಿದರು.  ನಗರದ ಎನ್‌ಇಎಸ್ ಮೈದಾನದಲ್ಲಿ ನಡೆಯಲಿ ರುವ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಗಳಾಗಿರುತ್ತದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ  ಟ್ರೋಫಿ. ಈ ಕ್ರಿಕೆಟ್ ಪಂದ್ಯಾವಳಿ ಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್‌ನಲ್ಲಿ ಲೈವ್ ಇರುತ್ತದೆ. ಎಂಬಿಸಿ ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀರಾಮಸೇವಾ ಭಾವಸಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಹಿರಿಯ ಪತ್ರಕರ್ತರಾದ ಗೋ.ವ. ಮೋಹನಕೃಷ್ಣ, ಕಾಂಗ್ರೆಸ್ ಮುಖಂಡರಾದ ಭಾಸ್ಕರ್, ಅನಿಲ್, ಉಮೇಶ್, ಸಂತೋಷ್, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವರಾಜ್, ಯುವ ಮುಖಂಡರಾದ  ಮಂಜು, ಹಾಲೇಶ್, ಸತ್ಯನಾರಾಯಣ, ವಿನಯ್, ಮೋಹನ್, ಅನಿಲ್, ರಂಜನ್, ದರ್ಶನ್ ಸೇರಿದಂತೆ ಹಲವರಿದ್ದರು.
ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳ ಲೀಗ್ ಹಂತದ ೬ ಓವರ್‌ಗಳ ಪಂದ್ಯಗಳಾಗಿರುತ್ತದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000  ರೂ. ಹಾಗೂ ಆಕರ್ಷಕ  ಟ್ರೋಫಿ. ಈ ಕ್ರಿಕೆಟ್ ಪಂದ್ಯಾ ವಳಿಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್‌ನಲ್ಲಿ  ನೇರ ಪ್ರಸಾರವಾಗುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST