Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಆದಾಯ ತೆರಿಗೆ ಫೈಲ್,  ಬಿಪಿಎಲ್ ಕಾರ್ಡ್‌ ರದ್ದು ಇದು ಯಾವ ನ್ಯಾಯ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದ ಮೇಲೆ ರಾಜಕೀಯ: ಪಾನ್ ಕಾರ್ಡ್ ಮೂಲಕ ವೇತನದ ಆಧಾರದಲ್ಲಿ ಬಡವರ ಅಕ್ಕಿಗೆ  ಕತ್ತರಿ.

ರಾಜ್ಯದ ಆಡಳಿತ ವ್ಯವಸ್ಥೆ ಜನರ ಬದುಕನ್ನು ಸುಧಾರಿಸಲು ಇದ್ದದ್ದೇ ಹೊರತು, ಬಡವರ ಹೊಟ್ಟೆಗೆ ಹೊಡೆತ ನೀಡಲು ಅಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳು ಸರ್ಕಾರದ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟಿಸುತ್ತಿವೆ. ಕೇಂದ್ರ ಸರ್ಕಾರವು ಬಡವರಿಗಾಗಿ ಅಕ್ಕಿ ಪೂರೈಕೆ ಮಾಡುತ್ತಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿ, ಬಡವರ ಅನ್ನಭಾಗ್ಯಕ್ಕೆ ಕತ್ತರಿ ಹಾಕಿರುವುದು ನಿಜಕ್ಕೂ ಖಂಡನೀಯ.

ಬಿಪಿಎಲ್ ಕಾರ್ಡ್‌ಒಂದು ಕುಟುಂಬದ ಆರ್ಥಿಕ ಸ್ಥಿತಿಯ ಪ್ರತಿಬಿಂಬ. ಅದರಲ್ಲಿ ಕುಟುಂಬದ ಎಲ್ಲಾ ಸದಸ್ಯರ ವಿವರಗಳು ಸೇರಿರುತ್ತವೆ. ಆದರೆ ಇತ್ತೀಚಿನ ಕ್ರಮಗಳಲ್ಲಿ, ಪಾನ್ ಕಾರ್ಡ್ ಮೂಲಕ ಮಕ್ಕಳ ಸಂಬಳದ ಮಾಹಿತಿಯನ್ನು ಆಧಾರ ಮಾಡಿಕೊಂಡು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂಬುದು ತೀವ್ರ ಆಕ್ಷೇಪಾರ್ಹ. ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಮಕ್ಕಳ ಆದಾಯವನ್ನು ಆಧಾರವಿಟ್ಟು, ಗ್ರಾಮಗಳಲ್ಲಿ ಬದುಕುತ್ತಿರುವ ತಂದೆ-ತಾಯಿಗಳ ಹಕ್ಕನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ?

ಮಕ್ಕಳು ಉದ್ಯೋಗಕ್ಕಾಗಿ ನಗರಗಳಿಗೆ ಹೋಗುವುದು ಇಂದಿನ ಕಾಲದ ವಾಸ್ತವ. ಆದರೆ ಅವರು ಗಳಿಸುವ ಸಂಬಳದ ಮೇಲೆ, ಗ್ರಾಮದಲ್ಲಿ ಸ್ವತಂತ್ರವಾಗಿ ಬದುಕುತ್ತಿರುವ ಪೋಷಕರ ಅನ್ನಭಾಗ್ಯವನ್ನು ನಿಲ್ಲಿಸುವುದು ಮಾನವೀಯತೆಯ ವಿರುದ್ಧದ ಕ್ರಮ. ಪಾನ್ ಕಾರ್ಡ್‌ನ ಆಧಾರದ ಮೇಲೆ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಳ ಲೆಕ್ಕಾಚಾರವಾಗಬಹುದು, ಆದರೆ ಅದರ ಪರಿಣಾಮ ಮಾನವ ಜೀವನಗಳ ಮೇಲೆ ಬೀಳುವ ನೋವು ಅಳೆಯಲಾಗದು.

ಇದರಿಂದ ಲಕ್ಷಾಂತರ ಪೋಷಕರು ಅನ್ನಭಾಗ್ಯದಿಂದ ವಂಚಿತರಾಗಿದ್ದಾರೆ. ತಮ್ಮ ಮಕ್ಕಳ ಮೇಲೆ ಅವಲಂಬಿಸದೇ, ಸ್ವಾಭಿಮಾನದಿಂದ ಬದುಕುತ್ತಿದ್ದ ಹಿರಿಯರು ಇಂದು ಅಸಹಾಯಕರಾಗಿದ್ದಾರೆ. ಇನ್ನೊಂದೆಡೆ, ನಗರಗಳಲ್ಲಿ ಜೀವನ ನಡೆಸುವುದು ದುಸ್ತರವಾಗಿರುವ ಕಾರಣದಿಂದ ಮಕ್ಕಳು ಸಹ ಪೋಷಕರಿಗೆ ಸಹಾಯ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಈ ಕ್ರಮವು ಬಡವರ ಬದುಕಿಗೆ ಮತ್ತಷ್ಟು ಹೊರೆ ಆಗಿದೆ.

ಸರ್ಕಾರವು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಾನ್ ಕಾರ್ಡ್ ಆಧಾರದಲ್ಲಿ ರದ್ದುಗೊಂಡಿರುವ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಮರುಪರಿಶೀಲನೆ ಮಾಡಬೇಕು. ಅನ್ನಭಾಗ್ಯ ಯೋಜನೆಯನ್ನು ಪುನಃ ಜಾರಿಗೊಳಿಸುವ ಮೂಲಕ ಬಡವರ ಬದುಕಿಗೆ ಮರುಜೀವ ತುಂಬಬೇಕು. ಇದು ಕೇವಲ ಒಂದು ಯೋಜನೆ ಅಲ್ಲಇದು ಅನೇಕ ಕುಟುಂಬಗಳ ಬದುಕಿನ ಹಾದಿ.

ಇಂದು ಅನ್ನಭಾಗ್ಯದಿಂದ ವಂಚಿತರಾದ ಜನರ ಆಕ್ರೋಶ ಹೆಚ್ಚುತ್ತಿದೆ. ಅವರ ನೋವು ಶಾಪವಾಗಿ ಪರಿಣಮಿಸುತ್ತಿದೆ. ಈ ಅಸಮಾಧಾನ ಮುಂದಿನ ಚುನಾವಣೆಗಳಲ್ಲಿ ಸ್ಪಷ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.



ಸರ್ಕಾರ ಇನ್ನಾದರೂ ಕಣ್ತೆರೆದು, ಪಾನ್ ಕಾರ್ಡ್‌ನಂತಹ ತಾಂತ್ರಿಕ ಮಾನದಂಡಗಳಿಗಿಂತ ಮಾನವೀಯತೆಯನ್ನು ಮುಖ್ಯವಾಗಿಟ್ಟುಕೊಂಡು ಬಡವರ ಹಕ್ಕುಗಳನ್ನು ಕಾಪಾಡಬೇಕು. ಅನ್ನಭಾಗ್ಯಕ್ಕೆ ಮರುಜೀವ ತುಂಬುವುದು ಸರ್ಕಾರದ ನೈತಿಕ ಜವಾಬ್ದಾರಿ.
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.


 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ