LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕ್ಲೀನ್ ಶೇವ್ ಮತ್ತು ಬಿಯರ್ಡ್ ಲುಕ್ ಬಗ್ಗೆ ಸಂಶೋಧನೆಯ ಮಾಹಿತಿ..! ಹುಡುಗಿಯರು ಯಾರ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ..??

ಜಗತ್ತಿನ ಆರಂಭದ ಕಾಲಘಟ್ಟದಲ್ಲಿ ಹೆಚ್ಚಿನ ಪುರುಷರು ಗಡ್ಡ ಬಿಟ್ಟುಕೊಂಡೇ ಇರುತ್ತಿದ್ದರು. ಕಾಲ ಬದಲಾದಂತೆ, ಪುರುಷರು ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಳ್ಳೊದಕ್ಕೆ ಆರಂಭಿಸಿದರು. ಇದೀಗ ಮತ್ತೊಮ್ಮೆ ಗಡ್ಡ ಇಟ್ಟುಕೊಳ್ಳುವ ಟ್ರೆಂಡ್ ಪುರುಷರಲ್ಲಿ ಹೆಚ್ಚಾಗುತ್ತಿದೆ. ಆದರೂ ಹೆಚ್ಚಿನ ಮಂದಿಗೆ ತಾವು, ಗಡ್ಡ ಇಟ್ಟುಕೊಳ್ಳಬೇಕೇ ಅಥವಾ ಕ್ಲೀನ್ ಶೇವ್ ಮಾಡಬೇಕೇ ಅನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹಾಲಿವುಡ್ ಅಥವಾ ಬಾಲಿವುಡ್ ಹೀರೋಗಳು ಹೆಚ್ಚಿನವರು ಕ್ಲೀನ್ ಶೇವ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಸ್ಟೈಲ್ ನೋಡಿದ ಬಳಿಕ ಗಡ್ಡ ಬಿಡುವ ಕ್ರೇಜ್ ಪುರುಷರಲ್ಲಿ ಹೆಚ್ಚಾಗಿದೆ. ಅಂದಹಾಗೆ, ಗಡ್ಡ ಬಿಡುವುದರಿಂದ ಹುಡುಗರು ಹ್ಯಾಡ್ಸಮ್ ಆಗಿ ಕಾಣಿಸ್ತಾರೆ, ಅದಕ್ಕಾಗಿಯೇ ಹುಡುಗಿಯರು ಅವರನ್ನು ಇಷ್ಟಪಡುತ್ತಾರೆ ಎಂದು ನೀವು ಅಂದುಕೊಂಡಿದ್ದೀರಾ?. ಇಲ್ಲ ಹಾಗೆಂದು ಅಂದಿಕೊಂಡಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆ.  ಏಕೆಂದರೆ ಕ್ಲೀನ್ ಶೇವ್ (clean shave) ಮತ್ತು ಬಿಯರ್ಡ್ ಲುಕ್ ಬಗ್ಗೆ ಸಂಶೋಧನೆಯೊಂದು ಮಾಹಿತಿ ನೀಡಿದೆ. ಅದೇನು ಅನ್ನೋದನ್ನು ನೋಡೋಣ.

ಸಂಶೋಧನೆ ಏನು ಹೇಳುತ್ತದೆ?

ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗಡ್ಡವಿರುವರು ಪುರುಷರು ಹೊಸ ಸಂಗಾತಿಗಳನ್ನು ಹುಡುಕುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮನ್ನು ಪ್ರೀತಿಸುವ, ತಮ್ಮ ಜೊತೆಗೆ ಇರುವಂತಹ ಸಂಗಾತಿಯೊಂದಿಗೆ ಜೀವನ ಕಳೆಯುವುದಕ್ಕೆ ಇಷ್ಟಪಡುತ್ತಾರೆ. ಅದೇ ಕ್ಲೀನ್ ಶೇವ್ ಮಾಡಿರುವ ಪುರುಷರು ಹೊಸ ಸಂಗಾತಿಯನ್ನು ಹುಡುಕುವುದಕ್ಕೆ ಇಷ್ಟ ಪಡುತ್ತಾರಂತೆ. ಅದಕ್ಕಾಗಿಯೇ ಹುಡುಗಿಯರು ಕ್ಲೀನ್ ಶೇವ್‌ ಇರುವ ಪುರುಷರ ಬದಲು ಬಿಯರ್ಡ್ ಲುಕ್ ಹೊಂದಿರುವ ಪುರುಷರಲ್ಲಿ ಹೆಚ್ಚು ನಂಬಿಕೆ ಹೊಂದಿದ್ದಾರೆ.

ಎಷ್ಟು ಜನರನ್ನು ಅಧ್ಯಯನ ಮಾಡಲಾಯಿತು?

ಇದಕ್ಕಾಗಿ 18 ರಿಂದ 40 ವರ್ಷದೊಳಗಿನ 414 ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ "ಮುಖದ ಕೂದಲು ಬೆಳವಣಿಗೆಯ ಸ್ಫೂರ್ತಿ" ಯನ್ನು ಕಂಡುಹಿಡಿಯಲು ಪ್ರಯತ್ನಿಸಿತು. ಮುಖದ ಮೇಲೆ ಹೆಚ್ಚು ಕೂದಲು ಹೊಂದಿರುವ ಪುರುಷರು ರೊಮ್ಯಾನ್ಸ್ ಮತ್ತು ಫ್ಯಾಮಿಲಿ ಎರಡೂ ಕಡೆ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ತಮ್ಮ ಕುಟುಂಬವನ್ನು ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದುಕೊಳ್ಳುತ್ತಾರೆ. ಅಲ್ಲದೇ ಮುಖದ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಮೆಂಟೈನ್ ಮಾಡಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಪ್ರತಿದಿನ ಮುಖದ ಕೂದಲಿನ ಆರೈಕೆಗೆ ಸಮಯ, ಪ್ರಯತ್ನ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ಅದಕ್ಕೆಲ್ಲಾ ಸಮಯ ಕೊಡುತ್ತಾರೆ ಅಂದ್ರೆ, ಅವರಿಗೆ ಜವಾಬ್ದಾರಿ ಬಗ್ಗೆಯೂ ಹೆಚ್ಚಿನ ಅರಿವು ಇರುತ್ತೆ. ಹಾಗಾಗಿಯೇ ಬಿಯರ್ಡ್ ಮೆನ್ ತುಂಬಾನೆ ಸ್ಪೆಷಲ್.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST