Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಊಟಕ್ಕೆ ಉಪ್ಪಿನಕಾಯಿಯಾಗಿರುವ‌ ಅತಿಥಿ ಉಪನ್ಯಾಸಕರು 

ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಬೆನ್ನೆಲುಬಾಗಿ ನಿಂತಿರುವ ಪ್ರಾಧ್ಯಾಪಕರಲ್ಲಿ ಅತಿಥಿ ಉಪನ್ಯಾಸಕರ ಬಹುಪಾಲು ಇದೆ 431ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸುಮಾರು 12000 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ತಮ್ಮ ಬೇಡಿಕೆಯಾದ ಸೇವಾ ಭದ್ರತೆಯನ್ನು ಕೇಳುತ್ತಾ ಹೋರಾಡುತ್ತಲೆ ವಯಸ್ಸಿನ ಕಾಲ, ಅರ್ಧ ಭಾಗ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು 

ಇವರ ಆರ್ಥಿಕ ಸ್ಥಿತಿ ವರ್ಷದಿಂದ ವರ್ಷಕ್ಕೆ ತತ್ತರಿಸುತ್ತಾ ತಿಂಗಳಿಗೆ ಸಂಬಳವಿಲ್ಲದೆ ಶೈಕ್ಷಣಿಕ ವರ್ಷವನ್ನು ಕಾಯುತ್ತಾ ನಿಂತಿರುವುದು ಸಮಾಜದಲ್ಲಿ ನೆಮ್ಮದಿಯನ್ನು ಕಾಣದೆ , ಉದ್ಯೋಗ ಭದ್ರತೆ ಇಲ್ಲದ ಸ್ಥಿತಿ ವರ್ಷಕ್ಕೆ ಕೆಲವೇ ತಿಂಗಳ ಮಾತ್ರ ಬದುಕಿನಲ್ಲಿ  ಸೇವೆ ದೊರೆಯುತ್ತದೆ ಇನ್ನುಳಿದ ಅವಧಿಯಲ್ಲಿ ಇಲಾಖೆ ಬಿಡುಗಡೆ ಮಾಡುತ್ತಾ ಬರುತ್ತಿದೆ. ಇದರಿಂದ ಇವರು ಊಟಕ್ಕೆ ಉಪ್ಪಿನಕಾಯಿ ಎಂದೇ ಇಲಾಖೆ ಇವರ ಜೊತೆ ಚೆಲ್ಲಾಟ ಆಡುತ್ತಿರುವುದು ಸೇವೆಗೆ ಭದ್ರತೆ ಇಲ್ಲದೆ ನರಳುವಂತೆ ಮಾಡಿದೆ.
ಈಗಿನ ಸರ್ಕಾರವು ಕೂಡ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಅತಿಥಿಗಳಿಗೆ ಸೇವಾ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದರು ಕೂಡ ಇಲ್ಲಿಯವರೆಗೆ ಈ ಭರವಸೆಯನ್ನು ಈಡೇರಿಸಿಲ್ಲ ಜಾಣ ಮೌನವನ್ನು ವಹಿಸಿದೆ .
ಪದವಿ ಕಾಲೇಜುಗಳಲ್ಲಿ ಯುಜಿಸಿ ನಿಯಮಾವಳಿ ಪ್ರಕಾರ ಅರ್ಹತೆ ಹೊಂದಿದ್ದರು ಸುಮಾರು ವರ್ಷಗಳಿಂದ ಈ ಕಾಲೇಜುಗಳಲ್ಲಿ ಸೇವೆಯನ್ನು ಮಾಡುತ್ತಾ ಇಂದಿಲ್ಲ ನಾಳೆ  ನಮಗೆ ಸೇವಾ ಭದ್ರತೆ ಸಿಗುತ್ತದೆ ಎಂಬ ನಂಬಿಕೆಯಿಂದ  ಬಂದಿರುವ ಇವರ ಬದುಕು ಈಗ ಶೋಚನೆಯ  ಸ್ಥಿತಿ. ಅತಿಥಿ ಇಲಾಖೆ ಕೈಯಲ್ಲಿ 'ತಿಥಿ' ಯಾಗುತ್ತಿದ್ದಾನೆ 
ವರ್ಷದಿಂದ ವರ್ಷಕ್ಕೆ ಆರ್ಥಿಕ ಸ್ಥಿತಿ ಹದಗೆಟ್ಟು ಇತ್ತ ಬದುಕಲಾರದೆ ವಾರಕ್ಕೆ ಓರ್ವ ಅತಿಥಿ ಉಪನ್ಯಾಸಕರು ಮಾನಸಿಕವಾಗಿ ನರಳಿ ಪ್ರಾಣ ಕಳೆದು ಕೊಳ್ಳುತ್ತಿರುವುದು, ಇವರನ್ನೇ ನಂಬಿದ ಕುಟುಂಬಗಳ ಸ್ಥಿತಿ ಪರಿಹಾರಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿರುವವು ಇದಕ್ಕೆಲ್ಲ ಕಾರಣ ಯಾರು? ಎಂಬುದನ್ನು ಸರ್ಕಾರ ಗಮನಹರಿಸಬೇಕು.
ಕಾಲೇಜುಗಳಲ್ಲಿ ಪಠ್ಯಕ್ರಮ ಬೋಧನೆ ಪರೀಕ್ಷಾ ಕರ್ತವ್ಯ ಮೌಲ್ಯಮಾಪನ ಗಳಂತ ಕಾರ್ಯ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುವ ಇಂತಹ ಜೀವಗಳನ್ನು ರಕ್ಷಿಸಿದರೆ ಶಿಕ್ಷಣಕೊಂದು ಅರ್ಥ ಬರುವುದು 
ಆದರೆ ಇವುಗಳೆಲ್ಲವನ್ನು ಬಿಟ್ಟು ಅತಿಥಿಗಳೆಂಬ ಅವಮಾನವೇ ಇವರಿಗೆ ಸನ್ಮಾನ ಎಂದಾಗಿದೆ 
ಸರ್ಕಾರ ಇವರ ಹೋರಾಟಗಳಿಗೆ ಶಾಶ್ವತ ಪರಿವಾರವನ್ನು ನೀಡದೆ, ಪ್ರತಿ ವರ್ಷ ಹೋರಾಟವನ್ನೆ ಜೀವಂತ ಇಟ್ಟಿದೆ ಇವರ ಕೂಗುಗಳಿಗೆ ಕವಡೆ ಕಾಸಿನಷ್ಟು ಬೆಲೆ ಕೊಟ್ಟಿಲ್ಲ ಮೊಸಳೆ ಕಣ್ಣೀರಿನಂತೆ ಸಮಿತಿಗಳ ರಚನೆ, ವರದಿ ಸಲ್ಲಿಕೆಗಳಂತ ಕೆಲಸ ಮಾಡಿದೆ. ಅರ್ಹತೆ ಇಲ್ಲದವರಿಗೆ  ಕೇವಲ ಮೂರು ವರ್ಷ ಶೈಕ್ಷಣಿಕ ಮೇಲ್ವಿಚಾರಕರೆಂದು ಹೇಳಿದೆ ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 
ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಹನ್ನೆರಡು ತಿಂಗಳು ವೇತನ 60ನೇ ವಯಸ್ಸಿನ ನಿವೃತ್ತಿ ವರೆಗೆ ಸೇವಾ ಭದ್ರತೆಯನ್ನು ನೀಡಲಿ.
ಕೃಷಿ ಕಾರ್ಮಿಕರು ಬಡವರು ಹಿಂದುಳಿದವರು ಇಂತ ಕುಟುಂಬಗಳ ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಕಲಿಯುತ್ತಿದ್ದು ಅವರ ಭವಿಷ್ಯವನ್ನು ರೂಪಿಸುವ ಉಪನ್ಯಾಸಕ ಎಂಬ ಶಿಲ್ಪಿಗಳಿಗೆ ಸರಕಾರ ಸ್ಪಂದಿಸಿ ಅವರನ್ನು ಇತರೆ ರಾಜ್ಯಗಳ ಮಾದರಿಯಂತೆ ಸೇವಾ ಭದ್ರತೆ ನೀಡಿ ಬದುಕನ್ನು ಭದ್ರಪಡಿಸಲಿ. ಭವಿಷ್ಯದ ರೂವಾರಿಗೇ ನೆಮ್ಮದಿ ಬಾಳನ್ನು ಕಲ್ಪಿಸಿಕೊಡಲಿ.
ಡಾ.ಅ.ಬ.ಇಟಗಿ
ಜಿಲ್ಲಾಧ್ಯಕ್ಷರು, ಬೆಳಗಾವಿ 
 ರಾಜ್ಯ ಅತಿಥಿ ಉಪನ್ಯಾಸಕರ ಸಂಘ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ