ಕುಷ್ಟಗಿ :- ತಾಲೂಕಿನ ಗುಮಗೇರಾ ಗ್ರಾಮದ ಗ್ರಾಮಸ್ಥರು ಇಂದು ಕುಷ್ಟಗಿ ಕೆ ಇ ಬಿ ಬೇಟಿ ನೀಡಿ ಗ್ರಾಮೀಣ ಭಾಗದ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಜೊತೆಗೆ ಲೈನ್ ಮ್ಯಾನ್ ಗಳು ರೈತರ ದೂರವಾಣಿ ಕರೆಗಳನ್ನು ಸರಿಯಾಗಿ ಸ್ವೀಕರಿಸುವುದಿಲ್ಲ, ಇಂತಹ ಲೈನ್ ಮ್ಯಾನ್ ಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿ ನಮಗೆ ಉತ್ತಮ ಕೆಲಸ ಮಾಡುವ ಲೈನ್ ಮ್ಯಾನ್ ರವರನ್ನು ನೇಮಕ ಮಾಡಿ ಕೊಡುವಂತೆ ಒತ್ತಾಯಿಸಿದ್ದಾರೆರೈತರಿಗೆ ಪ್ರತಿ ಕನಿಷ್ಠ ಏಳು ಗಂಟೆಗಳ ಕಾಲ 3ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಎ ಇ ಇ ಕೆಂಚಪ್ಪ ಬಾವಿಮನಿ ಅವರಿಗೆ ಒತ್ತಾಯಿಸಿದರು.
ರೈತರ ಮನವಿ ಸ್ವೀಕರಿಸಿ ಮಾತಾಡಿದ ಎ ಇಇ ಕೆಂಚಪ್ಪ ಬಾವಿಮನಿ ಮಾತನಾಡಿ ನಮ್ಮ ಸಿಬ್ಬಂದಿಗಳೊಂದಿಗೆ ಮಾತನಾಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು
ಈ ಸಂದರ್ಭದಲ್ಲಿ ರೈತರಾದ ನಾಗಪ್ಪ ಕುಷ್ಟಗಿ,ಶಿವಪುತ್ರಪ್ಪ ಜರಗಡ್ಡಿ ಶೇಖಪ್ಪ ಗಂಗನಾಳ,ಚೇತನ್ ಕುಮಾರ್ ಸಂಗನಾಳ, ಗಣೇಶ ಪಾಟೀಲ್,ಮರಿಸ್ವಾಮಿ, ಚಿಪ್ರಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಜಸಾಬ ಭಾವಿಕಟ್ಟಿ, ಪತ್ರಕರ್ತರಾದ ಆರ್ ಶರಣಪ್ಪ ಗುಮಗೇರಾ,ಯಮನೂರಸಾಬ,ಅಪ್ಪಯ್ಯ ಹಿರೇಮಠ, ಯಮನೂರು ಚೌಡ್ಕಿ, ಶರಣಪ್ಪ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.