Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜನರ ಮನೆ ಬಾಗಿಲಿಗೆ ಬಂತು ಸರ್ಕಾರ: ಡಿ.ಕೆ. ಶಿವಕುಮಾರ್‌ರಿಂದ ಅಹವಾಲು ಸ್ವೀಕಾರ

ಚಂದ್ರವಳ್ಳಿ ನ್ಯೂಸ್, ​ಪಿರಿಯಾಪಟ್ಟಣ:
 "ಜನರ ದನಿಗೆ ಸ್ಪಂದನೆ - ಸುಶಾಸನದ ವಂದನೆ! ಸಮಸ್ಯೆ ನಿಮ್ಮದು - ಪರಿಹಾರ ನಮ್ಮದು!" ಎಂಬ ಘೋಷವಾಕ್ಯದೊಂದಿಗೆ ಪ್ರಜಾಸೇವಾ ಇಲಾಖೆ ಆಯೋಜಿಸಿದ್ದ
'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮವನ್ನು ಸಿಎಂ ಡಿ. ಕೆ. ಶಿವಕುಮಾರ್ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಉದ್ಘಾಟಿಸಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಂದ ಸ್ವತಃ ಅಹವಾಲುಗಳನ್ನು ಸ್ವೀಕರಿಸಿದ ಅವರು, ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಆಲಿಸಿ, ನಿಗದಿಪಡಿಸಿದ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಒದಗಿಸಲು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

​ಈ ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಶಾಸಕಾಂಗ ಹಾಗೂ ಪರಿಷತ್ ಸದಸ್ಯರುಗಳಾದ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಜಿ. ಸಿ. ಚಂದ್ರಶೇಖರ್, ಶಾಸಕರಾದ ಕೆ. ವೆಂಕಟೇಶ್, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಮತ್ತು ಡಾ. ಕೆ. ಶಿವಕುಮಾರ್ ಉಪಸ್ಥಿತರಿದ್ದರು.

​ಅಲ್ಲದೆ, ಮೈಲಾಕ್ ಅಧ್ಯಕ್ಷ ಎಚ್. ಡಿ. ಗಣೇಶ್, ಅಂಬೇಡ್ಕರ್ ನಿಗಮದ ಅಧ್ಯಕ್ಷ ಸಿ. ನರೇಂದ್ರ, ಭೋವಿ ನಿಗಮದ ಅಧ್ಯಕ್ಷ ರಾಮಪ್ಪ, ತಾಲ್ಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದ ದಸರಾ: ಶರಣ ಸಂಸ್ಕೃತಿಯ ಜನೋತ್ಸವ:ಮಂಗಳೂರಿನ ದಸರಾ; ಶಾರದಾ ಮಹೋತ್ಸವದಿಂದ ಜನೋತ್ಸವದವರೆಗೆ:… ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ-ರಮೇಶ್ ಬಾಬುನವರಾತ್ರಿ ಪ್ರಯುಕ್ತ ಅಂಭಾ ಭವಾನಿ ದೇವಿಗೆ ವಿಶೇಷ ಅಲಂಕಾರಹಾಡುಹಗಲೆ ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳಛಲವಾದಿ ಗುರುಪೀಠದಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಆರೋಗ್ಯ ತಪಾಸಣೆ ಶಿಬಿರ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್ ಎಸ್.ಯಾದವ್ ಮತ ನೀಡಲು ಮನವಿಸಂವಿಧಾನದ ಮೌಲ್ಯ ಎತ್ತಿಹಿಡಿಯಲು ಸಿಜೆಐ ಸೂರ್ಯಕಾಂತ್ ಹಾಗೂ ಡಿಕೆಶಿ ಕರೆಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್' ಸಂಚಿಗೆ ರಕ್ತ ಕುದಿಯುತ್ತಿಲ್ಲವೇ?: ಹೆಚ್.ಡಿ. ಕುಮಾರಸ್ವಾಮಿ