ಬೆಂಗಳೂರು: ಟಿಇ ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಿ ಸಂಸ್ಥೆಯನ್ನು ದೊಡ್ಡ ಮಟ್ಟಕ್ಕೆ ಕೊಂಡ ಹೆಗ್ಗಳಿಕೆ ಕಾರ್ಮಿಕರಿಗೆ ಸಲ್ಲುತ್ತದೆ, ಇದರಿಂದಲೇ ಕೋಟ್ಯಂತರ ರೂಪಾಯಿ ಹಣದ ವಹಿವಾಟು ಸಹ ನಡೆದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸಂಸ್ಥೆ ಆಡಳಿತ ಮಂಡಳಿ ಕಾಯಂ ಕಾರ್ಮಿಕರನ್ನು ಕಡಿಮೆ ಮಾಡಲು ಪ್ರಾರಂಭ ಮಾಡಲಾಯಿತು ಅದರ ಜೊತೆಗೆ ಸ್ವಯಂ ನಿವೃತ್ತಿ ಯೋಜನೆ ಹೆಸರಿನಲ್ಲಿ ಕಾರ್ಮಿಕರನ್ನು ಮನೆಗೆ ಕಳುಹಿಸುವ ಕೆಲಸವನ್ನು ಆರಂಭಿಸಿದ್ದದಕ್ಕೆ ಕಂಪನಿಯ ಕಾರ್ಮಿಕ ಸಂಘಟನೆಯಾದ ಟೈಕೋ ಎಲೆಕ್ಟ್ರಾನಿಕ್ಸ್ ಎಂಪ್ಲಾಯಿಸ್ ಯೂನಿಯನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು ಸಾಕಷ್ಟು ಅನಾನುಕೂಲವನ್ನು ಮಾಡಿದ್ದಾರೆ ಎಂದು ಯೂನಿಯನ್ ನ ಅಧ್ಯಕ್ಷ ನಾಗೇಶ್ ಬಿಎಸ್ ಅವರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಪೂರ್ವ ತಾಲೂಕು ಕೆ ಆರ್ ಪುರಂ ಹೋಬಳಿ ಸೊನ್ನೇನಹಳ್ಳಿ ವಿಲೇಜ್ ನಲ್ಲಿರುವ ಟೀ ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ನೂರಾರು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು ಆಡಳಿತ ಮಂಡಳಿಯ ಕಾರ್ಮಿಕರನ್ನು ಖಾಯಂ ಮಾಡದೆ ಹಾಗೂ ಅವರನ್ನು ಖಾಯಂ ಆಗಿ ಮುಂದುವರಿಸದೆ ಲಾಬಿಯಿಂದ ಕಳೆದ ಜೂನ್ ತಿಂಗಳಿಂದ ಕಾರ್ಮಿಕರನ್ನು ಅಕ್ರಮವಾಗಿ ಕಾನೂನು ಬಹಿರವಾಗಿ ಬೀದಿಗೆ ತಳ್ಳಲಾಗಿದೆ. ಇದರಿಂದ ಕಾರ್ಮಿಕರ ಜೀವನಕ್ಕೆ ಕುತ್ತುಬಂದಿದ್ದು ಸಾಕಷ್ಟು ಸಮಸ್ಯೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ.
ಕಂಪನಿಯ ಬೆಳವಣಿಗೆ ಹಾಗೂ ಆದಾಯದ ಆಧಾರದ ಮೇಲೆ ಕಾರ್ಮಿಕರಿಗೆ ಭದ್ರತೆ ಸಿಗುವ ನಿಟ್ಟಿನಲ್ಲಿ 2011ರಲ್ಲಿ ಕಾರ್ಮಿಕರೆಲ್ಲರೂ ಸೇರಿಕೊಂಡು ಟೈಕೋ ಎಲೆಕ್ಟ್ರಾನಿಕ್ಸ್ ಎಂಪ್ಲಾಯಿಸ್ ಯೂನಿಯನ್ ಸಂಘ ಮಾಡಿಕೊಂಡರು. ಸಂಘಟನೆ ಮಾಡಿಕೊಂಡಿದ್ದೆ ಕಂಪನಿಗೆ ತಪ್ಪಾಯಿತೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಾರ್ಮಿಕ ಸಂಘಟನೆ ಮಾಡಿಕೊಂಡಿದ್ದ ಉದ್ದೇಶ ಕಾರ್ಮಿಕರಿಗೆ 3 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿಕೊಂಡು ಬರಲಾಗುತ್ತಿತ್ತು ಇದರಿಂದ ಕಂಪನಿಗೆ ಆರ್ಥಿಕವಾಗಿ ಹೊರೆ ಎನ್ನಿಸಿದಂತಾಗಿದೆ ಅದು ಗೊತ್ತಿಲ್ಲ ಇವೆಲ್ಲವನ್ನು ಮನೆಗೊಂಡ ಕಂಪನಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಖಾಯಂ ಕಾರ್ಮಿಕರನ್ನು ತೆಗೆಯುವ ಹಾಗೂ ಗುತ್ತಿಗೆ ಪದ್ಧತಿಯನ್ನು ಮುಂದುವರಿಸುವ ತಂತ್ರಕ್ಕೆ ಮರೆ ಹೋಗಿ ಕಾರ್ಮಿಕರಿಗೆ ಪಂಗನಾಮ ಹಾಕುವ ಉನ್ನಾರವು ನಡೆಯುತ್ತಿರುವುದು ಸೂಚನೆಯ ಸಂಗತಿಯಾಗಿದೆ.
ಇನ್ನು ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಿ ಮಾತನಾಡಿ, ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೇತನ ಪರಿಷ್ಕರಣೆ ಸೇರಿದಂತೆ ಕಾರ್ಮಿಕರಿಗೆ ಸಲ್ಲಬೇಕಾದ ಯೋಜನೆಗಳು ಸಿಗುವ ನಿಟ್ಟಿನಲ್ಲಿ ಹೋರಾಟಗಳನ್ನು ಮಾಡಿಕೊಂಡು ಪಡೆಯಬೇಕಾಗುತ್ತದೆ, ಅದೇ ರೀತಿ ಟಿಇ ಕನೆಕ್ಟಿವ್ ಇಂಡಿಯಾ ಕಂಪನಿ ಇಲ್ಲಿಯೂ ಕಾರ್ಮಿಕ ಸಂಘಟನೆ ಪ್ರಬಲವಾಗಿ ಕಾರ್ಮಿಕರ ವಿರೋಧ ನೀತಿಗಳನ್ನು ಬಹಿಷ್ಕರಿಸುತ್ತಾ ಕಂಪನಿ ವಿರುದ್ಧ ಪ್ರತಿಭಟನೆಗಳು ನಡೆದ ತೊಡಗಿದವು ಇದನ್ನೇ ಬಂಡವಾಳ ಮಾಡಿಕೊಂಡ ಕಂಪನಿಯ ಆಡಳಿತ ಮಂಡಳಿ ಕಾಯಂ ಕಾರ್ಮಿಕರನ್ನು ಕಡಿಮೆ ಮಾಡಲು ಪ್ರಾರಂಭ ಮಾಡಲಾಯಿತು. ಅದರ ಜೊತೆಗೆ ನಿವೃತ್ತಿ ಯೋಜನೆ ಹೆಸರಿನಲ್ಲಿ ಕಾರ್ಮಿಕರನ್ನು ಮನೆಗೆ ಕಳುಹಿಸುವ ಉನ್ನಾರವು ಸಹ ನಡೆಯಿತು. ಇದಕ್ಕೆ ಕಾರ್ಮಿಕರು ಒಪ್ಪದೇ ಇದ್ದಾಗ ಅವರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡುವ ದುರುದ್ದೇಶವೂ ನಡೆಯಿತು. ಇಂತಹ ಒತ್ತಡಗಳಿಂದ 607 ಜನರಿಂದ ಕಾಯಂ ಕಾರ್ಮಿಕರನ್ನು 2017ರ ರಲ್ಲಿ ಕಾಯಂ ಕಾರ್ಮಿಕರ ಸಂಖ್ಯೆ ಕೇವಲ 262 ಕ್ಕೆ ಇಳಿಯಿತು ಇದೇ ವೇಳೆ ಗುತ್ತಿಗೆ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರವಾಗಿ ಹೆಚ್ಚಳವಾಯಿತು.
ಕಾಯನ್ ಕಾರ್ಮಿಕರನ್ನು ತೆಗೆಯುವ ಗುತ್ತಿಗೆ ಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಕಂಪನಿ ಮುಂದೆ:
ಇದಲ್ಲದೆ ಕಂಪನಿಯ ಮತ್ತೊಂದು ದುರುದ್ದೇಶವೆಂದರೆ ಸಂಸ್ಥೆಯಲ್ಲಿ ಖಾಯಂ ಆಗಿರುವ ಕಾರ್ಮಿಕರನ್ನು ಕಂಪನಿಯಿಂದ ಸಂಪೂರ್ಣವಾಗಿ ತೆಗೆದುಹಾಕಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುವ ಉನ್ನಾರವು ಸಹ ದೊಡ್ಡ ಮಟ್ಟದಲ್ಲಿ ನಡೆಸಲಾಯಿತು. ಹೀಗಾಗಿ 2022 ಏಪ್ರಿಲ್ 20ರಿಂದ 262 ಖಾಯಂ ಕಾರ್ಮಿಕರನ್ನು ಕಂಪನಿಯ ಒಳಗೆ ಪ್ರವೇಶ ಮಾಡದೆ ಹೊರ ದಬ್ಬಲಾಯಿತು. ಆದರೆ ಕಂಪನಿಯ ಹೆಗ್ಗಳಿಕೆ ಎಂದರೆ ಸಂಬಳವನ್ನು ಎಲ್ಲಾ ಕಾರ್ಮಿಕರಿಗೂ ನೀಡಲಾಗಿದೆ. ಈ ಸಂಬಂಧ ಕಾನೂನು ಕಟ್ಟಳೆಗಳಿಗೂ ಸರ್ಕಾರದ ಮಟ್ಟಕ್ಕೂ ಸಂಸ್ಥೆಯ ಕಾನೂನುಬಾಹಿರ ಚಟುವಟಿಕೆ ಕೊಂಡಯಾಲಾಯಿತು. ಅಲ್ಲಿಯೂ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಅರ್ಜಿಯನ್ನು ಸಹ ಸಲ್ಲಿಸಲಾಯಿತು. ಸಂಸ್ಥೆಯಲ್ಲಿ ಕಾರ್ಮಿಕರೇ ಇಲ್ಲದಂತ ಆದಾಗ ಇದರಿಂದ ಕಂಪನಿಯ ಉತ್ಪಾದನೆ ಕಡಿಮೆಯಾದಾಗ ಖಾಸಗಿ ವೆಂಡರ್ಗಳ ಮೂಲಕ ತನ್ನ ಕಾರ್ಯ ಪ್ರವೃತ್ತಿಯನ್ನು ಪ್ರಾರಂಭ ಮಾಡಲಾಯಿತು. ಇಂತಹ ಕಂಪನಿಯ ಕಾನೂನುಬಾಹಿರ ಚಟುವಟಿಕೆಗಳ ವಾಸ್ತವ ಅಂಶಗಳನ್ನು ದಾಖಲೆ ಸಮೇತ ಸರ್ಕಾರದ ಮುಂದೆ ತರಲಾಯಿತು, ಸರ್ಕಾರವು ಕಂಪನಿಯ ಆಡಳಿತ ಮಂಡಳಿಗೆ ಕಾರ್ಮಿಕರನ್ನು ಲೇ ಆಫ್ ಮಾಡಲು ಅನುಮತಿ ನಿರಾಕರಿಸಿದೆ.
ಒಂದು ಕಡೆ ಆರ್ಡರ್ ಗಳೇ ಇಲ್ಲ ಎಂದು ಸುಳ್ಳು ಹೇಳುತ್ತಾ ಉತ್ಪಾದನಾ ಚಟುವಟಿಕೆಗಳನ್ನು ಬೇರೆ ಬೇರೆ ಕಂಪನಿಗಳಿಗೆ 2022 ರಿಂದ ನೀಡುತ್ತಾ ಬಂದು ಅದರ ವಾರ್ಷಿಕ ವಹಿವಾಟು ಹೆಚ್ಚಿಸಿಕೊಂಡು ಕಂಪನಿಯ ವೈವಾಟು 2020ರಲ್ಲಿ 44 ಕೋಟಿ ಇದ್ದ ಆದಾಯ 2024ರ ವತಿಗೆ 270 ಕೋಟಿ ಮೇಲೆ ದಾಟುತ್ತಿದೆ, ಇಷ್ಟೆಲ್ಲಾ ಆದಾಯ ಇದ್ದರೂ ಕಂಪನಿ ಲಾಸ್ ಆಗಿ ನಡೆಯುತ್ತಿದೆ ಎಂದು ಕಾರ್ಮಿಕರರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಕಾರ್ಮಿಕ ಸಚಿವರು ಹಾಗೂ ಸರ್ಕಾರ ಇದರ ಮಧ್ಯಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನೂರಾರು ಜನ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ಟಿವಿ ಕನೆಕ್ಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿರುದ್ದ ಮುಂದಿನ ದಿನಗಳಲ್ಲಿ ಕಾರ್ಮಿಕರ ಪರವಾಗಿ ಹಾಗೂ ವೇತನ ನೀಡದೆ ಸತಾಯಿಸುತ್ತಿರುವ ಹಿನ್ನೆಲೆ ಸಂಸ್ಥೆಗೆ ಕಾರ್ಮಿಕ ಸಂಘಟನೆಯಿಂದ ಗಡುವನ್ನು ನೀಡುತ್ತಿದ್ದು ಕಾರ್ಮಿಕರಿಗೆ ಬರಬೇಕಾದಂತಹ ವೇತನ ಹಾಗೂ ಯೋಜನೆಗಳ ಬಗ್ಗೆ ಸಂಸ್ಥೆಯು ರೂಪಿಸಿ ಕೊಡದಿದ್ದಲ್ಲಿ ಕಂಪನಿ ವಿರುದ್ಧ ಮುಂದಿನ ದಿನಗಳಲ್ಲಿ ಕಂಪನಿಯ ನೂರಾರು ಜನ ಕಾರ್ಮಿಕರು ಬೀದಿಗೆ ಬಂದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಂಪನಿಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷರಾದ ಜಗದೀಶ್ ಎಸ್ ಕೆ ಕಲ್ಯಾಣ್ ದರ್ಶಿಯಾದ ವಿರುಪಾಕ್ಷಿ ಜಂಟಿ ಕಾರ್ಯದರ್ಶಿಯಾದ ರಾಘವೇಂದ್ರ ಬಡಿಗೇರ್ ಹೇಮಾವತಿ ಟೀ ಸೇರಿದಂತೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಾಗೂ ಕೆಲಸ ಕಳೆದುಕೊಂಡಿರುವ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.