
ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲ ಯದಲ್ಲಿ (ಜೆಜಿಯು) 'ಭಾರತ ಮತ್ತು ಜಪಾನ್‌ನಲ್ಲಿ ಜಾಗತಿಕ ಶಿಕ್ಷಣದ ಭವಿಷ್ಯ: ಜ್ಞಾನ ಮತ್ತು ನಾವೀನ್ಯತೆ ವಿನಿಮಯ; ಎಐ ಮತ್ತು ಉದ್ಯೋಗಗಳ ಭವಿಷ್ಯ' ಕುರಿತು ಭಾರತ-ಜಪಾನ್ ಉನ್ನತ ಶಿಕ್ಷಣ ಸಮಾವೇಶ ನಡೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಆನ್‌ಲೈನ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ವಿನಿಮಯ ಒಪ್ಪಂದ ಮತ್ತು ಅಲ್ಪಾವಧಿಯ ವಿದೇಶ ಅಧ್ಯಯನ ಕಾರ್ಯಕ್ರಮ ರೂಪಿಸಿದೆ. ಇದರಿಂದ ಎರಡೂ ದೇಶದ ವಿದ್ಯಾರ್ಥಿಗಳ ಕಲಿಕೆಗೆಹೆಚ್ಚು ಅನುಕೂಲವಾಗಲಿದೆ ಎಂದರು.
ಜೆಜಿಯು ಸ್ಥಾಪಕ ಉಪಕುಲಪತಿ ಪ್ರೊಫೆಸರ್‌ಸಿ. ರಾಜ್ ಕುಮಾರ್ ಮಾತನಾಡಿ, ಓ.ಪಿ. ಜಿಂದಲ್ ಗ್ಲೋಬಲ್ ವಿಶ್ವವಿದ್ಯಾಲಯವು . ಟೋಕಿಯೊ ವಿಶ್ವವಿದ್ಯಾಲಯದೊಂದಿಗೆ ವಿದ್ಯಾರ್ಥಿಗಳ ವಿನಿಮಯ ಒಪ್ಪಂದ ಮತ್ತು ಅಲ್ಪಾವಧಿಯ ವಿದೇಶ ಅಧ್ಯಯನ ಕಾರ್ಯಕ್ರಮ ರೂಪಿಸಿದೆ. ಇದರಿಂದ ಎರಡೂ ದೇಶದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಸುದ್ದಿಗೊಷ್ಟಿಯಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್, ಜಿಯು ಶೈಕ್ಷಣಿಕ ಆಡಳಿತ ಕಚೇರಿಯ ಡೀನ್ ಪ್ರೊ. ಆರ್. ಪದ್ಮನಾಭ, ಕೌರಿ ಹಮಾಶಿ. ಸಾತ್ಸುಕಿ ಶಿಯೋಮಾ,ದಿಲೀಪ್ ಥಕೋರಿ ಉಪಸ್ಥಿತರಿದ್ದರು.