2028ರ ಚುನಾವಣೆಯಲ್ಲಿ ಗೆದ್ದು ನಾನೇ ಮುಖ್ಯ ಮಂತ್ರಿ.!
ನವದೆಹಲಿ: ಪ್ರಾದೇಶಿಕ ಪಕ್ಷ ಸ್ಥಾಪಿಸಿ, 2028ರ ಚುನಾವಣೆಯಲ್ಲಿ ಗೆದ್ದು ನಾನೇ ಮುಖ್ಯಮಂತ್ರಿಯಾ ಅಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಯಾವ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಾನು ದೆಹಲಿಗೆ ಬಂದಿಲ್ಲ. ಯಾರ ಕಾಲಿಗೂ ಬಿದ್ದು ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಕೇಳುವುದಿಲ್ಲ. ನಾನೇ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಎಂದರು.
2028ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ. ಯಾವು ಏನೇ ಸರ್ವೆ ಮಾಡಿದರೂ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಜೆಸಿಬಿ ಆಗುತ್ತೋ? ಏನಾಗುತ್ತೋ? ನೋಡೋಣ ಎಂದು ಹೇಳಿದರು.
ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ನಾನು ಆ ಪಕ್ಷ ಸೇರಲ್ಲ. ವಿಜಯೇಂದ್ರ, ಯಡಿಯೂರಪ್ಪ, ರಾಘವೇಂದ್ರರ ಕುಟುಂಬ ಇರುವವರೆಗೂ ನಾನು ಪಕ್ಷ ಸೇರಲ್ಲ. ನಾವು ಸ್ವಾಭಿಮನದಿಂದ ಬದುಕಿರುವವರು. ಭ್ರಷ್ಟ ಕುಟುಂಬದ ನೇತೃತ್ವವನ್ನು ನಾವು ಒಪ್ಪಲ್ಲ ಎಂದರು.
ಮಗನ ಮದುವೆ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಕೆಲ ಹಳೇಯ ಸ್ನೇಹಿತರ ಭೇಟಿಗೆ ಬಂದಿದ್ದೇನೆ. ಯಾವ ಬಿಜೆಪಿ ನಾಯಕರನ್ನೂ ಭೇಟಿಯಾಗಲ್ಲ. ಪಕ್ಷ ಸೇರುವ ಬಗ್ಗೆಯೂ ಚರ್ಚಿಸಲ್ಲ ಎಂದು ತಿಳಿಸಿದ್ದಾರೆ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.