LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2024 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಹರ್ಷಿತಾ ಗೋಯಲ್

ಹರಿಯಾಣ : ಭಾರತದಲ್ಲಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್‌ಸಿ ಕೂಡ ಒಂದು. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಹರ್ಷಿತಾ ಗೋಯಲ್ ಅವರು 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.

ಹರಿಯಾಣದಲ್ಲಿ ಜನಿಸಿದ ಹರ್ಷಿತಾ ಗೋಯಲ್ ಅವರು ಗುಜರಾತ್ ನ ವಡೋದರಾದಲ್ಲಿ ಬೆಳೆದರು. ಅವರು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕರ್ತವ್ಯನಿರ್ವಹಿಸಿದ ಅವರು, ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.

ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಹರ್ಷಿತಾ ಗೋಯಲ್ ಅವರು ಐಚ್ಛಿಕ ವಿಷಯಗಳಾಗಿ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಹರ್ಷಿತಾ ಪರೀಕ್ಷೆಯಲ್ಲಿ ಒಟ್ಟು 1038 ಅಂಕಗಳನ್ನು ಗಳಿಸಿದ್ದಾರೆ. ಮುಖ್ಯ ಪರೀಕ್ಷೆಯಲ್ಲಿ 851 ಮತ್ತು ಸಂದರ್ಶನದಲ್ಲಿ 187 ಅಂಕ ಗಳಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ 2025 ರ ಏಪ್ರಿಲ್ 22ರಂದು 2024ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಶಕ್ತಿ ದುಬೆ ಮೊದಲ ಸ್ಥಾನ ಗಳಿಸಿದ್ದರೆ, ಹರ್ಷಿತಾ ಗೋಯಲ್ ಅವರು ಎರಡನೇ ಸ್ಥಾನ ಗಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
16 ವರ್ಷಕ್ಕಿಂತ ಕೆಳಗಿನವರಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌..!!ಇಂದು ಮಹಾರಾಷ್ಟ್ರದ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ!ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ!'ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡದಿದ್ದರೆ ಇಲ್ಲದಿದ್ರೆ ಶಾಲೆಗಳ ಮಾನ್ಯತೆ ರದ್ದು'- ಸುಪ್ರೀಂಐಎಎಸ್ ಅಧಿಕಾರಿ ತೃಪ್ತಿ ಕಲ್ಹಾನ್ಸ್ ಸ್ಫೂರ್ತಿದಾಯಕ ಕಥೆದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 31-01-2026.!ದಾವಣಗೆರೆ ವಿವಿ 13 ನೇ ಘಟಿಕೋತ್ಸವ:  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಹೇಳಿದ್ದು.!ಇಂದಿನ ವಚನ:-ಜೇಡರ ದಾಸಿಮಯ್ಯಅವರ ವಚನ..!ಲ್ಯಾಂಡ್ ಲಾರ್ಡ್‌ ಭರವಸೆ ಮೂಡಿಸುವ ಸಿನಿಮಾ.!ಹೊಸದುರ್ಗ: ಫೆ.6 ರಿಂದ ಕುಂದೂರು ಗೊಲ್ಲರಹಟ್ಟಿಯಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ನೂತನ ಆಲಯ ಕಳಶಾರೋಹಣ.!