LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

76ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇಂಡೋನೇಷ್ಯಾ ಸೇನಾ ತಂಡ ಭಾಗಿ

ನವದೆಹಲಿ : 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಇಂಡೋನೇಷ್ಯಾದ ಸೇನೆ ಮತ್ತು ಬ್ಯಾಂಡ್ ತಂಡ ಭಾಗವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಭಾಗವಹಿಸಲಿದ್ದಾರೆ. ಜೊತೆಗೆ ಈ ಬಾರಿ ಕರ್ತವ್ಯ ಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ 300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸಂಗೀತ ವಾದ್ಯಗಳ ಮೂಲಕ 'ಸಾರೆ ಜಹಾನ್ ಸೆ ಅಚ್ಛಾ' ನುಡಿಸಲಿದ್ದಾರೆ. ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಾಕ್ ಬೀನ್, ಕೊಳಲು, ಕರಡಿ ಮಜಲು, ಮೊಹುರಿ, ಶಂಖ, ತುಟಾರಿ, ಮತ್ತು ಧೋಲ್ ಸೇರಿ ಹಲವು ವಾದ್ಯಗಳ ಮೂಲಕ ಗೀತೆ ಮೊಳಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು, ಇಂಡೋನೇಷ್ಯಾದ 160 ಸದಸ್ಯರ ಸೇನಾ ತಂಡ ಮತ್ತು 190 ಸದಸ್ಯರ ಬ್ಯಾಂಡ್ ತಂಡ ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಭಾಗವಹಿಸಲಿದೆ. ಭಾರತೀಯ ಸಶಸ್ತ್ರ ಪಡೆಯ ತಂಡಗಳು ಭಾಗವಹಿಸಲಿವೆ. ಈ ವರ್ಷ, 31 ಸ್ಥಬ್ದಚಿತ್ರಗಳು ಮೆರವಣಿಗೆ ನಡೆಯಲಿವೆ. ಇದರಲ್ಲಿ 16 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 15 ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ಪಾಲ್ಗೊಳ್ಳಲಿದ್ದು, 'ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್' ಥೀಮ್ ಅನ್ನು ಪ್ರದರ್ಶಿಸಲಿವೆ ಎಂದರು.

ರಾಷ್ಟ್ರಗೀತೆಯ ನಂತರ, ಭಾರತೀಯ ಸಂವಿಧಾನದ 75 ನೇ ವರ್ಷದ ಅಧಿಕೃತ ಲಾಂಛನದ ಬ್ಯಾನರ್‌ಗಳನ್ನು ಹೊಂದಿರುವ ಬಲೂನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕಾರ್ಯಕ್ರಮ 47 ವಿಮಾನಗಳ ಫೈಪಾಸ್ಟ್ನೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಗಣರಾಜ್ಯ ದಿನವು ಸಂವಿಧಾನದ 75 ವರ್ಷಾಚರಣೆಯನ್ನು ಜಾರಿಗೆ ತರುತ್ತದೆ ಎಂದು ತಿಳಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಫೋನ್ ಹ್ಯಾಕ್ ಆಗಿದೆಯೇ.? ಹಾಗಾದ್ರೆ ಸಿಂಪಲ್ ಟಿಪ್ಸ್ ಇಲ್ಲಿದೆ.!4ನೇ ಬಾರಿಗೆ ಯುಪಿಎಸ್‌ಸಿ ಬರೆದು ಉತ್ತೀರ್ಣರಾದ ಐಎಎಸ್ ಅಧಿಕಾರಿ ಸೌಮ್ಯಾ ಮಿಶ್ರಾಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಸೇವೆ ಸ್ಥಗಿತಕಳೆದ ತಿಂಗಳು ಗುಜರಿ ಮಾರಿ 800 ಕೋಟಿ ರೂಪಾಯಿ ಗಳಿಸಿದ ಕೇಂದ್ರ!ರಾತ್ರಿ ಮಲಗುವ ಮುನ್ನ ಇದನ್ನ ಮುಖಕ್ಕೆ ಹಚ್ಚಿದರೆ 10 ವರ್ಷ ವಯಸ್ಸು ಕಡಿಮೆಯಾಗುತ್ತೆಆತ್ಮಗಳು ಎಲ್ಲಿ ವಾಸವಾಗಿರುತ್ತದೆ ಹಾಗೂ ಯಾರಿಗೆ ತೊಂದರೆ ಕೊಡುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?ಹಿರೆಮದಕರಿನಾಯಕರ ಧರ್ಮಪತ್ನಿ ಗಂಡೋಬಳವ್ವ ನಾಗತಿ ಅವರ ಚಿತ್ರ ಅನಾವರಣ.!ವಚನ.: -ಕನ್ನಡಿಕಾಯಕದ ಅಮ್ಮಿದೇವಯ್ಯRSS ನೋಂದಣಿ ಯಾಕಾಗಿಲ್ಲ? ಖಡಕ್​ ಉತ್ತರ ಕೊಟ್ರು ಮೋಹನ್ ಭಾಗವತ್ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ – ಹುಬ್ಬಳ್ಳಿ ಜಂಕ್ಷನ್‌ಗೆ ಗಿನ್ನೆಸ್ ದಾಖಲೆ ಗೌರವ!