LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೌಲ್ಯಯುತ ಜೀವನಕ್ಕೆ ಪ್ರಾಮಾಣಿಕತೆಯೇ ದಾರಿ

ಶಿವಮೊಗ್ಗ:ಡಿ.05 :ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ಮಾತ್ರ ಮೌಲ್ಯಯುತ ಜೀವನಕ್ಕೆ ದಾರಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಾರ ಕಾಲೇಜಿನ ಸಭಾಂಗಣ ದಲ್ಲಿ ಏರ್ಪಡಿಸಿದ್ದ ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮ’ ಕುರಿತ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಶ್ರೀಮಂತಿಕೆಯ ಪೈಪೋಟಿಯಲ್ಲಿ ಪ್ರಾಮಾಣಿ ಕತೆ ಕಣ್ಮರೆಯಾಗುತ್ತಿದೆ. ಸಂವಿಧಾನದ ಹುಟ್ಟು ಮತ್ತು ಅಂಗಗಳ ಉದ್ದೇಶ ನಿರ್ಲಕ್ಷಕ್ಕೆ ಒಳಗಾಗಿದೆ. ಭಷ್ಟಾಚಾರವೆಂಬುದು ಎಲ್ಲಾ ಕ್ಷೇತ್ರಗಳಲ್ಲಿ ಬೇರೂರಿದೆ. ಸಮಾಜದ ಸುಧಾರಣೆಗೆ ಮೌಲ್ಯ ಯುತ ಶಿಕ್ಷಣ ಪ್ರತಿ ಮನೆ ಮನೆಗಳಲ್ಲಿ ಶುರುವಾದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ನಾನು ಭ್ರಷ್ಟಾಚಾರ ಮಾಡದೆ ಇರುವುದರಿಂದ ಪ್ರತಿದಿನ ನೆಮ್ಮದಿಯ ನಿದ್ದೆ ಮಾಡುತ್ತಿದ್ದೇನೆ ಎಂದರು.

ದೇಶದಲ್ಲಿ ಅಭಿವೃದ್ಧಿಯ ಜೊತೆಗೆ ದುರಾಸೆ ಕೂಡ ಹೆಚ್ಚಾಗಿದೆ. ವಾಸ್ತವಿಕವಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಕೆಲವೊಂದು  ಅಭಿವೃದ್ಧಿ ಆಗದೆ ಇರಲು ಜನರ ದುರಾಸೆಯು ಕಾರಣವಾಗಿದೆ. ದುರಾಸೆಯ ರೋಗಕ್ಕೆ ಯಾವ ಮದ್ದು ಇಲ್ಲ.  ಈಗ ನ್ಯಾಯಾಂಗದ ಮೇಲೆ ನಂಬಿಕೆ ಕಮ್ಮಿಯಾಗಲು ಕಾರಣ ಏನೆಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಲೋಕಾಯುಕ್ತ ವ್ಯವಸ್ಥೆ ಪ್ರಾಮಾಣಿಕವಾಗಿ ಹಾಗೂ ಬಲಿಷ್ಟವಾಗಿ ಕೆಲಸ ಮಾಡಿದಾಗ ಮಾತ್ರ ಭ್ರಷ್ಟಾಚಾರವು ಕಡಿಮೆಯಾಗುತ್ತದೆ, ಸಾಮಾನ್ಯ ಜನರಿಗೆ ನ್ಯಾಯಾಂಗದ ವ್ಯವಸ್ಥೆಯ ಮೇಲೆ ಭರವಸೆಯು ಮೂಡುತ್ತದೆ  ಎಂದು ಹೇಳಿದರು.

ಸಂವಾದದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಕುಲಸಚಿವ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಕಾರಿ ಎ.ಎನ್.ರಾಮಚಂದ್ರ, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್  .ಪಿ.ಮಂಜು ನಾಥ, ಸಂಶೋಧನಾ ಡೀನ್  ಎಸ್.ವಿ.ಸತ್ಯ ನಾರಾಯಣ, ಹಿರಿಯ ವಿದ್ಯಾರ್ಥಿ ಸಂಘದ ಪದಾಕಾರಿಗಳಾದ ಸರ್ಜಾ ಸತ್ಯೋದಯ, ಅನಂತ ಪ್ರಸಾದ್,  ಬಸಪ್ಪಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಂಶೋಧನಾ ವಿದ್ಯಾರ್ಹತೆ ಪಡೆದವರು ಮಾತ್ರ ಹೆಸರಿನ ಮುಂದೆ ಡಾಕ್ಟರ್ ಹಾಕಬೇಕು ಅನೇಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಎಂಬುದನ್ನು ಹಣಕ್ಕೆ ಮಾರಾಟದ ವಸ್ತುವಾಗಿ ಕಲುಷಿತಗೊಳಿಸಿದ್ದಾರೆ. ನಿಜವಾದ ಸಂಶೋಧನಾ ವಿದ್ಯಾರ್ಹತೆ ಪಡೆದವರು ಮಾತ್ರ ತಮ್ಮ ಹೆಸರಿನ ಮುಂದೆ ಡಾಕ್ಟರ್ ಸೇರಿಸಿಕೊಳ್ಳಬಹುದೇ ವಿನಃ ಬೇರೆ ಯಾರೂ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಕಾನೂನಿನ ಅರಿವು ಅತ್ಯವಶ್ಯಕ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಸಮೂಹದೊಂದಿಗೆ ಕಾನೂನಿನ ಅರಿವು ತೊಡಕುಗಳ ಕುರಿತು ಚರ್ಚಿಸಲಾಗುವುದು .
- ಸಂತೋಷ್ ಹೆಗ್ಡೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST