Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭಾರತದ ಶೂಟಿಂಗ್ ದಂತಕಥೆ ಜಸ್ಪಾಲ್ ರಾಣಾ 49ನೇ ವಯಸ್ಸಿನಲ್ಲೇ ನಿಧನ

ನವದೆಹಲಿ: ಭಾರತದ ಖ್ಯಾತ ಶೂಟರ್ ಹಾಗೂ ಹೈ-ಪರ್ಫಾರ್ಮೆನ್ಸ್ ಪಿಸ್ತೂಲ್ ತರಬೇತುದಾರ ಜಸ್ಪಾಲ್ ರಾಣಾ (49) ಅವರು ಇಂದು ಶುಕ್ರವಾರ (ಜೂನ್‌ 12) ಬೆಳಗಿನ ಜಾವ ನವದೆಹಲಿಯಲ್ಲಿ ನಿಧನರಾಗಿದ್ದಾರೆ.
ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಅಧ್ಯಕ್ಷರಾದ ಕಲಿಕೇಶ ನಾರಾಯಣ್ ಸಿಂಗ್ ದಿಯೋ ಅವರು ಈ ದುಃಖದ ಸಂಗತಿಯನ್ನು ದೃಢಪಡಿಸಿದ್ದಾರೆ. ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ (ISSF) ವಿಶ್ವಕಪ್ ಮುಗಿಸಿ ಭಾರತೀಯ ತಂಡದೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾಗ ಜಸ್ಪಾಲ್ ರಾಣಾ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.
ನವದೆಹಲಿಗೆ ಬಂದಿಳಿದ ತಕ್ಷಣ ಅವರನ್ನು ಸಾಕೆಟ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಕಾರಣ, ತುರ್ತಾಗಿ ಸ್ಟೆಂಟ್ ಅಳವಡಿಸುವ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
“ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್ ಅವರ ತರಬೇತುದಾರ ಹಾಗೂ ಖ್ಯಾತ ಶೂಟರ್ ಜಸ್ಪಾಲ್ ರಾಣಾ ಅವರು ಇಂದು ಬೆಳಿಗ್ಗೆ ಮ್ಯಾಕ್ಸ್ ಸಾಕೆಟ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ,” ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಭಾರತೀಯ ಶೂಟಿಂಗ್ ಕ್ಷೇತ್ರದ ಮಹಾನ್ ಶಕ್ತಿ
ಇತ್ತೀಚಿನ ವರ್ಷಗಳಲ್ಲಿ ಭಾರತದ ಪಿಸ್ತೂಲ್ ಶೂಟಿಂಗ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ರಾಣಾ ಅವರ ಪಾತ್ರ ಅನನ್ಯವಾಗಿತ್ತು. ರಾಷ್ಟ್ರೀಯ ಕೋಚಿಂಗ್ ವ್ಯವಸ್ಥೆಯಲ್ಲಿ ಹೈ-ಪರ್ಫಾರ್ಮೆನ್ಸ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ದೇಶದ ಹಲವು ಗಣ್ಯ ಶೂಟರ್‌ಗಳನ್ನು ತರಬೇತುಗೊಳಿಸಿದ್ದರು.
ವಿಶೇಷವಾಗಿ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನು ಭಾಕರ್ ಅವರ ಕೋಚಿಂಗ್ ತಂಡದ ಪ್ರಮುಖ ರೂವಾರಿಯಾಗಿದ್ದರು. ಆಧುನಿಕ ಪಿಸ್ತೂಲ್ ಶೂಟಿಂಗ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ISSF ಟೂರ್ನಿಗಳಲ್ಲಿ ಭಾರತದ ಪ್ರದರ್ಶನವನ್ನು ಸುಧಾರಿಸುವಲ್ಲಿ ರಾಣಾ ಅವರ ತಾಂತ್ರಿಕ ಜ್ಞಾನ ಮತ್ತು ಕೋಚಿಂಗ್ ಶೈಲಿ ಪ್ರಮುಖ ಕಾರಣವಾಗಿತ್ತು.

ಬೆಳ್ಳಿ ಪದಕದಿಂದ  ಚಿನ್ನದ ಬೇಟೆಯವರೆಗಿನ ಪಯಣ
ಜನನ ಮತ್ತು ಆರಂಭಿಕ ದಿನಗಳು: 1976 ರಲ್ಲಿ ಉತ್ತರಾಖಂಡದಲ್ಲಿ ಜನಿಸಿದ ಜಸ್ಪಾಲ್ ರಾಣಾ, ಚಿಕ್ಕ ವಯಸ್ಸಿನಲ್ಲೇ ಶೂಟಿಂಗ್ ಕಡೆಗೆ ಆಕರ್ಷಿತರಾಗಿದ್ದರು.
1988 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ 31 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಹೆಜ್ಜೆ ಗುರುತು ಮೂಡಿಸಿದರು. 1994 ರ ಮಿಲನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆಯ ಅಂಕದೊಂದಿಗೆ ಆಸ್ಪಲ್ ಚಿನ್ನದ ಪದಕವನ್ನು ಗೆದ್ದರು. 1994 ರ ಹಿರೋಷಿಮಾ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಸ್ಪಾಲ್ ರಾಣಾ ಅವರ ಸುವರ್ಣ ಯುಗ ಆರಂಭವಾಯಿತು. ವಿಶೇಷವಾಗಿ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಅವರು ಭಾರತದ ಅತ್ಯಂತ ಯಶಸ್ವಿ ಶೂಟರ್ ಆಗಿ ಹೊರಹೊಮ್ಮಿದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಅವರು ಅತ್ಯಂತ ಯಶಸ್ವಿ ಭಾರತೀಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ನಾಲ್ಕು ಆವೃತ್ತಿಗಳಲ್ಲಿ (1994, 1998, 2002, ಮತ್ತು 2006) ಪ್ರಾಬಲ್ಯ ಸಾಧಿಸಿದ್ದಾರೆ. ಭಾರತಕ್ಕಾಗಿ ಅವರ ಅತ್ಯಂತ ಪ್ರಸಿದ್ಧ ಪ್ರದರ್ಶನವೆಂದರೆ 2006 ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಮೂರು ಚಿನ್ನದ ಪದಕಗಳನ್ನು ಗೆದ್ದರು ಮತ್ತು 25 ಮೀ ಸೆಂಟರ್ ಫೈರ್ ಪಿಸ್ತೂಲ್‌ನಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದರು. 2002 ರ ಮ್ಯಾಂಚೆಸ್ಟರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಬರೋಬ್ಬರಿ 6 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.
ಸಂದ ಗೌರವಗಳು
ಕ್ರೀಡಾ ರಂಗದಲ್ಲಿ ಅವರು ಮಾಡಿದ ಅಪೂರ್ವ ಸಾಧನೆಗಾಗಿ ಭಾರತ ಸರ್ಕಾರ ಅವರಿಗೆ ಹಲವು ಅತ್ಯುನ್ನತ ನಾಗರಿಕ ಹಾಗೂ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅರ್ಜುನ ಪ್ರಶಸ್ತಿ (1994), ಪದ್ಮಶ್ರೀ ಪ್ರಶಸ್ತಿ (1997) ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ತರಬೇತಿ ಮತ್ತು ಕ್ರೀಡಾಪಟುಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ, ರಾಣಾ ಅವರಿಗೆ 2020 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಯಿತು. ಭಾರತೀಯ ಶೂಟಿಂಗ್ ಇತಿಹಾಸದಲ್ಲಿ ಒಬ್ಬ ಶ್ರೇಷ್ಠ ಕ್ರೀಡಾಪಟುವಾಗಿ ಮತ್ತು ಯುವ ಪೀಳಿಗೆಯನ್ನು ಮುನ್ನಡೆಸಿದ ಮಹಾನ್ ಗುರುವಿನಂತೆ ಜಸ್ಪಾಲ್ ರಾಣಾ ಅವರ ಹೆಸರು ಎಂದಿಗೂ ಅಮರವಾಗಿರಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ