ಗದಗ, ೯ - ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ, ಬೆಂಗಳೂರು (ರಿ) ಸಂಘದ ಗದಗ ಜಿಲ್ಲಾ ಘಟಕದ ೨೦೨೫ ರಿಂದ ೨೦೨೮ ಅವಧಿಗೆ ಗದಗ ಜಿಲ್ಲಾ ಸಂಚಾಲಕರು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಗಡಿ ಕನ್ನಡಿಗ ಪತ್ರಿಕೆಯ ವರದಿಗಾರರು ಹಾಗು ಗದಗ ಸಂಜೆ ಪತ್ರಿಕೆಯ ಸಂಪಾದಕರಾದ ರಮೇಶ ಎಂ. ಭಜಂತ್ರಿಯವರನ್ನು ರಾಜ್ಯಾಧ್ಯಕ್ಷರಾದ ಮುರುಗೇಶ ಶಿವಪೂಜೆ ಅವಿರೋಧವಾಗಿ ಆಯ್ಕೆ ಮಾಡಿದರು ನಂತರ ನೂತನ ಪದಾಧಿಕಾರಿಗಳನ್ನು ಮಾಜಿ ಜಿಲ್ಲಾ ಅಧ್ಯಕರು ರಮೇಶ ಎಮ್. ಭಜಂತ್ರಿ ನೂತನ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ ಮಾಡಿದರು
ಅವರು ಶನಿವಾರದಂದು ಪದಾಧಿಕಾರಿಗಳ ಆಯ್ಕೆ ನಂತರ ಮಾತನಾಡಿ, ಗದಗ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ಗದಗ ಸಂಜೆ ವರದಿಗಾರ ಮುತ್ತು ಗೋಸಲ, ಉಪಾಧ್ಯಕ್ಷರಾಗಿ ಮಂಜುನಾಥ ಅಚ್ಚಳ್ಳಿ ಸಮಗ್ರಪ್ರಭ ಸಂಪಾದಕರು, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಆಕಾಶ ವಾಣಿ ವರದಿಗಾರರಾದ ಶಶಿಕಾಂತ ಕುಲಕರ್ಣಿ, ಜಿಲ್ಲಾ ಖಜಾಂಚಿಯಾಗಿ ಮಂಜುನಾಥ ಕೆಂಚಗುಂಡಿ, ವಿಹಾನವಾಣಿ ವರದಿಗಾರರು, ಶಿರಹಟ್ಟಿ ತಾಲೂಕಾ ಅಧ್ಯಕ್ಷರಾಗಿ ವೀರೇಶ ಗುಗ್ಗರಿ, ರೋಣ ತಾಲೂಕಾ ಅಧ್ಯಕ್ಷರಾಗಿ ಮಂಜುನಾಥ ಹೂವಿನಹಾಳ, ವಿಶೇಷ ಆಹ್ವಾನಿತರಾಗಿ ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರಿ ಮೋತಿ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಗದಗ ಸಂಜೆ ಪತ್ರಿಕೆಯ ಸಹ ಸಂಪಾದಕ ಈರಣ್ಣ ಮಳೇಕರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಗೋವಿಂದ ವನ್ನಾಲ ಸಿಟಿ ಕೇಬಲ್ ಗದಗ ಇವರುಗಳನ್ನು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.