E-PAPER
16 Nov 2026, 02:20:28 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜಾತಿ ಸಮೀಕ್ಷೆಯಲ್ಲಿ "ಲಿಂಗಾಯತ" ಧರ್ಮ ಎಂದು ನಮೂದಿಸಿ: ನ್ಯಾಯವಾದಿ ಸುನೀಲ ಸಾಣಿಕೊಪ್ಪ

ಬೆಳಗಾವಿ ; ಮುಂದಿನ ತಿಂಗಳು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸರ್ಕಾರವು ಧರ್ಮದ ಕಾಲಂನಲ್ಲಿ "ಲಿಂಗಾಯತ" ಎಂದು ನಮೂದಿಸಬೇಕು. ಒಂದು ವೇಳೆ ಧರ್ಮದ ಕಾಲಂನಲ್ಲಿ "ಲಿಂಗಾಯತ" ಎಂದು ಬರೆಯಲು ಅವಕಾಶ ಕೊಡದಿದ್ದರೆ, ಧರ್ಮದ ಕಾಲಂನಲ್ಲಿ "ಇತರೆ ಅಥವಾ ಯಾವುದೂ ಇಲ್ಲ" ಎಂದು ನಮೂದಿಸಿ. ಆಗ ಜಾತಿ ಕಾಲಂನಲ್ಲಿ "ಲಿಂಗಾಯತ" ಅಥವಾ "ಲಿಂಗಾಯತದ ಜೊತೆಗೆ ತಮ್ಮ ಜಾತಿ"ಯನ್ನು ನಮೂದಿಸುವಂತಾಗಬೇಕು ಅಥವಾ ಜಾತಿ ಕಾಲಂನಲ್ಲಿ "ಲಿಂಗಾಯತ" ಮಾತ್ರ ಮತ್ತು ಉಪಜಾತಿ ಕಾಲಂನಲ್ಲಿ"ತಮ್ಮ ಜಾತಿ/ಕುಲಕಸಬು/ಒಳಪಂಗಡ"ವನ್ನು ನಮೂದಿಸುವಂತಾಗಬೇಕು ಎಂದು ಸುನೀಲ ಸಾಣಿಕೊಪ್ಪ, ನ್ಯಾಯವಾದಿ ಮನವಿ ಮಾಡಿದರು.
ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ, ಮಹಾಂತೇಶ ನಗರ, ಬೆಳಗಾವಿಯಲ್ಲಿ ದಿನಾಂಕ.24.08.2025ರಂದು ವಚನ ವಿಶ್ಲೇಷಣೆ ಸಾಮೂಹಿಕ ಪ್ರಾಥ೯ನೆ ಜರುಗಿತು.
ಈ ಸಂದರ್ಭದಲ್ಲಿ ಸುನೀಲ ಸಾಣಿಕೊಪ್ಪ "ಲಿಂಗಾಯತ ಧರ್ಮ ಮತ್ತು ಜಾತಿ-ಸಮೀಕ್ಷೆ" ಕುರಿತು ಮಾತನಾಡಿ, ರಾಜ್ಯದಲ್ಲಿ 108 ಒಳಪಂಗಡಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಬಹುದೊಡ್ಡ ಸಮಾಜವಾಗಿದ್ದರೂ ಕೂಡ ಸಮೀಕ್ಷೆ/ಜನಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಕೇವಲ 11% ಮಾತ್ರ ಲಿಂಗಾಯತರು ಮತ್ತು ಕೇವಲ 10% ಮಾತ್ರ ಒಕ್ಕಲಿಗರು ಎಂದು ದಾಖಲಿಸಲಾಗಿದೆ ಎಂದು ತಿಳಿಸಿದರು.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ಅವಕಾಶವಿಲ್ಲದ ಬಹುತೇಕ ಜನರು ಧರ್ಮವನ್ನು "ಹಿಂದೂ" ಅಥವಾ "ಇತರರು" ಎಂದು ನಮೂದಿಸಿದ ಕಾರಣ, ಲಿಂಗಾಯತರ ನೈಜ ಜನಸಂಖ್ಯೆ ವರದಿಯಾಗುತ್ತಿಲ್ಲ. ಜಾತಿ ಕಾಲಂನಲ್ಲಿ ಸಹ ಲಿಂಗಾಯತರ ಎಲ್ಲ ಒಳಪಂಗಡಗಳಿಗೆ 'ಲಿಂಗಾಯತ' ಎಂದು ಬರೆಸಲು ಅವಕಾಶವಿಲ್ಲ. ಹೀಗಾಗಿ ಧರ್ಮ, ಜಾತಿ ಮತ್ತು ಉಪಜಾತಿ ಕಾಲಂಗಳಲ್ಲಿ ಬಹುತೇಕ ಒಳಪಂಗಡಗಳಿಗೆ 'ಲಿಂಗಾಯತ' ಎಂದು ಬರೆಸಲು ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಅಂಕಿ-ಅಂಶಗಳ ಪ್ರಕಾರ, ಲಿಂಗಾಯತ ಸಮುದಾಯ ಕ್ಷೀಣಿಸುತ್ತಿದೆ.
  ಆದ್ದರಿಂದ, ಲಿಂಗಾಯತ ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ ಸರ್ಕಾರವು ಧರ್ಮದ ಕಾಲಂನಲ್ಲಿ "ಲಿಂಗಾಯತ" ಎಂದು ನಮೂದಿಸಲು ಲಿಂಗಾಯತರಿಗೆ ಅವಕಾಶ ಮಾಡಿಕೊಡಬೇಕು ಎಂದು ಸುನೀಲ ಸಾಣಿಕೊಪ್ಪ ವಿನಂತಿಸಿದರು.
       ಇದೇ ಸಂದಭ೯ದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಈರಣ್ಣಾ ದೇಯಣ್ಣವರ ಮಾತನಾಡಿ, ಮೊನ್ನೆ ವೀರಶೈವ ಮಹಾಸಭಾದವರು 'ಲಿಂಗಾಯತ ಅಥವಾ ವೀರಶೈವ' ಎಂದು ನಮೂದಿಸಬೇಕೆಂದು ಗೊಂದಲದ ಹೇಳಿಕೆ ನೀಡಿದ್ದು ಅದು ಸರಿಯಲ್ಲ. ಅದನ್ನು ಲಿಂಗಾಯತ ಸಂಘಟನೆ ವಿರೋಧಿಸುತ್ತದೆ. ಲಿಂಗಾಯತರ ಜಾತಿಸಮೀಕ್ಷೆ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತಾಳಬೇಕು. ಲಿಂಗಾಯತರಿಗೆ ಸಮೀಕ್ಷೆಯಲ್ಲಿ ತಮ್ಮ ಧರ್ಮವನ್ನು ನಮೂದಿಸಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಲಿಂಗಾಯತರನ್ನು ಗುರುತಿಸುವ ವ್ಯವಸ್ಥೆ ಮಾಡದೇ ಹೋದರೆ, ಜಾತಿಸಮೀಕ್ಷಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರಾರ೦ಭದಲಿೢ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡಿಸಿಕೂಟ್ಟರು, ಸುರೇಶ ನರಗುಂದ,ಬಿ.ಪಿ.ಜೇವಣಿ, ಬಸಮ್ಮ ಮಠದ, ಬಸವರಾಜ ಬಿಜ್ಜರಗಿ, ಅಕ್ಕಮಹಾದೇವಿ, ಜಯಶ್ರೀ ಚಾವಲಗಿ,ವಿ.ಕೆ.ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು ಕುಮಾರಿ ಡಾಕ್ಟರ್ ದಿವ್ಯ ಮತ್ತಿಕಟ್ಟಿ ದಾಸೋಹ ಸೇವೆ ಸಲ್ಲಿಸಿದರು, ಸದಾಶಿವ ದೇವರಮನಿ,ಬಸವರಾಜ ಕರಡಿಮಠ, ಗುರುಸಿದ್ದಪ್ಪ ರೇವಣ್ಣವರ, ಮ೦ಗಳಾ ಕಾಗತಿಕರ,ಸುಜಾತಾ ಮತ್ತಿಕಟ್ಟಿ,ವಿದ್ಯಾ ಕರಕಿ,  ಬಾಬಣ್ಣ ತಿಗಡಿ, ಶಿವಾನಂದ ತಲೢೂರ, ಮಲಗೌಡ ಪಾಟೀಲ, ಶೇಖರ ವಾಲಿಇಟಗಿ,ಬಸವರಾಜ ಮತ್ತಿಕಟ್ಟಿ,ಶ್ರದ್ಧಾ ಸದಾಶಿವಯ್ಯ,ಪ್ರೀತಿ ಮಠದ, ಆನಂದ ಕರಕಿ, ಪ.ಬ.ಕರಿಕಟ್ಟಿ,ಇವರೆಲ್ಲರೂ ವಾರದ ಪ್ರಾಥ೯ನೆಯಲಿೢ ಭಾಗವಹಿಸಿದ್ದರು, ಸ೦ಗಮೇಶ ಅರಳಿ ನಿರೂಪಿಸಿ ವ೦ದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ