LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಗುಡ್ ನ್ಯೂಸ್!

ನವದೆಹಲಿ : ಪ್ರತಿದಿನ ಭಾರತೀಯ ರೈಲ್ವೆಯಲ್ಲಿ 2 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಸುಮಾರು 20% ಮಹಿಳೆಯರು ಸೇರಿದ್ದಾರೆ. ತಮ್ಮ ಆರೋಗ್ಯ, ವಯಸ್ಸು ಅಥವಾ ಅನುಕೂಲತೆಗಾಗಿ ಕೆಳಗಿನ ಬರ್ತ್ ಬಯಸುವ ಪ್ರಯಾಣಿಕ ಮಹಿಳೆಯರಿಗೆ ಮುಂಚೆ ಈ ಸೌಲಭ್ಯ ಲಭ್ಯವಿಲ್ಲದಿದ್ದುದರಿಂದ ತೊಂದರೆ ಉಂಟಾಗುತ್ತಿತ್ತು. ಇದನ್ನು ಕೇಂದ್ರ ಸರ್ಕಾರ ಈಗ ಪರಿಹರಿಸಿದೆ.

ರಾಜ್ಯಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹಿಳೆಯರಿಗೆ ಕೆಳಗಿನ ಬರ್ತ್ ಸೌಲಭ್ಯವನ್ನು ಹೆಚ್ಚಿಸುವ ಮಹತ್ವದ ಘೋಷಣೆ ಮಾಡಿದರು. ಅವರು 45 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಕೆಳಗಿನ ಬರ್ತ್ ನೀಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಇಚ್ಛಿತ ಬರ್ತ್ ಸಿಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

ಕೆಳ ಬರ್ತ್ ಮೀಸಲಾತಿ - ಹೊಸ ಕ್ರಮಗಳು :
ಸ್ಲೀಪರ್ ಕ್ಲಾಸ್ : ಪ್ರತಿ ಕಂಪಾರ್ಟ್‌ಮೆಂಟ್‌ಗೆ 7 ಕೆಳ ಬರ್ತ್ ಮೀಸಲಾತಿ
3AC : 4–5 ಕೆಳ ಬರ್ತ್
2AC : 3–4 ಕೆಳ ಬರ್ತ್
ಈ ಕ್ರಮಗಳಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಕೆಳ ಬರ್ತ್ ಪಡೆಯಲು ಆದ್ಯತೆ ದೊರೆಯಲಿದೆ.

ಅಂಗವಿಕಲರಿಗೂ ವಿಶೇಷ ಸೌಲಭ್ಯ :
ಸ್ಲೀಪರ್ ಹಾಗೂ 3AC/3E: ತಲಾ 4 ಬರ್ತ್ ಮೀಸಲಾತಿ (2 ಕೆಳ, 2 ಮಧ್ಯಮ)
2S / AC ಚೇರ್ ಕಾರ್ : 4 ವಿಶೇಷ ಸೀಟುಗಳು

ರೈಲಿನಲ್ಲಿ ಯಾವುದೇ ಖಾಲಿ ಬರ್ತ್ ಇದ್ದರೆ, ಅದನ್ನು ಹಿರಿಯ ನಾಗರಿಕರು, ಅಂಗವಿಕಲರು ಅಥವಾ ಗರ್ಭಿಣಿಯರಿಗೆ ಆದ್ಯತೆಯ ಮೇರೆಗೆ ಹಂಚಲಾಗುವುದು. “ಪ್ರಯಾಣಿಕರ ಸುರಕ್ಷತೆ, ಅನುಭವ ಮತ್ತು ಸುಗಮ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮುಖ್ಯ ಬದಲಾವಣೆಗಳನ್ನು ಜಾರಿಗೊಳಿಸಿದೆ. ಇದರಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ಸುಗಮವಾಗಲಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026