ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯವಲ್ಲ.!
ಬೆಂಗಳೂರು : ಹೌದ.? ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಎಂಬ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇದುವರೆಗೂ ಏಳು ಬಾರಿ ಕೊನೆಯ ದಿನಾಂಕವನ್ನು ವಿಸ್ತರಿಸಿದರೂ ವಾಹನ ಸವಾರರು ನಿರಾಸಕ್ತಿ ತೋರಿದ ಪರಿಣಾಮ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬರಲಾಗಿದೆಯಂತೆ
ಆದರೆ ಇದುವರೆಗೂ ಆನ್‌ಲೈನ್ ನಲ್ಲಿ, ಆರ್‌ಟಿಓ ಗಳಲ್ಲಿ ಸರತಿಯಲ್ಲಿ ನಿಂತು ಹಣ ಕಟ್ಟಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದಿದ್ದ ವಾಹನ ಸವಾರರ ಸ್ಥಿತಿ ಏನಾಗಬೇಡ.! ಬೆಲೆಯೇರಿಕೆಯ ಸರಣಿಯ ನಡುವೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಸರ್ಕಾರ ಏಳನೇ ಬಾರಿ ಕೊನೆಯ ದಿನಾಂಕವನ್ನು ವಿಸ್ತರಿಸಿತ್ತು. ರಾಜ್ಯದಲ್ಲಿ ಕೇವಲ ಶೇ 29 ರಷ್ಟು ವಾಹನ ಮಾಲಿಕರು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದಿದ್ದರು ಎಂದು ತಿಳಿದುಬಂದಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.