LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇನ್ಮುಂದೆ ಜಿಲ್ಲಾ ಆಸ್ಪತ್ರೆಯಲ್ಲೇ ಕೃತಕ ಕೀಲು ಬದಲಾವಣೆ ಶಸ್ತçಚಿಕಿತ್ಸೆ

 

ಚಿತ್ರದುರ್ಗ: ಸಂಪೂರ್ಣ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಸಂಧ್ಯಾ ಕಾಲದ ಬಡ ರೋಗಿಗಳಿಗೆ ಇದು ವರದಾನವಾಗಲಿದ್ದು, ಅರ್ಹ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತç ಚಿಕಿತ್ಸೆ ನಡೆಸಲಾಗುವುದು ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.

ಈ ಕುರಿತು ಶನಿವಾರ ಜಿಲ್ಲಾ ಆಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ವಯಸ್ಸಾದಂತೆ ಹಲವು ಜನರಲ್ಲಿ ಸೊಂಟ ಹಾಗೂ ಮೊಣಕಾಲು ಸವೆತ ಉಂಟಾಗುತ್ತದೆ. ಇದರಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಡೆಯಲು ಸಹ ಕಷ್ಟ ಪಡುವವರು, ಶಸ್ತçಚಿಕಿತ್ಸೆಯ ನಂತರ ಸಹಜವಾಗಿ ಓಡಾಟ ನಡೆಸಬಹುದು. ಸೊಂಟ,ಮೊಣಕಾಲು ಜೊತೆ ಬೆನ್ನುಹುರಿ ಶಸ್ತçಚಿಕಿತ್ಸೆಯನ್ನು ಸಹ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುವುದು. ಪ್ರತಿ ಶನಿವಾರ ಅಥವಾ ಸೋಮವಾರದಂದು ನುರಿತ ತಜ್ಞರು ಶಸ್ತçಚಿಕಿತ್ಸಕೆ ನಡೆಸಲಿದ್ದಾರೆ.

ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ರೂ.5 ರಿಂದ 6 ಲಕ್ಷದವರೆಗೂ ವೆಚ್ಚವಾಗುತ್ತದೆ. ಅದರೆ ಜಿಲ್ಲಾ ಆಸ್ಪತ್ರೆಯಲ್ಲಿ ಇನ್‌ಪ್ಲಾಂಟ್ಸ್ ಸಹಿತ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತç ಚಿಕಿತ್ಸೆ ನಡೆಸಲಾಗುವುದು ಎಂದು ಡಾ.ಎಸ್.ಪಿ.ರವೀಂದ್ರ ತಿಳಿಸಿದರು.

ಬೆಂಗಳೂರಿನ ಪ್ರಖ್ಯಾತ ಕೀಳುಮೂಳೆ ತಜ್ಞ ಡಾ.ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸದ್ಯ ಇಬ್ಬರು ರೋಗಿಗಳಿಗೆ ಟೋಟಲ್ ಹಿಪ್ ರೀಪ್ಲೇಸಮೆಂಟ್(ಟಿ.ಹೆಚ್.ಆರ್) ಶಸ್ತçಚಿಕಿತ್ಸೆ ಕೈಗೊಳ್ಳಲು ತಯಾರಿ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಅಗತ್ಯವಾದ ಆಪರೇಷನ್ ಥೆಯಟರ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಪ್ರತಿ ತಿಂಗಳು 100 ರಿಂದ 150 ಮೂಳೆ ಸಂಬAಧಿಸಿದ ಶಸ್ತçಚಿಕೆತ್ಸೆಯನ್ನು ನಡೆಸಲಾಗುತ್ತಿದೆ ಎಂದು ಕೀಳುಮೂಳೆ ವಿಭಾಗದ ತಜ್ಞವೈದ್ಯ ಡಾ.ಎಸ್.ಪಿ.ದಿನೇಶ್ ಮಾಹಿತಿ ನೀಡಿದರು. ಇವರೊಂದಿಗೆ ಜಿಲ್ಲಾಸ್ಪತ್ರೆಯ ಕೀಳುಮೂಳೆ ವಿಭಾಗದ ವೈದ್ಯರುಗಳಾದ ಡಾ.ಶ್ರೀಧರ್ ಹಾಗೂ ಡಾ.ಬಸವರಾಜ್ ಶಸ್ತçಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳ್ಳಂಬೆಳಗ್ಗೆ ಕೃಷಿ ಇಲಾಖೆ ಅಧಿಕಾರಿ ಎಡಿ ಚಂದ್ರಕಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ.!ದೆಹಲಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ14-10-2025 ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ..!ವಚನ.: -ಉರಿಲಿಂಗದೇವ  .!'ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ' - ಪರಿಶೀಲಿಸಲು ಮುಖ್ಯಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆಕರೂರು ಕಾಲ್ತುಳಿತ ದುರಂತ: ಸಿಬಿಐಗೆ ವಹಿಸಿ ಸುಪ್ರೀಂ ಕೊರ್ಟ್ ಆದೇಶ'ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ'-ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ'ಸಿಎಂ ಕರೆದ ಭೋಜನ ಮೀಟಿಂಗ್‌ಗೂ, ಅಧಿಕಾರ ಬದಲಾವಣೆಗೂ ಸಂಬಂಧವಿಲ್ಲ' -ಪರಮೇಶ್ವರ್‌ಗಾಜಾ ಯುದ್ಧ ಅಂತ್ಯ: ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆಗೊಳಿಸಿದ ಹಮಾಸ್ಎಲ್‌ಒಸಿಯಲ್ಲಿ ಭಯೋತ್ಪಾದಕರ ಲಾಂಚ್ ಪ್ಯಾಡ್‌ಗಳು ಸಕ್ರಿಯ; ಬಿಎಸ್‌ಎಫ್ ಕಟ್ಟೆಚ್ಚರ