LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸರಕಾರಿ ಬಸ್ ನಲ್ಲಿ ಪ್ರಯಾಣಿಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!

ಬೆಂಗಳೂರು: ವೇತನ ಹೆಚ್ಚಳ, ವೇತನ ಹಿಂಬಾಕಿ ಪಾವತಿ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಡಿಸೆಂಬರ್ 9 ರಂದು ಬೆಳಗಾವಿ ಚಲೋ ನಡೆಸಲಿದ್ದಾರೆ. ಹೀಗಾಗಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಡಿಸೆಂಬರ್ 9ರಂದು ರಜೆ ತೆಗೆದುಕೊಳ್ಳದೇ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸೂಚನೆ ನೀಡಿವೆ.

ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾರಿಗೆ ನೌಕರರು ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಡಿಸೆಂಬರ್ 8ರ ಭಾನುವಾರದಿಂದಲೇ ನೌಕರರ ಬೆಳಗಾವಿಗೆ ತೆರಳುವ ಸಾಧ್ಯತೆ ಇದೆ.

ಹೀಗಾಗಿ ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಅನಿವಾರ್ಯ ಕಾರಣ ಹೊರತುಪಡಿಸಿ ಭಾನುವಾರ ಮತ್ತು ಸೋಮವಾರ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಲು ನೌಕರರಿಗೆ ಸೂಚಿಸಲಾಗಿದೆ. ಅನುಮತಿ ಪಡೆಯದೆ ರಜೆ ಪಡೆದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ನಿಗಮಗಳು ಎಚ್ಚರಿಕೆ ನೀಡಿವೆ.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿದೂರಿನ ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿಕೊಂಡು ಹುಚ್ಚಾಟ ಮೆರೆದ ಮಹಿಳೆಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ ಎಂದ ಡೊನಾಲ್ಡ್ ಟ್ರಂಪ್ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೂವರು ಪೊಲೀಸರ ವಶಕ್ಕೆರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ 20ನೇ ಕಂತಿನ ಹಣ ಇಂದು ಬಿಡುಗಡೆಮಾಡೆಲಿಂಗ್‌ ಲೋಕ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಆಗಿ ಅಧಿಕಾರಿಯಾದ ಕಥೆದಿನದ ಮಂಡಕ್ಕಿ ಒಗ್ಗರಣೆ – ಮಿರ್ಚಿ.! 02-08-2025..!ವಚನ: -ಆಯ್ದಕ್ಕಿ ಮಾರಯ್ಯ .!ದೇಶಾದ್ಯಂತ 10,277 ಬ್ಯಾಂಕಿಂಗ್ ವಲಯದಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ, ಡಿಗ್ರಿ ಆದವರು ಅರ್ಜಿ ಸಲ್ಲಿಸಿಶಿವಮೊಗ್ಗ:ರೈತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ