Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
India

ಜಿಯೋಪಿಸಿ ಈಗ ಎಲ್ಲರ ಕೈಗೆಟುಕುವ ರೀತಿಯಲ್ಲಿ ಲಭ್ಯ; ಕಂಪ್ಯೂಂಟಿಂಗ್ ಲೋಕದಲ್ಲಿ ಸಂಚಲನ

ಮುಂಬೈ: ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸುಧಾರಿತ ಕಂಪ್ಯೂಟಿಂಗ್ ಅನ್ನು ಹೆಚ್ಚು ಸುಲಭವಾಗಿ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ಜಿಯೋಪಿಸಿ (JioPC) ಮೂಲಕ ಜಿಯೋ ಇನ್ನಷ್ಟು ಬಲಪಡಿಸಿದೆ. ಜಿಯೋಪಿಸಿ ಒಂದು "ಕಂಪ್ಯೂಟರ್-ಆ್ಯಸ್-ಎ-ಸಬ್‌ಸ್ಕ್ರಿಪ್ಶನ್" ಸೇವೆ ಆಗಿದ್ದು, ಹೊಸ ಕಂಪ್ಯೂಟರ್‌ಗೆ ಹಣ ಹೂಡದೆಯೇ ಶಕ್ತಿಶಾಲಿ, ಕ್ಲೌಡ್ ಆಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸುತ್ತದೆ.

ಜಿಯೋಪಿಸಿ ಬಳಕೆದಾರರಿಗೆ ಕ್ಲೌಡ್ ಮೂಲಕ ಆಧುನಿಕ ಕಂಪ್ಯೂಟಿಂಗ್ ಪರಿಸರವನ್ನು ಬಳಸಲು ಅವಕಾಶ ನೀಡುತ್ತದೆ ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಇದನ್ನು ಕಾನ್ಫಿಗರ್ ಮಾಡಬಹುದು. ಇದು ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನ ಆಯುಷ್ಯವನ್ನು ಹೆಚ್ಚಿಸಬಹುದು, ಜಿಯೋ ಸೆಟ್-ಟಾಪ್ ಬಾಕ್ಸ್ ಮೂಲಕ ಮಾನಿಟರ್ ಅನ್ನು ಪಿಸಿಯಾಗಿ (ಪರ್ಸನಲ್ ಕಂಪ್ಯೂಟರ್) ಪರಿವರ್ತಿಸಬಹುದು, ಅಥವಾ ವೆಬ್ ಬ್ರೌಸರ್ ಮೂಲಕ ಸಂಪೂರ್ಣ ಕಂಪ್ಯೂಟಿಂಗ್ ಪರಿಸರಕ್ಕೆ ಪ್ರವೇಶ ಒದಗಿಸಬಹುದು. 

ಇದು ಕಂಪ್ಯೂಟಿಂಗ್ ಅನುಭವವನ್ನು ಭೌತಿಕ ಸಾಧನದಿಂದ ಬೇರ್ಪಡಿಸುವುದರಿಂದ, ಬಳಕೆದಾರರು ತಮ್ಮ ಜಿಯೋಪಿಸಿ ಪರಿಸರವನ್ನು ವಿವಿಧ ಸ್ಕ್ರೀನ್ ಗಳು ಮತ್ತು ಸಾಧನಗಳಲ್ಲಿ ಬಳಸಬಹುದು. ಜಿಯೋಪಿಸಿ ಯಾವುದೇ ನಿರ್ದಿಷ್ಟ ಸಾಧನಕ್ಕೆ ಸೀಮಿತವಲ್ಲದ ಕಾರಣ, ಬೇರೆ ಬೇರೆ ಸ್ಥಳಗಳು ಅಥವಾ ಸಾಧನಗಳನ್ನು ಬಳಸುವ ವಿದ್ಯಾರ್ಥಿಗಳು ಮತ್ತು ಇತರ ಬಳಕೆದಾರರಿಗೆ ಇದು ಅನುಕೂಲಕರವಾಗಿದೆ. ಖಾತೆಯನ್ನು ಈಗಿರುವ ಕಂಪ್ಯೂಟರ್, ಜಿಯೋ ಸೆಟ್-ಟಾಪ್ ಬಾಕ್ಸ್‌ಗೆ ಸಂಪರ್ಕಿಸಿದ ಟೆಲಿವಿಷನ್ ಅಥವಾ ಬೇರೊಂದು ಮಾನಿಟರ್‌ನಿಂದ ಪ್ರವೇಶಿಸಬಹುದು.

ಮುಖ್ಯವಾಗಿ, ಜಿಯೋಪಿಸಿ ಕೇವಲ ಜಿಯೋ ಬಳಕೆದಾರರಿಗೆ ಮಾತ್ರ ಸೀಮಿತವಲ್ಲ. ಜಿಯೋ ಅಲ್ಲದ ಬಳಕೆದಾರರು ಸಕ್ರಿಯ ಜಿಯೋಪಿಸಿ ಸಬ್ ಸ್ಕ್ರಿಪ್ಷನ್ ಹೊಂದಿದ್ದರೆ, ಯಾವುದೇ ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸಂಪರ್ಕದ ಮೂಲಕ ಬ್ರೌಸರ್‌ನಲ್ಲಿ ಜಿಯೋಪಿಸಿ ಬಳಸಬಹುದು.

ವಿದ್ಯಾರ್ಥಿಗಳಿಗೆ, ಹೈಬ್ರಿಡ್ ತರಗತಿಗಳು ಮತ್ತು ಶೈಕ್ಷಣಿಕ ಅಪ್ಲಿಕೇಷನ್‌ಗಳಿಂದ ಹಿಡಿದು ಕೋಡಿಂಗ್, ವಿನ್ಯಾಸ, ಸಂಶೋಧನೆ ಮತ್ತು ಜನರೇಟಿವ್ ಎಐ ವರೆಗಿನ ಎಲ್ಲದಕ್ಕೂ ಬೇಕಾದ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಜಿಯೋಪಿಸಿ ಒದಗಿಸಬಲ್ಲದು. ಶೈಕ್ಷಣಿಕ ಕೆಲಸದ ಹೊರೆ ಹೆಚ್ಚೆಚ್ಚು ತಂತ್ರಜ್ಞಾನ-ಕೇಂದ್ರಿತವಾಗುತ್ತಿರುವಾಗ, ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಅನ್ನು ಬದಲಾಯಿಸದೆಯೇ ಹೆಚ್ಚುವರಿ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಪಡೆಯಲು ಜಿಯೋಪಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ. 

ಈ ಸೇವೆಯನ್ನು ಕಾನ್ಫಿಗರ್ ಮಾಡಬಹುದಾದ ಕಂಪ್ಯೂಟಿಂಗ್ ಮಾದರಿಯ ಆಧಾರದ ಮೇಲೆ ರೂಪಿಸಲಾಗಿದ್ದು, ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೊಡ್ಡ ಮೊತ್ತದ ಮುಂಗಡ ಹೂಡಿಕೆ ಮಾಡುವ ಬದಲು, ಬಳಕೆದಾರರು ಚಂದಾ ಆಧಾರಿತ ಯೋಜನೆಗಳ ಮೂಲಕ ವಿಶ್ವಾಸಾರ್ಹ ಕ್ಲೌಡ್ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಪಡೆಯಬಹುದು. ಈ "ಬಳಸಿದಷ್ಟು ಪಾವತಿಸಿ" ವಿಧಾನವು ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಹೆಚ್ಚಿನ ಹೊಂದಾಣಿಕೆಯನ್ನು ನೀಡುತ್ತದೆ.

ಮಾನ್ಯತೆ ಅವಧಿ --- JioPC (8GB RAM / 500GB ಸ್ಟೋರೇಜ್) --- JioPC Ultra (16GB RAM / 1TB ಸ್ಟೋರೇಜ್)
2 ತಿಂಗಳು --- ₹1,000 --- ₹1,200
5 ತಿಂಗಳು ---₹2,000 ---    ₹2,500
10+2 ತಿಂಗಳು --- ₹4,000 --- ₹5,000

ಜಿಯೋಹೋಮ್ ಗ್ರಾಹಕರಿಗೆ ಈ ಕೊಡುಗೆಯೊಂದಿಗೆ ಹೆಚ್ಚುವರಿ ಪ್ರಯೋಜನವೂ ಇದೆ. ತಿಂಗಳಿಗೆ ₹100 ಮೌಲ್ಯದ ಜಿಯೋ ಹೋಮ್ ವೋಚರ್ ಅನ್ನು ಬ್ರಾಡ್‌ಬ್ಯಾಂಡ್ ಬಿಲ್‌ಗೆ ಬಳಸಿಕೊಳ್ಳಬಹುದು, ಇದರಿಂದ ಅರ್ಹ ಬಳಕೆದಾರರಿಗೆ ಜಿಯೋಪಿಸಿ ಮಾಸಿಕ ವೆಚ್ಚ ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

ಜಿಯೋಪಿಸಿ ಉಬುಂಟು (ಲಿನಕ್ಸ್) ಇಂಟರ್ಫೇಸ್, ಲಿಬ್ರೆ ಆಫೀಸ್ ಮತ್ತು ಮೈಕ್ರೋಸಾಫ್ಟ್ 365 ನಂತಹ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ಬಳಸಲು ವೆಬ್ ಬ್ರೌಸರ್‌ಗಳೊಂದಿಗೆ ಬರುತ್ತದೆ. ಇದು ಅಡೋಬ್ ಎಕ್ಸ್‌ಪ್ರೆಸ್‌ನಂತಹ ಸಾಧನಗಳನ್ನೂ ಬೆಂಬಲಿಸುತ್ತದೆ. ಫೈಲ್‌ಗಳನ್ನು ಸಾಧನದಲ್ಲೇ ಸಂಗ್ರಹಿಸುವ ಸಾಂಪ್ರದಾಯಿಕ ಪಿಸಿಯಂತಲ್ಲದೆ, ಜಿಯೋಪಿಸಿ ಡೇಟಾವನ್ನು ವಿಪತ್ತು ಚೇತರಿಕೆ (ಡಿಸಾಸ್ಟರ್ ರಿಕವರಿ) ವ್ಯವಸ್ಥೆಯುಳ್ಳ ಎಂಟರ್‌ಪ್ರೈಸ್-ದರ್ಜೆಯ ಕ್ಲೌಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸುತ್ತದೆ.

ಹೆಚ್ಚು ತಿಳಿಯಲು ಅಥವಾ ಸಬ್ ಸ್ಕ್ರಿಪ್ಷನ್ ಗಾಗಿ ಭೇಟಿ ನೀಡಿ: https://www.jio.com/jiopc/pwa/

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!