LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂದಿನಿಂದ ಮತ್ತಷ್ಟು ವೇಗ ಪಡೆಯಲಿದೆ ಗೂಗಲ್‌ ಪೇ, ಫೋನ್‌ ಪೇ

ನವದೆಹಲಿ : ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇನಲ್ಲಿ ವೇಗವಾಗಿ ಹಣವನ್ನು ಕಳುಹಿಸಬಹುದು. UPI ಪಾವತಿಯು ಪೂರ್ಣಗೊಳ್ಳಲು ಕೇವಲ 10- 15 ಸೆಕೆಂಡುಗಳು ಮಾತ್ರ ತೆಗೆದುಕೊಳ್ಳುತ್ತದೆ. ಇದು PhonePe, Google Pay, Paytm ಮತ್ತು ಇತರ UPI ಪ್ಲಾಟ್‌ಫಾರ್ಮ್‌ಗಳಂತಹ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತದೆ.

UPI ವಹಿವಾಟುಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಸಿಸ್ಟಮ್- ಅಪ್‌ಗ್ರೇಡ್ ಮಾಡಲು ಆರಂಭಿಸಿದೆ. ಏಪ್ರಿಲ್ 26, 2025 ರ ಸುತ್ತೋಲೆಯ ಪ್ರಕಾರ, ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು PhonePe, Google Pay ಮತ್ತು Paytm ನಂತಹ ಪಾವತಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಸಿಸ್ಟಮ್‌ಗಳನ್ನು ಅಪ್‌ಗ್ರೇಡ್ ಮಾಡುವಂತೆ ಸೂಚಿಸಿತ್ತು.

ಹಣ ವರ್ಗಾವಣೆ, ಪರಿಶೀಲನೆಗಳು ಮತ್ತು ರಿವರ್ಸಲ್‌ಗಳು ಸೇರಿದಂತೆ ಹಿಂದೆ ಸುಮಾರು 30 ಸೆಕೆಂಡು ತೆಗೆದುಕೊಳ್ಳುತ್ತಿದ್ದ ವಹಿವಾಟುಗಳನ್ನು ಈಗ 10 ರಿಂದ 15 ಸೆಕೆಂಡುಗಳ ಒಳಗೆ ಪೂರ್ಣ ಮಾಡಬಹುದು.

ಇದರ ಜೊತೆ ಮೊಬೈಲ್ ಸಂಖ್ಯೆಗಳು ಅಥವಾ UPI ಐಡಿಗಳಂತಹ UPI ಹ್ಯಾಂಡಲ್‌ಗಳನ್ನು 10 ಸೆಕೆಂಡ್‌ಗಳಲ್ಲಿ ಪರಿಶೀಲಿಸಬಹುದು. ಇದು ಹೇಗೆಂದರೆ ನೀವು ಯಾವುದಾದರೂ ಅಂಗಡಿ ಹೋಗಿ ಪಾವತಿ ಮಾಡಬೇಕಾದರೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತೀರಿ. ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು 30 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ 10 ಸೆಕೆಂಡ್‌ನಲ್ಲಿ ಸ್ಕ್ಯಾನ್‌ ಮಾಡಬಹುದು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026