LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ರಕ್ಷಣೆ ಇಲ್ಲದಂತಾಗಿದೆ

ಶಿವಮೊಗ್ಗ,ಫೆ. 13 :ರಾಜ್ಯ ಸರ್ಕಾರದ ಆಡಳಿತದಲ್ಲಿ ಹಿಂದು ಳಿದ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು ಇದಕ್ಕೆ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಜನಾ ರ್ಧನ್ ಅವರು ಕರ್ತವ್ಯ ನಿರತರಾಗಿದ್ದಾಗ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಿದ ಪ್ರಕರಣವೆ ಸಾಕ್ಷಿ ಆಗಿದೆ ಎಂದು  ಕಲಬುರಗಿಯ ಈಡಿಗ ಮಠದ  ಪ್ರಣವಾನಂದ ಸ್ವಾಮೀಜಿ ಹೇಳದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ನಮ್ಮ ಸಮಾಜ ನೈತಿಕ ಸ್ಥೈರ್ಯ ತುಂಬಬೇಕಾಗಿದೆ. ಅವರ ಮನೆಗೆ ತೆರಳಿ ಒಂದು ಗಂಟೆ ಕಾಲ ಮಾತನಾಡಿ ಧೈರ್ಯ ತುಂಬಿದ್ದೇವೆ. ಹಿಂದುಳಿದ ವರ್ಗದ ಪರವಾಗಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಪಮಾನ ಆದಾಗ ಆರೋಪಿಗಳನ್ನು ಬಂಧಿಸಲು ತೋರಿಸಿದಿ ಆಸಕ್ತಿಯುನ್ನು ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದರು.

ಭದ್ರಾವತಿ ಭಾರತದ ಒಂದು ಭಾಗ ವಾಗಿದೆ. ಅದು ಕೂಡ ಸಂವಿಧಾನಕ್ಕೆ ಒಳ ಪಟ್ಟಿದೆ. ಆದರೂ ಕೂಡ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.ಈಡಿಗ ಸಮಾಜ ಸ್ವಾಭಿಮಾನಿ ಸಮಾಜವಾಗಿದೆ. ಹಿಂದಿನ ಸರ್ಕಾರ ನಿಗಮ ಘೋಷಣೆ ಮಾಡಿದ್ದರೂ ಈಡಿಗ ನಿಗಮಕ್ಕೆ ಈ ಸರ್ಕಾರ ಒಂದು ರೂ. ಕೂಡ ನೀಡಿಲ್ಲ. ಈಡಿಗ ಅಧಿಕಾರಿಗಳನ್ನು ದಮನಿಸುವ ಕೆಲಸ ಈ ಸರ್ಕಾ ರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹಿಳಾ ಅಧಿಕಾರಿಗೆ ಬೆದರಿಕೆ ಅಥವಾ ಕಿರಿ ಕಿರಿ ಸರ್ಕಾರ ಅಥವಾ ಹಿರಿಯ ಅಧಿಕಾರಿಗಳು ಮಾಡಿದ್ದಲ್ಲಿ ಈಡಿಗ ಸಮಾಜ ಸುಮ್ಮನಿರುವುದಿಲ್ಲ. ತಕ್ಕ ಪಾಠ ಕಲಿಸುತ್ತೇವೆ ಎಂದರು.

ಗ್ಯಾರಂಟಿಗಳಿಗಿಂತ ನಮ್ಮ ಸಮಾಜದ ಹೆಣ್ಣು ಮಕ್ಕಳ ಸ್ವಾಭಿಮಾನ ದೊಡ್ಡದು. ಸರ್ಕಾರದ ವಿಳಂಬ ನೀತಿ ಒಂದೇ ಕಡೆ ಹೋಗುತ್ತಿದೆ. ಆರೋಪಿತನ ತಪ್ಪಿಲ್ಲದಿದ್ದರೆ ಧ್ವನಿ ಮುದ್ರಿತ ಸ್ಯಾಂಪಲ್ ಅನ್ನು ಎಫ್‌ಎಸ್‌ಎಲ್ ಗೆ ಕಳಿಸಿ ತನಿಖೆ ಮಾಡಲಿ. ಕೂಡಲೇ ಸಿಎಂ, ಡಿಸಿಎಂ ಮತ್ತು ಸೋನಿಯಾ ಗಾಂಧಿ ಅವರು ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಈಡಿಗ ಸಮಾಜದ ಮತಗಳು ಬೇಡವೆಂದು ಘೋಷಿಸಲಿ ಎಂದ ಅವರು ಬಳಿಕ ಜಿಲ್ಲಾ ರಕ್ಷಣಾಧಿಕಾರಿಗಳಿಗೂ ಮನವಿ ನೀಡಿ ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ವೆಂಕ ಟೇಶಮೂರ್ತಿ, ಪುಷ್ಪಲತಾ ಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಪ್ರೀತಾ ಪೂಜಾರಿ, ಮಂಜುನಾಥ್, ಯೋಗೇಂದ್ರ, ಲಲಿತಾ ಹೊನ್ನಪ್ಪ, ಮಂಜುಳಾ ರಾಘವ, ವಾಸಪ್ಪ ಮಾಸ್ತಿಕಟ್ಟೆ, ಸಚಿನ್ ನಾಯಕ್, ದೇವರಾಜ್ ನಾಯಕ್, ಪ್ರಶಾಂತ್ ನಾಯಕ್, ಮತ್ತಿತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST