Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭಾರತ ಮತ್ತೆ ಜಯಭೇರಿ

ದುಬೈ : ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾಕಪ್ 2025ರ ಲೀಗ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು.

ಎರಡನೇ ಸೂಪರ್-4 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 172 ರನ್‌ಗಳ ಗುರಿಯನ್ನು ಬೆನ್ನಟ್ಟಿತು. 19 ನೇ ಓವರ್‌ನಲ್ಲಿ ತಿಲಕ್ ವರ್ಮಾ ಶಾಹೀನ್ ಅಫ್ರಿದಿ ಎಸೆತದಲ್ಲಿ ಸಿಕ್ಸ‌ರ್ ಮತ್ತು ನಂತರ ಬೌಂಡರಿ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಅವರು 19 ಎಸೆತಗಳಲ್ಲಿ 30 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

172 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್ (74; 39ಎ, 4X6, 6X5) ಮತ್ತು ಗಿಲ್ (47; 28ಎ, 4X8) ಅಬ್ಬರದ ಜೊತೆಯಾಟದ ಮೂಲಕ ಭದ್ರಬುನಾದಿ ಹಾಕಿದರು. ಅದರಿಂದಾಗಿ ಇನಿಂಗ್ಸ್‌ನಲ್ಲಿ 7 ಎಸೆತಗಳು ಬಾಕಿಯಿದ್ದಾಗಲೇ ಭಾರತ ತಂಡವು ಜಯಿಸಿತು.

ಈ ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ ಹೊಡೆಯುವ ಮೂಲಕ ಅಭಿಷೇಕ್ ಭರ್ಜರಿ ಆರಂಭ ಕೊಟ್ಟರು. ಇನ್ನೊಂದು ಬದಿಯಿಂದ ಗಿಲ್ ಕೂಡ ಬೌಲರ್‌ಗಳ ಮೇಲೆ ಕರುಣೆ ತೋರಲಿಲ್ಲ. ಇಬ್ಬರ ಅಬ್ಬರದ ಆಟಕ್ಕೆ ಹತ್ತು ಓವರ್‌ಗಳು ದಾಟುವ ಮುನ್ನವೇ ತಂಡದ ಮೊತ್ತವು ಮೂರಂಕಿ ಮುಟ್ಟಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಾಹೀನ್ ಆಫ್ರಿದಿ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಪಡೆಯುವ ಅವಕಾಶವನ್ನು ನವಾಜ್ ಕೈಚೆಲ್ಲಿದರು.

ಈ ಸಂದರ್ಭದಲ್ಲಿ ಭಾರತದ ಬ್ಯಾಟಿಂಗ್ ಜೋಡಿ ಮತ್ತು ಬೌಲರ್ ಹ್ಯಾರಿಸ್ ರವೂಫ್ ನಡುವೆ ಮಾತಿನ ಚಕಮಕಿಯೂ ನಡೆಯಿತು. 7ನೇ ಓವರ್‌ನಲ್ಲಿ ಲಾಂಗ್‌ ಆಫ್‌ ಬೌಂಡರಿ ಗೆರೆ ಸಮೀಪವೂ ಶರ್ಮಾಗೆ ಒಂದು ಜೀವದಾನ ಲಭಿಸಿತು. ಕ್ಯಾಚ್‌ ಮಾಡಲು ಪ್ರಯತ್ನಿಸಿದ ಫೀಲ್ಡರ್ ಸಾಹಿಬ್‌ಝಾದಾ ಅವರ ಬೊಗಸೆಯಲ್ಲಿ ಪುಟಿದ ಚೆಂಡು ಗೆರೆಯಾಚೆ ಬಿದ್ದು ಸಿಕ್ಸರ್ ಆಯಿತು.

ಶರ್ಮಾ ಮತ್ತು ಗಿಲ್ ಅಬ್ಬರ ಮತ್ತಷ್ಟು ರಂಗೇರಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 105 ರನ್ ಸೇರಿಸಿದರು. ಅರ್ಧಶತಕಕ್ಕೆ 3 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಗಿಲ್ ಅವರು ಫಾಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಜೊತೆಯಾಟ ಮುರಿಯಿತು. ‌

ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮೂರು ಎಸೆತ ಎದುರಿಸಿದರೂ ಖಾತೆ ತೆರೆಯಲಿಲ್ಲ. ಹ್ಯಾರಿಸ್ ರವೂಫ್ ಬೌಲಿಂಗ್‌ನಲ್ಲಿ ಅಬ್ರಾರ್‌ಗೆ ಕ್ಯಾಚಿತ್ತರು. ಈ ನಡುವೆ ಅಭಿಷೇಕ್ ಅಬ್ಬರ ಮುಂದುವರಿದಿತ್ತು. ಕಡೆಗೂ ಅವರ ವಿಕೆಟ್ ಪಡೆಯುವಲ್ಲಿ ಅಬ್ರಾರ್ ಅಹಮದ್ ಯಶಸ್ವಿಯಾದರು.

ಇನ್ನೊಂದು ಬದಿಯಲ್ಲಿದ್ದ ತಿಲಕ್ ವರ್ಮಾ (ಔಟಾಗದೇ 30; 19ಎ, 4X2, 6X2) ತಂಡವನ್ನು ಗೆಲುವಿನ ದಡ ಸೇರಿಸುವ ಛಲದಿಂದ ಆಡಿದರು. ಸಂಜು ಸ್ಯಾಮ್ಸನ್ (13 ರನ್) ಅವರು ರವೂಫ್‌ಗೆ ಬೌಲಿಂಗ್‌ನಲ್ಲಿ ಔಟಾದರು. ಹಾರ್ದಿಕ್ ಪಾಂಡ್ಯ (ಅಜೇಯ 7) ವರ್ಮಾ ಜೊತೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು.

ಫರ್ಹಾನ್ ಅರ್ಧಶತಕ–ದುಬೆ ಮಿಂಚು: ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಸಾಹೀಬ್‌ ಝಾದಾ ಫರ್ಹಾನ್ (58; 45ಎ, 4X5, 6X3) ಅರ್ಧಶತಕದ ಬಲದಿಂದ ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 171 ರನ್ ಗಳಿಸಿತು. ಅವರು ಮತ್ತು ಸೈಮ್ ಅಯೂಬ್ (21; 17ಎ, 4X1, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು.

11ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಶಿವಂ ಮುರಿದರು. ಅವರ ಎಸೆತವನ್ನು ಬೌಂಡರಿ ದಾಟಿಸುವ ಭರದಲ್ಲಿ ಅಯೂಬ್ ಅವರು ಅಭಿಷೇಕ್ ಶರ್ಮಾಗೆ ಕ್ಯಾಚಿತ್ತರು.

15ನೇ ಓವರ್‌ನಲ್ಲಿ ಫರ್ಹಾನ್ ವಿಕೆಟ್ ಕೂಡ ಶಿವಂ ಪಾಲಾಯಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಫಕಾರ್ ಜಮಾನ್ (15 ರನ್) ಕ್ಯಾಚ್ ಪಡೆದ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಸಂಭ್ರಮಿಸಿದರು.

ಆಗಿನ್ನೂ ತಂಡದ ಮೊತ್ತವು 13 ಓವರ್‌ಗಳಲ್ಲಿ 3ಕ್ಕೆ 110 ಆಗಿತ್ತು. ಮೊಹಮ್ಮದ್ ನವಾಜ್ (21; 19ಎ) ಅವರು ಕ್ರೀಸ್‌ ಮುಟ್ಟುವಲ್ಲಿ ತುಸು ‘ಆಲಸ್ಯ’ ತೋರಿದ್ದನ್ನು ಗಮನಿಸಿದ ಫೀಲ್ಡರ್ ಸೂರ್ಯಕುಮಾರ್ ಯಾದವ್ ರನೌಟ್ ಮಾಡುವಲ್ಲಿ ಚುರುಕುತನ ಮೆರೆದರು. ನಾಯಕ ಸಲ್ಮಾನ್ ಆಘಾ 13 ಎಸೆತಗಳಲ್ಲಿ 17 ಮತ್ತು ಫಾಹೀಂ ಅಶ್ರಫ್ (ಔಟಾಗದೇ 20; 8ಎ) ಅಬ್ಬರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.

ಜಸ್‌ಪ್ರೀತ್ ಬೂಮ್ರಾ ಅವರು ವಿಕೆಟ್ ಗಳಿಸಲಿಲ್ಲ. ತುಸು ದುಬಾರಿಯೂ ಆದರು. ಅವರು 4 ಓವರ್‌ಗಳಲ್ಲಿ 45 ರನ್ ಕೊಟ್ಟರು. ಕುಲದೀಪ್ ಯಾದವ್ (31ಕ್ಕೆ1) ಉತ್ತಮ ಬೌಲಿಂಗ್ ಮಾಡಿದರು. ಅಕ್ಷರ್ ಪಟೇಲ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದರು. ಭಾರತದ ಫೀಲ್ಡರ್‌ಗಳು ಒಟ್ಟು ನಾಲ್ಕು ಕ್ಯಾಚ್ ಕೈಚೆಲ್ಲಿದರು.

ಈ ಪಂದ್ಯದಲ್ಲಿಯೂ ಭಾರತದ ಆಟಗಾರರು ಟಾಸ್‌ ಸಂದರ್ಭ ಮತ್ತು ಮುಕ್ತಾಯದ ನಂತರ ಪಾಕ್ ಆಟಗಾರರ ಕೈಕುಲುಕಲಿಲ್ಲ.

ಭಾರತ vs ಪಾಕಿಸ್ತಾನ - ಕೊನೆಯ ಏಳು ಪೂರ್ಣಗೊಂಡ ಪಂದ್ಯಗಳು

ಏಷ್ಯಾ ಕಪ್ 2025: ಭಾರತಕ್ಕೆ 6 ವಿಕೆಟ್‌ಗಳ ಜಯ.

ಏಷ್ಯಾ ಕಪ್ 2025: ಭಾರತಕ್ಕೆ 7 ವಿಕೆಟ್‌ಗಳ ಜಯ.

CT 2025: ಭಾರತಕ್ಕೆ 6 ವಿಕೆಟ್‌ಗಳ ಜಯ

ಟಿ20 ವಿಶ್ವಕಪ್ 2024: ಭಾರತಕ್ಕೆ 6 ರನ್‌ಗಳ ಜಯ

WC 2023: ಭಾರತಕ್ಕೆ 7 ವಿಕೆಟ್‌ಗಳ ಜಯ

ಏಷ್ಯಾ ಕಪ್ 2023: ಭಾರತಕ್ಕೆ 228 ರನ್‌ಗಳ ಜಯ

ಟಿ20 ವಿಶ್ವಕಪ್ 2022: ಭಾರತಕ್ಕೆ 4 ವಿಕೆಟ್‌ಗಳ ಜಯ.

>> ಭಾರತ ಮತ್ತು ಪಾಕಿಸ್ತಾನ ನಡುವಿನ ಕಳೆದ ಹತ್ತು ಟಿ20ಗಳಲ್ಲಿ ಒಂಬತ್ತನೇ ಬಾರಿ, ಚೇಸಿಂಗ್ ತಂಡವು ಗೆಲುವು ಸಾಧಿಸಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಈ ವೇಳೆ ಭಾರತ ತಂಡ 12 ಮ್ಯಾಚ್ ಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ ತಂಡ ಗೆದ್ದಿರುವುದು ಕೇವಲ 6 ಪಂದ್ಯಗಳಲ್ಲಿ ಮಾತ್ರ. ಇನ್ನು ಮೂರು ಮ್ಯಾಟ್ಗಳು ಕಾರಣಾಂತರಗಳಿಂದ ರದ್ದಾಗಿದ್ದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ