LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರ : 369 ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಅಧಿಸೂಚನೆ.!

 

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಐದು ನಗರ ಪಾಲಿಕೆಗಳ 369 ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದು, ಈ ಮೂಲಕ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದೆ.

ಜನವರಿ 23ರೊಳಗೆ ಸಾರ್ವಜನಿಕರು ಮೀಸಲಾತಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಸ್ಥಾನ ಮೀಸಲಾಗಿದೆ. ಮಹಿಳೆಯರು ಸೇರಿದಂತೆ ಅನುಸೂಚಿತ ಜಾತಿ ಎಸ್‌ಸಿಗೆ 43 ವಾರ್ಡ್, ಎಸ್.ಟಿ.ಗೆ 7 ವಾರ್ಡ್, ಹಿಂದುಳಿದ ವರ್ಗ(ಎ)ಕ್ಕೆ 97 ವಾರ್ಡ್, ಹಿಂದುಳಿದ ವರ್ಗ(ಬಿ)ಕ್ಕೆ 24 ವಾರ್ಡ್ ಸಾಮಾನ್ಯರಿಗೆ 198 ವಾರ್ಡ್ ಗಳನ್ನು ಮೀಸಲಾಗಿಡಲಾಗಿದೆ. ಒಟ್ಟಾರೆ ಎಲ್ಲಾ ವಿಭಾಗಗಳಿಂದ ಮಹಿಳೆಯರಿಗೆ 176 ವಾರ್ಡ್ ಗಳನ್ನು ಮೀಸಲಿಡಲಾಗಿದೆ.

ಕೇಂದ್ರ ಪಾಲಿಕೆಯಲ್ಲಿ 63, ಪೂರ್ವ ಪಾಲಿಕೆಯಲ್ಲಿ 50, ಪಶ್ಚಿಮ ಪಾಲಿಕೆಯಲ್ಲಿ 112, ಉತ್ತರ ಪಾಲಿಕೆಯಲ್ಲಿ 72, ದಕ್ಷಿಣ ಪಾಲಿಕೆಯಲ್ಲಿ 72 ಸೇರಿ ಒಟ್ಟು 369 ವಾರ್ಡ್ ಗ ಇವೆ.

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಅನ್ವಯ ಮೀಸಲಾತಿ ನಿಗದಿಪಡಿಸಲಾಗಿದೆ. ಯಾವುದೇ ಆಕ್ಷೇಪಣೆ, ಸಲಹೆ ಸಲ್ಲಿಸುವವರು ತಮ್ಮ ಪೂರ್ಣ ವಿಳಾಸ ಮತ್ತು ಸಹಿಯೊಂದಿಗೆ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ಬೆಂಗಳೂರು-1 ಇವರಿಗೆ ಜನವರಿ 23ರ ಸಂಜೆ 5:30ರ ಒಳಗೆ ಸಲ್ಲಿಸುವಂತೆ ಜಿಬಿಎ ಸೂಚಿಸಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೇಡಿದ ವರವ ಕೊಡುವ ಕಟೀಲು ದುರ್ಗಾ ಪರಮೇಶ್ವರಿ ಮಹಿಮೆ ತಿಳಿಯುವ ಬನ್ನಿ.!ಕಿಡ್ನಿ ಸಮಸ್ಯೆ ಇದ್ದವರು ಹೀಗೆ ಮಾಡಿದ್ರೆ ಸಮಸ್ಯೆ ಕಂಟ್ರೋಲ್  ಗೆ ಬರುತ್ತೆ.!ಗೃಹಲಕ್ಷ್ಮೀ ಯೋಜನೆ ಪಡೆಯದೇ ಇರುವ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್03-02-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ .!ಇಂದಿನ ವಚನ:- -ಅಮುಗೆ ರಾಯಮ್ಮ ಅವರ ವಚನ..!ಶ್ರೀಮತಿ ಎ.ರೇಖಾ ರವರಿಗೆ ಮಹಿಳಾ ರತ್ನ ಪ್ರಶಸ್ತಿ.! ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ..!!ದ್ವೇಷ ಭಾಷಣ ಮಸೂದೆ - ರಾಜ್ಯಪಾಲರ ಸಹಿ ನಿರಾಕರಣೆ ಹಿಂದಿನ ಕಾರಣ ಬಹಿರಂಗದಾಂಪತ್ಯದ ಭಿನ್ನಾಭಿಪ್ರಾಯದ ಸಮಸ್ಯೆಗೆ ಒಂದೇ ಒಂದು ತಾಂತ್ರಿಕ ಮಂತ್ರದಿಂದ ಶಾಶ್ವತ ಪರಿಹಾರ.....!ಯುಪಿಎಸ್‌ಸಿಯಲ್ಲಿ 9ನೇ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಆದಿತ್ಯ ವಿಕ್ರಮ್ ಅಗರ್ವಾಲ್