ಸಿರುಗುಪ್ಪ: ತೆಕ್ಕಲಕೋಟೆ ಯಿಂದ ಅಕ್ರಮವಾಗಿ ಸರ್ಕಾರಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಮತ್ತು ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.
ತೆಕ್ಕಲಕೋಟೆ ಪಟ್ಟಣದ ಖಾದ್ರಿಯಾ ಪಬ್ಲಿಕ್ ಶಾಲೆ ಹತ್ತಿರ ಇರುವ ಮನೆಯಿಂದ ಹೆದ್ದಾರಿ ಯ ಬೈಪಾಸ್ ರಸ್ತೆ, ಮುಖಾಂತರ ಸಿರುಗುಪ್ಪ ಕಡೆಗೆ ಮೂರು ಮೋಟಾರ್ ಸೈಕಲ್ ಗಳಲ್ಲಿ ಅಕ್ಕಿಯನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಮತ್ತು ಪಿ ಎಸ್ ಐ
ಸದ್ದಾಂ ಹುಸೇನ್ ಅವರ ತಂಡದ ಪೊಲೀಸರು ದಾಳಿ ನಡೆಸಿ 50ಕೆಜಿ ತೂಕದ 6 ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಣೆಯಾಗುವ ಪಡಿತರ ಅಕ್ಕಿ ಯಾಗಿದ್ದು ಇವುಗಳನ್ನು ಅಕ್ರಮ ಸಾಗಾಣಿಕೆ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ಕಿಯನ್ನು, ಅಕ್ಕಿ ಸಾಗಿಸುತ್ತಿದ್ದ ಮೋಟಾರ್ ಸೈಕಲ್ ಗಳನ್ನು , ಚಾಲಕರನ್ನು ಮತ್ತು ಸಹಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ ವಿವರ. ಮೇ 4. ತೆಕ್ಕಲಕೋಟೆ ಪಟ್ಟಣದಲ್ಲಿ ದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನಗಳನ್ನು ಮತ್ತು ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.