LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ

ಉಡುಪಿ : ಜಿಲ್ಲೆಯ ಎಲ್ಲಾ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೋಂ ಸ್ಟೇ, ರೆಸಾರ್ಟ್ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯು ಶುಕ್ರವಾರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ಬಾಲಕೃಷ್ಣ ಸಿ ಹೆಚ್, ಮುಂಬರುವ ಕ್ರಿಸ್‌ಮಸ್, ಹೊಸ ವರ್ಷ ಆಚರಣೆ ಮತ್ತು ಇತರೆ ಸಭೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಅಬಕಾರಿ ಇಲಾಖೆಯಿಂದ ಕಡ್ಡಾಯವಾಗಿ ಸಿಎಲ್-5 ಸನ್ನದುಗಳನ್ನು ಪಡೆದುಕೊಳ್ಳುವಂತೆ ಹಾಗೂ ಸಭೆ ಸಮಾರಂಭಗಳಲ್ಲಿ ಗೋವಾ ಮದ್ಯ/ತೆರಿಗೆ ರಹಿತ ಮದ್ಯ/ನಕಲಿ ಮದ್ಯ ಉಪಯೋಗಿಸದಂತೆ ಸೂಚನೆ ನೀಡಿದರು.

ಮನೆಗಳಲ್ಲಿ ನಡೆಯುವ ಮೆಹಂದಿ ಹಾಗೂ ಇತರೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಸಹ ಕಡ್ಡಾಯವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು, ತೆರಿಗೆ ಪಾವತಿಸಿದ ಮದ್ಯವನ್ನು ಉಪಯೋಗಿಸಬೇಕು ಎಂದರು. ಯಾವುದೇ ಅಬಕಾರಿ ಅಕ್ರಮಗಳು ಜರುಗಿದ್ದು ಕಂಡುಬಂದಲ್ಲಿ ಮೊಕದ್ದಮೆ ದಾಖಲಿಸಿ. ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಈ ನಿಟ್ಟಿನಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವನ್ನು ಅತ್ಯಗತ್ಯವಾಗಿದ್ದು, ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ. 9449597104, ಉಡುಪಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ 9482520693, ಕುಂದಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ 9448921980, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ.944883554, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ.9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ. 8892839092, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ.9731674117, ಜಿಲ್ಲಾತಂಡ ಅಬಕಾರಿ ನಿರೀಕ್ಷಕರು ಮೊ.ನಂ. 9035773785 ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಬಿಂದುಶ್ರೀ ಪಿ. ಜಿಲ್ಲೆಯ ಅಬಕಾರಿಗಳು ಜಿಲ್ಲೆಯ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೊಂ ಸ್ಟೇ, ರೆಸಾರ್ಟ್ಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಸ ಅವತಾರದಲ್ಲಿ ಮಿಂಚಿದ ರಮ್ಯಾ: ಸಖತ್ ಗ್ಲಾಮರಸ್ ಫೋಟೋಗಳು ವೈರಲ್ನಾಳೆ ವರಮಹಾಲಕ್ಷ್ಮಿ ಹಬ್ಬ ಯಾವ ಗಳಿಗೆಯಲ್ಲಿ ಪೂಜೆ ನೆರವೇರಿಸಿಬೇಕು.? ಪ್ರಸಾದ ತಯಾರಿ ಹೀಗಿರಲಿ.!ಖಾಸಗಿ ಸುದ್ದಿವಾಹಿನಿ ತಂಡದ ಮೇಲೆ ಹಲ್ಲೆ ಪ್ರಕರಣ; ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಸಮೀರ್‌ ಎಂ.ಡಿ ವಿರುದ್ಧ ಎಫ್‌ಐಆರ್ ದಾಖಲು..!ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯುವಕ ನೇಣಿಗೆ ಶರಣು.!ಗ್ರಹ ದೋಷಗಳನ್ನು ನಿವಾರಿಸಿ, ಸರ್ವ ಕಾರ್ಯ ಸಿದ್ಧಿಸುವ ಶ್ರೀ ಪ್ರತ್ಯಂಗಿರಾ ದೇವಿ ಯಂತ್ರ ಪೂಜೆ.!ಧರ್ಮಸ್ಥಳ ದೇವಾಲಯಕ್ಕೆ ಬಾಂಬ್ ಇರಿಸಿ ಸ್ಫೋಟಿಸಲು ಶಂಕಿತ ಉಗ್ರನ ಸಂಚು: ಇ.ಡಿ.ತನಿಖೆಯಲ್ಲಿ ಬಯಲುಬಾಳೆಬರೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ಪಾಸಾದ ನಿವೇದಿತಾ ಶೆಟ್ಟಿದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ..! 07-08-2025ವಚನ: -ಘಟ್ಟಿವಾಳಯ್ಯ .!