LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಾಂಗ್ರೆಸ್ ಬುಡುಬುಡಿಕೆ ಸರ್ಕಾರ.! ಸಂಸದರಾದ ಗೋವಿಂದ ಕಾರಜೋಳ

 

ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ, ಈಗ ಇರುವುದು ಕಾಂಗ್ರೆಸ್ ಬುಡುಬುಡಿಕೆ ಸರ್ಕಾರವಾಗಿದೆ, ಇದು ಹಗರಣಗಳ ಸರ್ಕಾರವಾಗಿದೆ. ಪ್ರತಿ ನಿತ್ಯ ಒಂದೊಂದು ಹಗರಣಗಳು ಇವೆ. ಹಗರಣಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರು ಮುಖ್ಯಮಂತ್ರಿಗಳನ್ನು ಬದಲಾಯಿಸುವ ಅನಿವಾರ್ಯತೆ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಇದು ಸೂರ್ಯ ಚಂದ್ರ ಹುಟ್ಟಿದಷ್ಠೇ ಸತ್ಯ, ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿ ಜೈಲು ವಾಸವನ್ನು ಅನುಭವಿಸಿ ಈಗ ಬೇಲೆ ಮೇಲೆ ಹೊರಗೆ ಬಂದಿರುವ ನಾಗೇಂದ್ರರವರಿಗೆ ಹೆದರಿ ಅವರನ್ನು ಮತ್ತೇ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದಾರೆ ವಾಲ್ಮೀಕಿ ನಿಗಮದ ಹಣ ಲೋಕಸಭೆಯ ಚುನಾವಣೆಯಲ್ಲಿ ಬಳಕೆಯಾಗಿದೆ ಎಂದು ವರದಿಯಲ್ಲಿ ಬಂದಿದೆ ಇದಕ್ಕೆ ಹೆದರಿ ಕಾಂಗ್ರೇಸ್ ನಾಯಕರು ಅವರನ್ನು ವಾಪಾಸ್ಸ್ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಆನಂತ್ ಕುಮಾರ್ ಹೆಗಡೆಯವರು ಒಂದು ಭಾಷಣದಲ್ಲಿ ಏನೋ ಮಾತನಾಡಿದ್ದರು ಅದನ್ನು ಕಾಂಗ್ರೆಸ್ನವರು ಅದನ್ನು ಹಿಡಿದುಕೊಂಡು ದುರುಪಯೋಗ ಮಾಡಿಕೊಂಡು ದೇಶದ ತುಂಬಾ ಹರಡಿದ್ದಾರೆ ಸಂಘ ಪರಿವಾರದವರು ಬಿಜೆಪಿಯವರು ಸಂವಿಧಾನವನ್ನು ಬದಲು ಮಾಡುತ್ತಾರೆ ಎಂದು ಗುಲ್ಲು ಎಬ್ಬಿಸಿ ಚುನಾವಣೆಯಲ್ಲಿ ಎಸ್.ಸಿ.ಎಸ್.ಟಿ. ಓಬಿಸಿ ಯವರ ಮತವನ್ನು ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಂಘ ಪರಿವಾರ ಮತ್ತು ಬಿಜೆಪಿ ಅವರನ್ನು ಬದಲಾವಣೆ ಮಾಡಿದೆ.

ಯಡೆಯೂರಪ್ಪರವರ 12 ಕೋಟಿ ಲಂಚವನ್ನು ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಇದರ ಬಗ್ಗೆ ಈಗಾಗಲೇ ತನಿಖೆಯಾಗಿರುವ ವಿಷಯವನ್ನು ಹಿಡಿದುಕೊಂಡು ಕಾಂಗ್ರೆಸ್ ಅದನ್ನು ತೆರೆಯುವ ಕಾರ್ಯವನ್ನು ಮಾಡುತ್ತಿದೆ, ಇದರ ಬಗ್ಗೆ ಪ್ರಾಸಿಕ್ಯೋಷನ್ಗೆ ಕಳುಹಿಸಿದಾಗ ಹಿಂದಿನ ರಾಜ್ಯಪಾಲರು ಇದನ್ನು ತಿರಸ್ಕಾರ ಮಾಡಿದ್ದಾರೆ. ಇದನ್ನು ಮತ್ತೇ ಓಪನ್ ಮಾಡುವುದು ಎಂದರೆ ದ್ವೇಷದ ರಾಜಕಾರಣವಾಗಿದೆ. ಕಾಂಗ್ರೆಸ್ನವರು ದ್ವೇಷವನ್ನು ಸಾಧಿಸುತ್ತಿದ್ದಾರೆ. ಕಾಂಗ್ರೆಸ್ ಹಲವಾರು ಹಗರಣದಲ್ಲಿ ಸಿಲುಕಿ ಈಗ ಬೇರೆಯವರ ಕಡೆಗೆ ಬೊಟ್ಟು ಮಾಡುತ್ತಿರುವ ಕೆಲಸವನ್ನು ಮಾಡುತ್ತಿದೆ ಇದು ದುರುದ್ದೇಶದಿಂದ ಮಾಡುವ ಆರೋಪವಾಗಿದೆ.

ಭದ್ರಾವ ಮೇಲ್ದೆಂಡೆ ಯೋಜನೆಗೆ 5300 ಕೋಟಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಪತ್ರವನ್ನು ಬರೆಯುವುದರಲ್ಲಿ ತಪ್ಪಿಲ್ಲ, ಅದರೆ ಕಾಮಗಾರಿಯನ್ನು ಬಂದ್ ಮಾಡಿ ಹಣವನ್ನು ಕೇಳುವುದು ಸರಿಯಲ್ಲ 2008-09ನೇ ಸಾಲಿನಲ್ಲಿ ಯೋಜನೆ ಪ್ರಾರಂಭವಾಗಿದೆ. ಅಂದಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡೆಗಾಗಲೀ ಕೃಷ್ಣ ಯೋಜನೆಗಾಗಲೀ ಹಣವನ್ನು ನೀಡುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ಆದತ್ಯೆಯನ್ನು ನೀಡಲಿಲ್ಲ, ನಮ್ಮ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದಾಗ 5700 ಕೋಟಿ ರೂ.ಗಳನ್ನು ನೀಡುವುದರ ಮೂಲಕ ಕಾಮಗಾರಿ ವೇಗವಾಗಿ ಮಾಡುವಂತೆ ಮಾಡಲಾಗಿತ್ತು. ಈಗ ಸರ್ಕಾರ ಬಂದು ಒಂದುವರೆ ವರ್ಷದಲ್ಲಿ ಗುತ್ತಿಗೆದಾರರ ಹಣವನ್ನು ಪಾವತಿ ಮಾಡದೇ ಗುತ್ತಿಗೆದಾರರ ಕೆಲಸವನ್ನು ಬಂದ್ ಮಾಡಿದ್ದಾರೆ.

ಬಿಜೆಪಿ ಅಂತರಿಕ ಬೇಗುದಿ ತಲೆನೋವಾಗಿದೆ ಎಂಬ ಪ್ರಶ್ನೆಗೆ ರಾಜ್ಯದಲ್ಲಿ ಬಿಜೆಪಿಯ ಸಮಸ್ಯೆಯ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ವರಿಷ್ಠರು ಗಮನಹರಿಸುತ್ತಿದ್ದಾರೆ ಇದನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಉಚಿತಶರ್ಟಿನ ಬಟನ್ ಸರಿಯಾಗಿ ಹಾಕಿಲ್ಲ ಎಂದು ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ ;10 ಮಂದಿ ವಿರುದ್ಧ ಕೇಸುಟ್ರಂಪ್ ಸುಂಕ ಹೆಚ್ಚಳದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು'ಬ್ಯಾಕ್ ಟು ಊರು ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ' - ಸಂಸದ ಕ್ಯಾ. ಚೌಟದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಆಸ್ತಾ ಸಿಂಗ್ ಯಶಸ್ಸಿನ ಕಥನಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಹತ್ಯೆ.!ಕರ್ನಾಟಕ PGCET ಪರೀಕ್ಷೆ ಫಲಿತಾಂಶ ಪ್ರಕಟ.!ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ.!ಉಪ್ಪಿನಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಮತ್ತು ಲಕ್ಷ್ಮಿ ಕೃಪಾಕಟಾಕ್ಷ ! ಹಿಂದೂ ಧರ್ಮದಲ್ಲಿ ಉಪ್ಪಿಗಿದೆ ವಿಶೇಷ ಸ್ಥಾನ