KLE ರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜು
ಬೆಳಗಾವಿ :ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಓರಲ್ ಮಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗವು ಇಂಡಿಯನ್ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪ್ಯಾರಾಲಜಿಸ್ಟ್ಗಳ 31 ನೇ ರಾಷ್ಟ್ರೀಯ ಸಮ್ಮೇಳನವನ್ನು ನ. 3 ರಿಂದ 5 ರ ವರೆಗೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪ್ರಾಚಾರ್ಯೆ ಡಾ. ಅಲ್ಕಾ ಕಾಳೆ ಅವರು ಶನಿವಾರ ಪತ್ರಿಗೋಷ್ಠಿಯಲ್ಲಿ ಸಮ್ಮೇಳನದ ಸಮಗ್ರ ಮಾಹಿತಿ ನೀಡಿದರು.
ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆಎಲ್ ಸಂಸ್ಥೆಯ ಕಾರಾಧ್ಯಕ್ಷರೂ ಹಾಗೂ ಕುಲಪತಿ ಡಾ. ಪ್ರಭಾಕರ ಕೋರೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಪರನ ಉಪಕುಲಪತಿ ಡಾ. ನಿತಿನ್ ಗಂಗಾಣಿ, ಸಂಸ್ಥೆಯ ನಿರ್ದೇಶಕ ಡಾ. ಎ.ಐ.ಪಾಟೀಲ ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಜಪಾನ್‌ನ ಡಾ. ಯೂಚಿ ತನಕ, ಆಮೇರಿಕೆಯ ಡಾ. ಪರ್ವೀಸ್, ಆರಾನಿ, ಮಸ್ಕತ್‌ನ ಡಾ. ಸಂಜಯ್ ಸರಾಫ್, ನಾಗಮೊರನ , ಸುಚಿತ್ರಾ ಗೋಸಾವಿ ಕೋಲ್ಕತ್ತಾದ ಡಾ.ಜಯಗೋಪಾಲ್ ಈ ಬೆಂಗಳೂರಿನ ಡಾ. ಕವಿತಾ ರಾವ್, ಓರಿಸ್ಸಾದ ಡಾ. ಜಗದೀಶ್ ರಾಜಗುರು, ಮಧುರೈನ ಡಾ ನಾರಾಯಣ ಗುರುರಾಜ್ ಹಾಗೂ ಡಾ. ಎಸ್. ಗೋವಿಂದರಾಜ್ ಕುಮಾರ್ ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಬಾಯಿಯ ಕ್ಯಾನ್ಸರ್, ತಂಬಾಕು ಸಂಬಂಧಿತ ಬಾಯಿಯ ರೋಗಗಳು ಮತ್ತು ತಲೆ ಮತ್ತು ಕತ್ತಿನ ರೋಗಶಾಸ್ತ್ರದ ವಿಷಯಗಳ ಕುರಿತು ಭಾಷಣ, ವಿಚಾರ ಸಂಕಿರಣ, ವೈಜ್ಞಾನಿಕ ಪ್ರಬಂಧ ಚರ್ಚೆ ನಡೆಸಲಾಗುತ್ತದೆ.
ಕುಲಪತಿ ಡಾ. ಪ್ರಭಾಕರ ಕೋರೆ, ಉಪಕುಲಪತಿ ಡಾ. ನಿತಿನ ಗಂಗಾನೆ, ಪಾಚಾರ್ಯ ಡಾ. ಅಲ್ಕಾ ಕಾಳೆ ಅವರ ಮಾರ್ಗದರ್ಶನದಲ್ಲಿ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ನೇಪಾಳ, ಶಾರ್ಜಾ, ಅಮೇರಿಕಾ, ಮಸ್ಕತ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದು ಸುಮಾರು 600ಕ್ಕೂ ಅಧಿಕ ದಂತವೈದ್ಯರು ಆಗಮಿಸಲಿದ್ದಾರೆ.
ಸಮ್ಮೇಳನ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಪುಣ್ಯ ಅಂಗಡಿ ಹಾಗೂ ಕೋಶಾಧಿಕಾರಿ ಡಾ.ವೀಣಾ ನಾಯ್ಕ ಅವರ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ.ದೀಪಾ ಮಾನೆ, ಡಾ.ಪುಷ್ಪಕ ಬೆಳಸ್ಥಾವರ್, ಡಾ.ಶ್ವೇತಾ ಕುಂಭೋಜಕ ಇರಲಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.