ದುಬೈ :
ಭಾರತದ ಮುಂಬೈ ಮೂಲದ ಯು ಎ ಇ ನಿವಾಸಿ ಸಚಿನ್ (47 )ಲಾಟರಿಯಲ್ಲಿ 45 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಕಳೆದ 25 ವರ್ಷಗಳಿಂದ ದುಬೈನಲ್ಲಿ ನೆಲೆಯಾಗಿರುವ ಸಚಿನ್ ಸಿಎಡಿ ತಂತ್ರಜ್ಞರು. ಶನಿವಾರ 139 ನೇ ಮಜೂಜ್ ಡ್ರಾ ಗೆದ್ದಿದ್ದಾರೆ.
ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬ ಹಾಗೂ ಜೀವನವನ್ನೇ ಬದಲಾಯಿಸುತ್ತದೆ ಎಂದು ಸಚಿನ್ ಪ್ರತಿಕ್ರಿಯಿಸಿದ್ದಾರೆ. ಮುಂಬೈಯ ಸಚಿನ್ ಅವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ.
ಭಾರತೀಯ ಮೂಲದವರಾದ ಗೌತಮ್ ಎಂಬುವವರು ಸಹ ಇದೇ ಸ್ಪರ್ಧೆಯಲ್ಲಿ 2.25 ಕೋಟಿ ಬಹುಮಾನ ಗೆದ್ದಿದ್ದರು.
ಕಳೆದ ವಾರವಷ್ಟೇ ಉತ್ತರ ಪ್ರದೇಶ ಮೂಲದ ವಾಸ್ತುಶಿಲ್ಪಿ ಆದಿಲ್ ಖಾನ್ ಎಂಬ ವ್ಯಕ್ತಿ ಸಹ ಮುಂದಿನ 25 ವರ್ಷಗಳ ಕಾಲ ಸತತವಾಗಿ ಪ್ರತಿ ತಿಂಗಳು 5.5 ಲಕ್ಷ ಬಹುಮಾನ ಸಿಗುವ ಲಾಟರಿಯನ್ನು ಗೆದ್ದಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.