LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆ

ನವದೆಹಲಿ: ಭಾರತೀಯರೆಲ್ಲರೂ ಕೂಡಲೇ ಟೆಹ್ರಾನ್‌ ನಗರದಿಂದ ಹೊರಬೇಕೆಂದು ಭಾರತ ಸರ್ಕಾರ ಟೆಹ್ರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಂಗಳವಾರ ತುರ್ತು ಸೂಚನೆ ನೀಡಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಹ್ರಾನ್‌ ನಗರದಿಂದ ದೂರ ಹೋಗುವಂತೆ ಭಾರತೀಯರಿಗೆ ಸೂಚಿಸಿದೆ.

ಇಸ್ರೇಲ್‌ ಸತತವಾಗಿ ಟೆಹ್ರಾನ್‌ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಅಲ್ಲಿ ಇರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜೊತೆಗೆ ಅಮೆರಿಕ ಕೂಡ ಟೆಹ್ರಾನ್‌ ಬಿಟ್ಟು ಹೋಗುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಘನಘೋರ ಸಮರ ನಡೆಯುವ ಮುನ್ಸೂಚನೆ ಎಂದು ಭಾವಿಸಲಾಗಿದೆ.



ಈ ಹಿನ್ನೆಲೆಯಲ್ಲಿ ಟೆಹ್ರಾನ್‌ನಲ್ಲಿರುವ ಭಾರತೀಯ ದೂತವಾಸ ಭಾರತದ ಪ್ರಜೆಗಳಿಗೆ ನಿಮ್ಮಲ್ಲಿ ವ್ಯವಸ್ಥೆ ಇದ್ದರೆ ಕೂಡಲೇ ನಗರ ತೊರೆದು ದೂರ ಹೋಗಿ ಎಂದು ಹೇಳಿದೆ. ಟೆಹ್ರಾನ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳಿಗೆ ಮತ್ತು ಭಾರತೀಯ ಮೂಲದವರಿಗೆ ಅವರ ಬಳಿ ವಾಹನ ಅಥವಾ ಬೇರೆ ಯಾವುದೇ ವ್ಯವಸ್ಥೆ ಇದ್ದರೆ ಕೂಡಲೇ ನಗರ ಬಿಟ್ಟುಹೋಗಲು ಸೂಚಿಸಲಾಗಿದೆ. ಅದೇ ರೀತಿ ಇರಾನ್‌ನಲ್ಲಿರುವ ಕುರಿತು ಇನ್ನೂ ಮಾಹಿತಿ ನೀಡದ ಭಾರತದವರು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಖೆಂದು ಭಾರತೀಯ ದೂತವಾಸ ಹೇಳಿದೆ. ಇಂಥವರಿಗಾಗಿ +98 9010144557, +98 9128109115, and +98 9128109109 ಸಹಾಯವಾಣಿ ನಂಬರ್‌ಗಳನ್ನು ಹಂಚಿಕೊಳ್ಳಲಾಗಿದೆ.

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಮರ ಐದನೇ ದಿನವೂ ಮುಂದುವರಿದಿದ್ದು, ಎರಡೂ ದೇಶಗಳ ಪರಸ್ಪರರ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್‌ಗಳ ಮಳೆಗರೆಯುತ್ತಿವೆ. ಈ ನಡುವೆ ಅಮೆರಿಕ ಕೂಡ ಸಮರಾಂಗಣಕ್ಕೆ ಧುಮುಕುವ ಸುಳಿವು ನೀಡಿದೆ. ಐದು ದಿನಗಳ ಸಮರದಲ್ಲಿ ಎರಡೂ ದೇಶಗಳಲ್ಲಿ ಅಪಾರ ಸಾವುನೋವು ಮತ್ತು ನಾಶನಷ್ಟ ಸಂಭವಿಸಿದೆ. ಅನೇಕ ಬಹುಮಹಡಿ ಕಟ್ಟಗಳು ಹಾನಿಗೀಡಾಗಿವೆ. ಜನರು ಬಂಕರ್‌, ನೆಲಮಾಳಿಗೆ ಮುಂತಾದೆಡೆಗಳಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ರಕ್ಷಿಸಿಕೊಳ್ಳುತ್ತಿದ್ದಾರೆ.

ಇರಾನ್‌ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಿದ್ದು, ಅವರನ್ನು ರಕ್ಷಿಸುವುದು ಈಗ ಸವಾಲಾಗಿ ಪರಿಣಮಿಸಿದೆ. ಇರಾನ್‌ ತನ್ನ ವಾಯುಮಾರ್ಗವನ್ನು ಮುಚ್ಚಿರುವುದರಿಂದ ಅಲ್ಲಿಗೆ ವಿಮಾನ ಒಯ್ಯುವುದು ಅಸಾಧ್ಯ. ಗಡಿ ಭಾಗದ ದೇಶಕ್ಕೆ ಕರೆತಂದು ಅಲ್ಲಿಂದ ವಿಮಾನ ಅಥವಾ ಹಡಗಿನಲ್ಲಿ ಕರೆತರಬೇಕಾಗುತ್ತದೆ. ಸೋಮವಾರ ರಾತ್ರಿ 110 ಭಾರತೀಯ ಪ್ರಜೆಗಳು ಅರ್ಮೇನಿಯ ಗಡಿದಾಟಿ ಬಂದಿದ್ದು, ಅವರನ್ನು ಕರೆತರಲು ಭಾರತ ಸಿದ್ಧತೆ ನಡೆಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026