LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ವಿಜಯೇಂದ್ರಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಬೇಕು'- ಯತ್ನಾಳ್ ಕಿಡಿ

ಚಿಕ್ಕೋಡಿ : ವಿಜಯೇಂದ್ರ ನಾಯಕತ್ವವನ್ನ ಜನ ತಿರಸ್ಕಾರ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಚಿಕ್ಕೋಡೊಯಲ್ಲಿ ಬಿಜೆಪಿ ಸೋಲಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರತ್ ಬೊಮ್ಮಾಯಿ ಸೋಲು ನಿಜಕ್ಕೂ ಆಘಾತ ತಂದಿದೆ. ರೌಡಿಯನ್ನ ಜನ ಆಯ್ಕೆ ಮಾಡಿದ್ದಾರೆ. ಜನರ ತೀರ್ಪು ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಿದೆ. ಹೊಸ ನಾಯಕತ್ವ ರಾಜ್ಯಕ್ಕೆ ಮತ್ತು ಬಿಜೆಪಿಗೆ ಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲು ದುರ್ದೈವ. ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಪಾಪ ಕೊನೆಯ ವರೆಗೂ ಯೋಗೇಶ್ವರ್ ಬಿಜೆಪಿ ಪರ ಒಲವು ತೋರಿದ್ದರು. ಜನ ಯೋಗೇಶ್ವರ್ ಕೆಲಸ ಮಾಡಿದ್ದನ್ನ ನೋಡಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು ಮುಂದೆ ಯೋಚನೆ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಇನ್ನಾದರೂ ಬಿಜೆಪಿ, ಜೆ.ಪಿ.ನಡ್ಡಾ ಅವರು ಕಣ್ಣು ತೆರೆಯಬೇಕು ಎಂದು ತಿಳಿಸಿದರು.

ವಕ್ಫ್ ಹೋರಾಟ ಈಗ ಆರಂಭವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುತ್ತೇವೆ. ಕಾಂಗ್ರೆಸ್ ಗೆದ್ದರೆ ಮುಂದೆ ರೈತರ ಜಮೀನು ಕೂಡ ಹೋಗುತ್ತವೆ. ಹೈಕಮಾಂಡ್ ಬಳಿ ವಿಜಯೇಂದ್ರ ವಿರುದ್ಧ ನಿಯೋಗ ತೆರಳುತ್ತಿವೆ. ಕೇವಲ ವಿಜಯೇಂದ್ರ, ಯಡಿಯೂರಪ್ಪ ಅವರಿಗೆ ಅಪಾಯಿಟ್‌ಮೆಂಟ್ ಕೊಟ್ಟರೆ ಹೀಗೆ ಆಗೋದು. ಬಿಜೆಪಿ ಹೈಕಮಾಂಡ್ ಬಳಿ ಅಪ್ಪ-ಮಕ್ಕಳ ಬಗ್ಗೆ ಹೇಳುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST