Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಐಸಿಸಿ ಟಿ20 ಬ್ಯಾಂಕಿಂಗ್: ಅಗ್ರಸ್ಥಾನಕ್ಕೆ ಮರಳಿದ ಭಾರತ

ದುಬೈ: ಭಾರತ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದೆ.

ಜಿಂಬಾಬೈ ಎದುರಿನ ಸರಣಿಯನ್ನು 2-0ಯಿಂದ ಕೈವಶ ಮಾಡಿಕೊಂಡ ನಂತರ ಭಾರತ ತಂಡವು ಬ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈಚೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ಎದುರಿನ ಸರಣಿಗಳಲ್ಲಿ ಸತತ ಸೋತಾಗ ಮೊದಲ ಸ್ಥಾನವನ್ನು ಕಳೆದುಕೊಂಡಿತ್ತು.

ಅಗ್ರಕ್ರಮಾಂಕದ ಬ್ಯಾಟರ್ ಇಶಾನ್ ಕಿಶನ್ ಅವರು ಬ್ಯಾಟರ್‌ಗಳ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 892 ಅಂಕಗಳು ಇವೆ. ಅವರ ನಂತರದ ಸ್ಥಾನದಲ್ಲಿ ಅಭಿಷೇಕ್ ಶರ್ಮಾ (858 ಅಂಕ) ಇದ್ದಾರೆ.

ತಿಲಕ್ ವರ್ಮಾ ಅವರು ಎರಡನೇ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು. ಅವರೂ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಖಾತೆಯಲ್ಲಿ 733 ಅಂಕಗಳಿವೆ.

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು 683 ಅಂಕಗಳೊಂದಿಗೆ ಅಗ್ರ ಹತ್ತರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಗಾಯದಿಂದಾಗಿ ಅವರು ಜಿಂಬಾಬೈ ಎದುರಿನ ಸರಣಿಯಲ್ಲಿ ಆಡಿಲ್ಲ.
أ,
ಸೂರ್ಯವಂಶಿ ಮಿಂಚು; ಭಾರತಕ್ಕೆ ಸರಣಿ

ವೈಭವ್‌ ಸೂರ್ಯವಂಶಿ ಅವರ ಅಮೋಘ ಬ್ಯಾಟಿಂಗ್ ಮತ್ತು ಮಯಂಕ್ ಯಾದವ್ ಬೌಲಿಂಗ್ ಮುಂದೆ ಜಿಂಬಾಬೈ ತಂಡವು ಇಲ್ಲಿ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತದ ಎದುರು ಶರಣಾಯಿತು. ಶ್ರೇಯಸ್ ಅಯ್ಯ‌ರ್ ಬಳಗವು ಸರಣಿಯಲ್ಲಿ 3-0ಯಿಂದ ನಿರಾಯಾಸ ಜಯಸಾಧಿಸಿತು.

ಶ್ರೇಯಸ್ ನಾಯಕತ್ವ ವಹಿಸಿಕೊಂಡ ನಂತರ ಭಾರತ ತಂಡವು ಐರ್ಲೆಂಡ್ (0-2) ಮತ್ತು ಇಂಗ್ಲೆಂಡ್ (0-4) ತಂಡಗಳ ಎದುರು ಸರಣಿ ಸೋಲು ಅನುಭವಿಸಿತ್ತು. ಇಲ್ಲಿ ಜಿಂಬಾಬೈ ಎದುರು ಕ್ಲೀನ್‌ಸ್ವೀಪ್ ಜಯ ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ವೈಭವ್ (81; 49ಎಸೆತ) ಅವರ ಅಬ್ಬರದ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 192 ರನ್ ಗಳಿಸಿತು. ಅದಕ್ಕುತ್ತರವಾಗಿ ಜಿಂಬಾಬೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 157 ರನ್ ಗಳಿಸಿತು. ರಿಯಾನ್ ಬುರಿ (ಔಟಾಗದೇ 54; 43ಎ, 4x5) ಅವರು ಅರ್ಧಶತಕ ಗಳಿಸಿದರು. ಆದರೆ ಅವರ ಪ್ರಯತ್ನ ತಂಡದ ಗೆಲುವಿಗೆ ಸಾಕಾಗಲಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಭಿಷೇಕ್ ಶರ್ಮಾ (2; 4ಎ) ಮತ್ತೊಮ್ಮೆ ವಿಫಲರಾದರು. ಎರಡನೇ ಓವರ್ ಹಾಕಿದ ಬ್ಲೆಸಿಂಗ್ ಮುಝರಬಾನಿ ಅವರ ಎಸೆತದಲ್ಲಿ ಅಭಿಷೇಕ್ ಅವರು ಟಾಟಿವನಾಶೆ ಮರುಮಾನಿಗೆ ಕ್ಯಾಚಿತ್ತರು.

ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಇಶಾನ್ ಕಿಶನ್ (29 ರನ್) ಅವರು ವೈಭವ್‌ ಜೊತೆ ಸೇರಿಕೊಂಡರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 75 ರನ್ ಸೇರಿಸಿದರು. ಅದರಲ್ಲಿ ವೈಭವ್ ಪಾಲು 39 ರನ್‌ಗಳು. ಇಶಾನ್ ನಿರ್ಗಮಿಸಿದ ನಂತರ ನಾಯಕ ಶ್ರೇಯಸ್‌ ಜೊತೆಗೆ ವೈಭವ್ 50 ರನ್ ಸೇರಿಸಿದರು. ಈ ಜೊತೆಯಾಟದಲ್ಲಿಯೂ ಅವರದ್ದೇ ಸಿಂಹಪಾಲು. ಆದರೆ ಅವರು ಇಲ್ಲಿ 31 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅವರ ಈ ಇನಿಂಗ್ಸ್‌ನಲ್ಲಿ ಒಟ್ಟು 4 ಸಿಕ್ಸರ್ ಮತ್ತು 8 ಬೌಂಡರಿಗಳಿದ್ದವು. ಮೊದಲ ಪಂದ್ಯದಲ್ಲಿ 18 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಸರಣಿಯಲ್ಲಿ ಅವರು ಒಟ್ಟು 151 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಆತಿಥೇಯರಿಗೆ ಮೊದಲ ಎಸೆತದಲ್ಲಿಯೇ ವೇಗಿ ಮಯಂಕ್ ಯಾದವ್ ಆಘಾತ ನೀಡಿದರು.

ಬ್ರಯನ್ ಬೆನಟ್ ಅವರು ಮಯಂಕ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ವೈಭವ್ ಸೂರ್ಯವಂಶಿಗೆ ಕ್ಯಾಚ್ ಕೊಟ್ಟರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ