LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಉಡುಪಿ: ಸಿನಿಮಾ ಶೈಲಿಯ ಕಾರ್ಯಾಚರಣೆ ವೇಳೆ ಗರ್ಲ್ ಪ್ರೆಂಡ್ ಬಿಟ್ಟು ಪರಾರಿಯಾದ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌..! ಕಾರಿನಲ್ಲಿದ್ದ ಇಸಾಕ್ ನ ಗೆಳತಿಯ ಬಂಧನ

ಉಡುಪಿ: ನೆಲಮಂಗಲ ಪೊಲೀಸರಿಗೆ ದರೋಡೆ ಪ್ರಕರಣವೊಂದರಲ್ಲಿ ಬೇಕಾಗಿದ್ದ ಕುಖ್ಯಾತ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಬಂಧಿಸಲು ನಡೆದಿದ್ದ ಪೊಲೀಸರ ಚೇಸಿಂಗ್ ಬಳಿಕ ಆರೋಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಕಾರಿನಲ್ಲಿದ್ದ ಆತನ ಗೆಳತಿ ಸುಜೈನ್‌ (25) ಳನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಕೆಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಂಧಿತೆ ಇಸಾಕ್ ನ ಗೆಳತಿ ಸುಜೈನ್ ಎಂದು ಗುರುತಿಸಲಾಗಿದೆ. ಕೇರಳ ಮೂಲಜ ಸುಜೈನ್ ಹಲವು ವರ್ಷಗಳಿಂದ ಉಡುಪಿ ಯಲ್ಲೇ ನೆಲೆಸಿದ್ದಳು. ಆಕೆಯ ಖರ್ಚು ವೆಚ್ಚಗಳನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ ಎನ್ನ ಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ 2 ನೇ ಆರೋಪಿ ಇಸಾಕ್‌ ಪತ್ತೆಗಾಗಿ ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಸೋಮಶೇಖರ್‌ ಅವರು ಮಣಿ ಪಾಲಕ್ಕೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ರಸ್ತೆ ಬಳಿಯ ಅಪಾರ್ಟ್‌ ಮೆಂಟ್‌ ಒಂದರಲ್ಲಿ ವಾಸವಿರುವ ಗೆಳತಿ ಸುಜೈನ್‌ ಮನೆಗೆ ಆರೋಪಿ ಬಂದಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಸೋಮಶೇಖರ್‌ ಮತ್ತು ನಿರೀಕ್ಷಕ ನರೇಂದ್ರ ಬಾಬು ನೇತೃತ್ವದ ತಂಡ ಸುಜೈನ್‌ ಮನೆಯನ್ನು ಪತ್ತೆ ಮಾಡಿ ಆರೋಪಿ ಹೊರಬರುವುದನ್ನೇ ಕಾಯುತ್ತಿದ್ದರು. ರಾತ್ರಿ ಸುಮಾರು 8 ಗಂಟೆಗೆ ಸುಜೈನ್‌ ಹಾಗೂ ಆಕೆಯ ತಂಗಿ ಹತ್ತಿರದ ಮೊಬೈಲ್‌ ಅಂಗಡಿಗೆ ಹೋಗಿದ್ದರು.

ಈ ವೇಳೆ ನಕಲಿ ನೊಂದಣಿ ಸಂಖ್ಯೆಯಿಂದ ಥಾರ್ ನಲ್ಲಿ ಬಂದ ಆರೋಪಿ ಪೊಲೀಸರನ್ನು ನೋಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ, ಈ ವೇಳೆ ಆರೋಪಿಯ ಬೆನ್ನು ಬಿದ್ದ ಪೊಲೀಸರು ಚೇಸಿಂಗ್ ಮಾಡಿದ್ದಾರೆ. ಆದರೆ ಆರೋಪಿ ಕಾರನ್ನು ವೇಗವಾಗಿ ಚಲಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ. ಆರೋಪಿಯ ಕಾರಿನಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿ ತಲ್ವಾರು, ಕತ್ತಿ, ಮಾದಕ ವಸ್ತುಗಳು ಸಹಿತ ಸುಮಾರು 10ರಿಂದ 15 ನಿಷ್ಕ್ರಿಯ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ. ಪೊಲೀಸರು ಇವೆಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃದ್ದಾಶ್ರಮಗಳು ಜಾಸ್ತಿಯಾಗುತ್ತಿರುವುದು ಆತಂಕಕಾರಿ: ಡಾ.ಕೆ.ಶಿವಕುಮಾರ್ಶುಕ್ರವಾರದಂದು ಕುಬೇರನ ಈ ಮಂತ್ರ ಪಠಿಸಿ, ನಿಮ್ಮ ಎಲ್ಲಾ ಕಷ್ಟ, ಸಮಸ್ಯೆಗಳು ಪರಿಹಾರದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 26-12-2025.!ಇಂದಿನ ವಚನ :- --ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ಅವರದು.!ಒಡಿಶಾದಲ್ಲಿ ಭದ್ರತಾ ಪಡೆಗಳು-ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ; ಐವರು ನಕ್ಸಲರು ಹತ್ಯೆಡಿ.26ರಂದು ಉಡುಪಿಯ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆಮಾರುಕಟ್ಟೆಗೆ ಬಂದಿದೆ ನಕಲಿ ಶುಂಠಿ. ಅಸಲಿ ಅಂತಾ ಹೇಗೆ ಗುರುತಿಸುವುದು?ಚಿತ್ರದುರ್ಗ ಬಸ್‌ ದುರಂತ: ಗೋಕರ್ಣಕ್ಕೆ ಹೊರಟಿದ್ದ ಮೂವರು ಸ್ನೇಹಿತೆಯರು ಅಪಾಯದಿಂದ ಪಾರುಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಚಿತ್ರದುರ್ಗ ಭೀಕರ ಬಸ್ ಅಪಘಾತ: ಟೆಕ್ಕಿ ಯುವತಿಯರಿಬ್ಬರು ಕಣ್ಮರೆ