Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

GOOD NEWS: BMTC ನೌಕರರಿಗೆ ಸಿಹಿಸುದ್ದಿ: ಅಪಘಾತ ವಿಮಾ ಪರಿಹಾರ ₹1 ಕೋಟಿಗೆ ಹೆಚ್ಚಳ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಮಹತ್ವದ ಹೆಜ್ಜೆಯಿಟ್ಟಿದ್ದು, ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ಮೊತ್ತವನ್ನು ಭರ್ಜರಿ ₹1 ಕೋಟಿಗೆ ಹೆಚ್ಚಿಸಿದೆ. ಈ ಮೂಲಕ ನೌಕರರಿಗೆ ಸಿಹಿಸುದ್ದಿ ನೀಡಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಈ ಪರಿಷ್ಕೃತ ಒಡಂಬಡಿಕೆ ಜಾರಿಗೆ ಬಂದಿದ್ದು, ಸಂಸ್ಥೆಯ ಸಾವಿರಾರು ಉದ್ಯೋಗಿಗಳಿಗೆ ಇದು ಆರ್ಥಿಕ ರಕ್ಷಣೆ ಒದಗಿಸಲಿದೆ.

​ಮೂರು ವರ್ಷಗಳ ನೂತನ ಒಪ್ಪಂದಕ್ಕೆ ಸಹಿ

ಸಂಸ್ಥೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 2023ರಲ್ಲಿ ಮಾಡಿಕೊಂಡಿದ್ದ ಮೂರು ವರ್ಷಗಳ ಒಡಂಬಡಿಕೆಯನ್ನು ಮುಂದುವರಿಸಿ, ನೂತನ ಒಪ್ಪಂದಕ್ಕೆ ಅಕ್ಟೋಬರ್ 8, 2026ರಂದು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಹಿಂದೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ನಾಮನಿರ್ದೇಶಿತರಿಗೆ ₹50 ಲಕ್ಷ ವಿಮಾ ಮೊತ್ತ ನೀಡಲಾಗುತ್ತಿತ್ತು. ಇನ್ಮುಂದೆ ಈ ಪರಿಹಾರ ದುಪ್ಪಟ್ಟಾಗಲಿದ್ದು, ₹1 ಕೋಟಿಗೆ ಏರಿಕೆಯಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ (ಭಾ.ಆ.ಸೇ.) ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಎಚ್.ಟಿ. ವಾಸಪ್ಪ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್‌ ಅಹದ್‌ (ಭಾ.ಪೊ.ಸೇ.), ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ್, ಮುಖ್ಯ ಲೆಕ್ಕಾಧಿಕಾರಿ ಮಂಜುಶ್ರೀ ಆರ್. ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

​ಅಪಘಾತ ಮತ್ತು ನೈಸರ್ಗಿಕ ಸಾವಿಗೆ ಪರಿಹಾರ ಮೊತ್ತ

ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ಸಿಬ್ಬಂದಿ ಕರ್ತವ್ಯದ ವೇಳೆ ಅಥವಾ ವೈಯಕ್ತಿಕ ಅಪಘಾತಗಳಿಂದ ಮೃತಪಟ್ಟರೆ, ಅವರ ನಾಮನಿರ್ದೇಶಿತರಿಗೆ ಗರಿಷ್ಠ ₹1 ಕೋಟಿ ವಿಮಾ ಪರಿಹಾರ ಲಭ್ಯವಾಗಲಿದೆ. ಒಂದು ವೇಳೆ ನೌಕರರು ನೈಸರ್ಗಿಕ ಅಥವಾ ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ಮಾಸಿಕ ವೇತನ ₹25,000/-ಕ್ಕಿಂತ ಕಡಿಮೆ ಇರುವವರ ಕುಟುಂಬಕ್ಕೆ ₹5 ಲಕ್ಷ ಹಾಗೂ ₹25,000/-ಕ್ಕಿಂತ ಹೆಚ್ಚು ವೇತನ ಪಡೆಯುವವರ ಕುಟುಂಬಕ್ಕೆ ₹10 ಲಕ್ಷ ಆರ್ಥಿಕ ನೆರವು ಸಿಗಲಿದೆ.

​ಶಾಶ್ವತ ಅಂಗವಿಕಲತೆ ಹಾಗೂ ಮೆಡಿಕ್ಲೈಮ್ ನೆರವು

ದುರದೃಷ್ಟವಶಾತ್ ಸಿಬ್ಬಂದಿ ಶಾಶ್ವತ ಭಾಗಶಃ ಅಥವಾ ಶಾಶ್ವತ ಸಂಪೂರ್ಣ ಅಂಗವಿಕಲತೆಗೆ ಒಳಗಾದ ಸಂದರ್ಭದಲ್ಲೂ ಈ ಯೋಜನೆ ಗರಿಷ್ಠ ರಕ್ಷಣೆ ನೀಡಲಿದೆ. ಮಾಸಿಕ ₹25,000/-ಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ₹1 ಕೋಟಿ ವಿಮೆ ಜತೆಗೆ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ₹4 ಲಕ್ಷ ಹೆಚ್ಚುವರಿ ಪರಿಹಾರ ದೊರೆಯಲಿದೆ. ಅದೇ ರೀತಿ ₹25,000/-ಕ್ಕಿಂತ ಹೆಚ್ಚು ವೇತನವಿರುವ ಸಿಬ್ಬಂದಿಗೆ ₹1 ಕೋಟಿ ವಿಮೆ ಜತೆಗೆ ರೂಪೇ ಕಾರ್ಡ್ ಮೂಲಕ ₹15 ಲಕ್ಷ ನೆರವು ಸಿಗಲಿದೆ. ಇದರೊಂದಿಗೆ, ನೌಕರರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ ವಾರ್ಷಿಕ ಗರಿಷ್ಠ ₹30,000/- ವರೆಗೆ ಮೆಡಿಕ್ಲೈಮ್ ನೆರವು ಕೂಡ ಒದಗಿಸಲಾಗುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!