LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾನ್‌ವೆಜ್​​ ಬಿಡುವಂತೆ ಕಿರುಕುಳ: ಮಹಿಳಾ ಪೈಲಟ್‌ ಆತ್ಮಹತ್ಯೆ - ಬಾಯ್​ಫ್ರೆಂಡ್ ಅರೆಸ್ಟ್!

ಮುಂಬೈ: ಪೈಲಟ್‌ ತರಬೇತಿ ಸಮಯದಲ್ಲಿ ಯುವತಿ, ಯುವಕನ ನಡುವೆ ಉಂಟಾದ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿ ಕೊನೆಗೆ ನಾನ್‌ವೆಜ್ ವಿಚಾರದಲ್ಲಿ ಒಬ್ಬರ ಪ್ರಾಣವನ್ನೇ ಕಸಿದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಸೃಷ್ಟಿ ತುಳಿ (25) ಮತ್ತು ದೆಹಲಿಯ ಆದಿತ್ಯ ಪಂಡಿತ್ (27) ಇಬ್ಬರೂ ಪ್ರೇಮಿಗಳು. ಏರ್ ಇಂಡಿಯಾ ಪೈಲಟ್​ ಸೃಷ್ಟಿ ಮೃತದೇಹ ಮುಂಬೈನ ಫ್ಲಾಟ್‌ನಲ್ಲಿ ಪತ್ತೆಯಾಗಿದೆ.

ಆಕೆಯ ಬಾಯ್​ಫ್ರೆಂಡ್ ಆದಿತ್ಯನನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ನಾನ್ ವೆಜ್ ಆಹಾರದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಆದಿತ್ಯ ಎಲ್ಲರ ಮುಂದೆಯೇ ಸೃಷ್ಟಿಯನ್ನ ನಿಂದಿಸುತ್ತಿದ್ದ. ಇದರಿಂದ ಆಕೆ ತೀವ್ರ ಮನನೊಂದಿದ್ದಳು. ಇಂದಲ್ಲ ನಾಳೆ ಸರಿ ಹೋಗುತ್ತೆ ಎಂದು ಭಾವಿಸಿದ್ದಳು. ಆದರೆ, ಆದಿತ್ಯ ಸ್ವಲ್ಪವೂ ಬದಲಾಗದೇ ನಾನ್ ವೆಜ್ ವಿಚಾರಕ್ಕಾಗಿ ಅನೇಕ ಬಾರಿ ಜಗಳವಾಡಿದ್ದ.

ಹೀಗಿರುವಾಗ ಸೋಮವಾರ ಮುಂಜಾನೆ ಮುಂಬೈನ ಅಂಧೇರಿ (ಪೂರ್ವ) ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್ ಹಿಂಭಾಗದ ಮನೆಯಲ್ಲಿ ಸೃಷ್ಟಿ ಶವವಾಗಿ ಪತ್ತೆಯಾಗಿದೆ. ಸೃಷ್ಟಿಯ ಗೆಳೆಯ ಆದಿತ್ಯ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸೃಷ್ಟಿ ತುಲಿ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವಳು ಮತ್ತು ಆದಿತ್ಯ ಪಂಡಿತ್ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದಾಗ ಭೇಟಿಯಾದರು ನಂತರ ಸಂಬಂಧವನ್ನು ಹೊಂದಿದ್ದರು. ಆಪಾದಿತ ಆತ್ಮಹತ್ಯೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಆದಿತ್ಯ ಪಂಡಿತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪವಾಯಿ ಪೊಲೀಸ್ ಠಾಣೆಯ ಪೊಲೀಸರು ಆದಿತ್ಯನ ನವೆಂಬರ್ 29 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೆಂಗಿನ ತೋಟದಲ್ಲಿ ಎಳನೀರು ಮುಟ್ಟಿದ್ದಕ್ಕೆ ಕೊಂದೇ ಬಿಟ್ಟರುಪ್ರಧಾನಿ ಜೊತೆಗೂಡಿ ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ಪ್ರತಿಷ್ಠಿತ ಅಪೋಲೋ ಫಾರ್ಮಸಿಗೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ!ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?CAG report ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ವಿತ್ತೀಯ ಕೊರತೆ ಭಾರೀ ಹೆಚ್ಚಳ: CAG ವರದಿಯಲ್ಲಿ ಮಾಹಿತಿ; ಆದಾಯ ಶೇ.1.86, ಖರ್ಚು ಶೇ.12.54ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆಆನ್‌ಲೈನ್ ಗೇಮಿಂಗ್ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಸಿಂಗ್ ಹೆಸರು - ವಿಧಾನಸಭೆಯಲ್ಲಿ ಅನುಮೋದನೆಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಇಂದು ಮಂಡನೆಮಕ್ಕಳ ನಾಪತ್ತೆ, ಅಪಹರಣ ಪ್ರಕರಣ : ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ