LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜ.22ರಿಂದ ಭಾರತ vs ಇಂಗ್ಲೆಂಡ್ ಟಿ20 ಸರಣಿ ಹಾಗೂ ಏಕದಿನ ಸರಣಿ ಆರಂಭ

ಮುಂಬೈ : ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 22 ರಿಂದ ಪ್ರಾರಂಭವಾಗಲಿದೆ.

ಜ.22ರಿಂದ ಫೆಬ್ರವರಿ 2ರ ವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಫೆಬ್ರವರಿ 6 ರಿಂದ 12ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿರುತ್ತದೆ.

ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್‌ಗೆ ಬಿಸಿಸಿಐ ನಾಯಕತ್ವದ ಹೊಣೆ ನಿಡಿದೆ. ಹಾಗೂ ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಲಾಗಿದೆ.

ಟಿ20 ಪಂದ್ಯಗಳು ಪ್ರತಿ ಪಂದ್ಯ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಕೋಲ್ಕತ್ತಾ (ಈಡನ್ ಗಾರ್ಡನ್)ನಲ್ಲಿ ಜ.22ರಂದು ಮೊದಲ ಪಂದ್ಯ ನಡೆಯಲಿದೆ. ಬಳಿಕ ಕ್ರಮವಾಗಿ ಚೆನ್ನೈ (ಚೆಪಾಕ್)ನಲ್ಲಿ ಜ.25ಎಂದು 2ನೇ ಪಂದ್ಯ, ರಾಜ್‌ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)ನಲ್ಲಿ ಜ.28ರಂದು 3ನೇ ಪಂದ್ಯ, ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)ಯಲ್ಲಿ ಜ.31ರಂದು 4ನೇ ಪಂದ್ಯ ಮತ್ತು ಮುಂಬೈ (ವಾಂಖೆಡೆ)ಯಲ್ಲಿ ಫೆ.02ರಂದು 5ನೇ ಪಂದ್ಯ ನಡೆಯಲಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೊಂಥಾ ಚಂಡಮಾರುತ: ಅ. 31ರವರೆಗೂ ಭಾರೀ ಮಳೆ- ಹವಾಮಾನ ಇಲಾಖೆ ಎಚ್ಚರಿಕೆಬೀದಿ ನಾಯಿಗಳ ಹಾವಳಿ ವಿಚಾರ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂ​ ತರಾಟೆಅ. 28ರಂದು ಮೊಂಥಾ ಸೈಕ್ಲೋನ್- ಆಂಧ್ರಪ್ರದೇಶ, ಒಡಿಶಾ, ತಮಿಳುನಾಡಿಗೆ ರೆಡ್ ಅಲರ್ಟ್ನ್ಯಾ. ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಹೆಸರಿಸಿದ ನ್ಯಾ. ಗವಾಯಿಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್ ಕಾರ್ಡ್ ರದ್ದು – ಕೆ.ಎಚ್‌.ಮುನಿಯಪ್ಪದೆಹಲಿಗೆ ದೌಡಾಯಿಸಿದ ಡಿಸಿಎಂ ಡಿಕೆಶಿವರ್ಕ್ ಫ್ರಂ ಹೋಂ ಕೆಲಸ: 12 ಕೋಟಿಗೂ ಅಧಿಕ ಹಣ ವಂಚನೆ.!ಪಿಎಸ್ಐ ಗಾದಿಲಿಂಗಪ್ಪ ವಿರುದ್ಧ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲು.!ಮೊಂಥಾ ಚಂಡಮಾರುತದ ಅಬ್ಬರ: ಇಂದಿನಿಂದ 5 ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ.!ಮತಾಂತರಕ್ಕೆ ಒಪ್ಪದ ಪ್ರಿಯತಮೆಗೆ ಕೈಕೊಟ್ಟ ಲವ್ ಜಿಹಾದ್ ಆರೋಪಿ ಅರೆಸ್ಟ್