LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಪಿಎಲ್ ಪಡಿತರ ಕಾರ್ಡ್ ಪಡೆಯುವವರಿಗೆ ಇಲ್ಲಿದೆ ಖುಷಿ ಸುದ್ದಿ.!:

 

ಬೆಳಗಾವಿ: ಸುವರ್ಣ ವಿಧಾನ ಸೌಧ,  ವಿಧಾನ ಪರಿಷತ್ ನಲ್ಲಿ ವಿರೋದ ಪಕ್ಷದ ಸದಸ್ಯರು  ರಾಜ್ಯದಲ್ಲಿನ ಬಿಪಿಎಲ್ ಪಡಿತರ ಕಾರ್ಡ್  ರದ್ದು ಕುರಿತು  ಕೇಳಿದ ಪ್ರಶ್ನೆಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ನವರು ಉತ್ತರಿಸಿದರು.

ಪಡಿತರ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಲು ನಾವು ಮುಂದಾದಾಗ  ಕೇಂದ್ರ ಸರ್ಕಾರದ ಮಾನದಂಡಗಳ ಅಡಿಯಲ್ಲಿಯೇ ನಾವು ಪರಿಷ್ಕರಣೆ ಮಾಡಲು ಹೋಗಿದ್ದು ಕೆಲವು ಗೊಂದಲಗಳಿಂದ ನಾವು ಅದನ್ನು ತಡೆಹಿಡಿದಿದ್ದೀವಿ.

ಅರ್ಹರ ಬಿಪಿಎಲ್ ಪಡಿತರ ಕಾರ್ಡ್ ದಾರರ ಯಾವುದೇ ಕಾರ್ಡ್ ಗಳು ರದ್ದಾಗದಂತೆ ಅಧಿಕಾರಿಗಳಿಗೆ ಸೂಚಿಸಿ  ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಪುನರ್ ಸ್ಥಾಪಿಸಲಾಯಿತು.

ಆದರೂ ಪ್ರಸ್ತುತ ಬಿಪಿಎಲ್ ಪಡಿತರ ಕಾರ್ಡ್ ಗಳಲ್ಲಿ ಅನರ್ಹ ಫಲಾನುಭವಿಗಳ ಪತ್ತೆಹಚ್ಚಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಮ್ಮ ಅಧಿಕಾರಿಗಳು ಪರಿಪಕ್ವವಾದ ಅಂಕಿ ಅಂಶಗಳನ್ನು ಗುರುತಿಸಿ ನಂತರ ಅರ್ಹರಿಗೆ  ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್ ಗಳಲ್ಲಿ ಶೇಕಡಾ 20 ರಷ್ಟು ಕಾರ್ಡ್ ಗಳು ಎಪಿಎಲ್ ನವರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ಸುಮಾರು ಶೇಕಡ 65%. ರಿಂದ 75% ರಷ್ಟು ಜನಸಂಖ್ಯೆಗೆ  ಬಡತನ ರೇಖೆಗಿಂತ ಕೆಳಗಿರುವಂತೆ ಕಾರ್ಡ್ ಗಳನ್ನು ನೀಡಲಾಗಿದ್ದು ಅದನ್ನು ಪರಿಷ್ಕರಿಸಿಲಾಗುತ್ತಿದ್ದು  ಈ ಪ್ರಕ್ರಿಯೆ ಪೂರ್ಣ ಗೊಂಡ ನಂತರ ನಿಜವಾದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಿ  ನೀಡಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರ್ಲ್ಡ್‌ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ (WCL 2025) | ಸೆಮಿಫೈನಲ್ಸ್ ಆಡದೆ ಫೈನಲ್ ಪ್ರವೇಶಿಸಿದ ಪಾಕ್ಕೇಂದ್ರ ಸೇವೆಗೆ ಪ್ರಣವ್‌ ಮೊಹಾಂತಿ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆ?ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೀನುಗಾರರು ನೀರುಪಾಲುಬಿಗ್‌ಬಾಸ್ ಸೀಸನ್‌-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಇವರೇ ಸೆಲೆಬ್ರಿಟಿಗಳು?ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆಆ. 5 ರಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರಧರ್ಮಸ್ಥಳ ಪ್ರಕರಣ : ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ ಎಸ್‌ಐಟಿರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ವಿದಾಯ ಹೇಳಿದ ಅಂಚೆ ಕಛೇರಿ!!ಕೋಚಿಂಗ್ ಇಲ್ಲದೆ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೌಭಾಗ್ಯಧರ್ಮಸ್ಥಳದ ಪ್ರಕರಣ: ಎಸ್​ಐಟಿ ಸಹಾಯವಾಣಿ ಆರಂಭ.!