LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇನ್ಸ್ಟಂಟ್ ಲವ್...!!

 

ರಿಪ್ಪನ್ ಪೇಟೆಯ ರಾಜಕಾರಣಿ, ಸೋಲನ್ನೇ ನೋಡದ ಗ್ರಾಮ ಪಂಚಾಯತಿ ಸದಸ್ಯ ಸುಬ್ಬಣ್ಣ ಭಟ್ ರ ಮಗ ಜಯಂತ್, ಹಸಿರು ಅನ್ವೇಷಕ, ದಿಗಂತ ಬೆಟ್ಟಗಳ ಏರಿಳಿಯುವ ಚಾರಣಿಗ ಒಬ್ಬ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ. ಜಯಂತ್,ಅದೊಂದಿನ ಹೀಗೆ ಇನ್ಸ್ಟಾಗ್ರಾಮ್ ಸ್ಕ್ರಾಲ್ ಮಾಡ್ತಿರಬೇಕಾದರೆ ಫ್ರೆಂಡ್ಸ್ ಲಿಸ್ಟ್ ಅಲ್ಲಿ ಸಜೆಸ್ಟ್ ಮಾಡಿರೋ ಒಂದು ಹುಡುಗಿನ ಫಾಲೋ ರಿಕ್ವೆಸ್ಟ್ ಕೊಟ್ಟ. ತನ್ನದೇ ಅಕ್ಷರಗಳ ಮೂಲಕ ಸಾಹಿತ್ಯದ ಹಿರಿಮೆಯನ್ನು ಪ್ರಪಂಚಕ್ಕೆ ಪರಿಚಯಿಸಿಕೊಟ್ಟ ಅತ್ಯಂತ ಕಿರಿಯ ವಯಸ್ಸಿನಲ್ಲೆ ಎಂ.ಎ.(ಎಲ್.ಎಲ್.ಬಿ) ಚಿನ್ನದ ಪದಕವನ್ನು ಪಡೆದುಕೊಂಡ ರಮಾ ಕಾರಂತರ 24 ವರ್ಷದ ಮುದ್ದಿನ ಮಗಳು ಲಾಯರ್ ವಿಧಿ ಕಾರಂತ್.

ಅಂದು ಸಂಜೆ ವಿಧಿ ತನ್ನ ಎಲ್ಲಾ ನಿತ್ಯದ ಕೆಲಸವನ್ನು ಮುಗಿಸಿ ಟೆರೆಸ್ ಅಂಗಳದ ಮೇಲೆ ಕುಳಿತು ಬಾನ ಕಡಲ ಚಂದಿರನ ನೋಡುತ್ತಾ,ತನ್ನೆಲ್ಲ ಒತ್ತಡಗಳನ್ನು ನೀಗುವ ಸಮಯದಲ್ಲಿ ಫೋನಿನ ಇನ್ಸ್ಟಾ ನೋಟಿಫಿಕೇಶನ್ ಮೇಲೆ ಕಂಡ ಜಯಂತ್ ನ ರಿಕ್ವೆಸ್ಟ್ ನ್ನು. ತನ್ನ ಚರಿತ್ರೆಯೇ ಗೊತ್ತಿರದ ಹಸಿರು ಅನ್ವೇಷಕನ ಆಕರ್ಷಣೆಗೆ ಒಳಗಾದ ವಿಧಿ ಇನ್ಸ್ಟ ರಿಕ್ವೆಸ್ಟ್ ನ್ನು ಎಕ್ಸೆಪ್ಟ್ ಮಾಡಿಬಿಟ್ಟಳು. ಜಯಂತ್ ನ ಹಾಯ್ ಇಂದ ಶುರುವಾದ ಇಬ್ಬರ ಸ್ನೇಹ ಹೋಗೋ-ಬಾರೋ ಅನ್ನುವ ತನಕ ಬೆಳೆದು ನಿಂತಿತ್ತು. ವರ್ಷಗಳು ಕಳೆದಂತೆ ಪರಸ್ಪರ ಒಬ್ಬರನ್ನೊಬ್ಬರು ಅರಿತು ಲೋಕಕ್ಕೆ ಮಾದರಿಯಾಗುವಂತಹ ಸ್ನೇಹವದು.
ಇತ್ತ ವಿಧಿಯ ಆರೋಗ್ಯದ ಚಿಕಿತ್ಸೆಯ ಕುರಿತು ತನ್ನಲಾಗಿರುವ ಬದಲಾವಣೆಗಳ ಬಗ್ಗೆ ಮತ್ತು ಜಯಂತನ ದಿನಚರಿಯಲ್ಲಿ ನಡೆದ ವೈಯಕ್ತಿಕ ಮತ್ತು ವ್ಯವಹಾರದ ಆಗು ಹೋಗುಗಳ ಪ್ರತಿನಿತ್ಯ ಸಂಭಾಷಣೆ ನಡೆಯುತ್ತಲೇ ಇತ್ತು.
ಅದು ಸಂವತ್ಸರ ಮುಗಿಯುವ ಕಾಲ ವಿಧಿ ಕಾರಂತ್ ಬಹಳ ಕುತೂಹಲ ಮೂಡುವಂತೆ ಕಳುಹಿಸಿದ ಸಂದೇಶವದು
"ಜಯಂತ್ ನಿನಗೆ ಒಂದು ವಿಷಯ ಹೇಳಬೇಕು ನಂಗೆ ಕಾಲ್ ಮಾಡ್ತೀಯ."ಈ ಸಂದೇಶ ನೋಡಿದ ಜಯಂತನಿಗೆ ದಿಗಿಲು ಆತಂಕ ಆಕಾಶದೆತ್ತರಕ್ಕೆ ದುಮ್ಮಿಕುತಿತ್ತು.

ಅದೆಷ್ಟೋ ಮೈಲುಗಳ ದೂರದಲ್ಲಿರುವ ಹಸಿರು ಅನ್ವೇಷಕನಿಗೆ ಮನಸೋತ ವಿಧಿ ಕಾರಂತಳಿಗೆ ತನ್ನ ಪ್ರೀತಿಯ ಭಾವನೆಗಳ ಹಂಚಿಕೊಳ್ಳುವ ಉತ್ಸಾಹ,ಎಂದಿನಂತೆ ಜಯಂತ್ ನಿಗೆ ಕರೆ ಮಾಡಿದಳು.ಕೊಂಚ ಉದ್ವೇಗಗೊಂಡ ಜಯಂತ್."ಹಲೋ ವಿಧಿ ಎನ್ ಆಯ್ತು ಆರೋಗ್ಯ ಹೇಗಿದೆ". ಇಸ್ ಎವೆರಿಥಿಂಗ್ ಫೈನ್", ಅನ್ನೋ ಪ್ರಶ್ನೆ ಇಂದ ಸಂಭಾಷಣೆ ಮೊದಲಾಯಿತು.

ಇತ್ತ ವಿಧಿ ಕಾರಂತ್ "ನಂಗೇನೂ ಆಗಿಲ್ಲ ಕಾಣೋ ಎವೆರಿಥಿಂಗ್ ಈಸ್ ಫೈನ್". ನಾನ್ ನಿಂಗೆ ಹೇಳ್ಬೇಕು ಅನ್ಕೊಂಡಿದ್ದು ಏನು ಅಂದ್ರೆ ಜೀವನದ ಪ್ರತಿ ಹಾದಿಯಲ್ಲಿ ನೀನು ನನ್ನ ಜೊತೆ ಇರಬೇಕು "ವಿಲ್ ಯು ಮ್ಯಾರಿ ಮೀ". ಯಾವುದೇ ವಿಷಯವನ್ನು ನೇರ ದಿಟ್ಟವಾಗಿ ಮಾತನಾಡುವ ವಿಧಿಕಾರಂತ್ ತನ್ನಲ್ಲಿರುವ ಎಲ್ಲಾ ಭಾವನೆಗಳನ್ನು ಒಂದೇ ಸಾಲಿನಲ್ಲಿ ಹಂಚಿಕೊಂಡು ಬಿಟ್ಟಳು.

ತಾನೆಂದು ಭೇಟಿಯಾಗದ ವಿಧಿಯನ್ನು ಮತ್ತು ಯಾವುದೇ ಹೆಣ್ಣಿನ ಮಾತು ಸ್ನೇಹವಿಲ್ಲದ ತನ್ನಷ್ಟಕ್ಕೆ ತಾನು ತನ್ನ ಕೆಲಸ ಮತ್ತು ಚಾರಣಲೋಕವೆನ್ನುವ ಜಯಂತ್ ನಿಗೆ ಈ ಪ್ರಶ್ನೆಗೆ ಉತ್ತರಿಸಲು ಮುಜುಗರವೆನಿಸಿತಾದರೂ "ವಿ ಆರ್ ಬೆಸ್ಟ್ ಫ್ರೆಂಡ್ಸ್ ಐ ನೆವರ್ ವಾಂಟ್ ಟು ಮ್ಯಾರಿ ಯು.ಅಂತ ಗೆಳೆತನದ ಚೌಕಟ್ಟನ್ನು ದಾಟದೆ ತಟಸ್ಥನಾದ ಜಯಂತ್.

ತನ್ನ ಪ್ರೀತಿಯನ್ನು ನಿರಾಕರಿಸಿದ ಜಯಂತ್ ನನ್ನು ಯಾವುದೇ ಬೇಧ ತೋರದೆ ಸಹಜವಾಗಿ ತನ್ನ ಜೀವದ ಗೆಳೆಯನನ್ನು ಎಂದಿನಂತೆ ಪರಸ್ಪರ ಮಾತನಾಡುತ್ತ ಬಂದ ವಿಧಿ ತನಗಾಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಮತ್ತು ಇನ್ನೂ ಕೆಲವೇ ದಿನಗಳಲ್ಲಿ ಆಗುವ ಚಿಕ್ಕ ಆಪರೇಷನ್ ನ ವಿವರ ಕೊಟ್ಟಳು.ಪ್ರೇಮ ನಿರಾಕರಣೆಯ ಪ್ರಮೇಯದಲ್ಲಿರುವ ವಿಧಿಗೆ ತನ್ನನ್ನು ವರ್ಷಗಳಿಂದ ಟೆಕ್ಸ್ಟ್ ಮಾಡುವ,ತನ್ನ ಉಭಯ ಕುಶಲೋಪರಿ ದಿನನಿತ್ಯ ಕೇಳುವ ಜಯಂತ್ ನನ್ನು ಒಮ್ಮೆಯಾದರೂ ಭೇಟಿಯಾಗುವ ಆಸೆಯಾಗಿ ವಾಟ್ಸಾಪ್ ಸಂದೇಶ ಕಳಿಸುತ್ತಾಳೆ "ಸರ್ಜರಿ ಆದ್ಮೇಲೆ ರೆಸ್ಟ್ ಲಿ ಇರುವಾಗ ಒಮ್ಮೆ ಬರ್ತೀರಾ ಕಾಸರಗೋಡುಗೆ".ಐ ವಾಂಟ್ ಟು ಸೀ ಯು. ತುಂಬಾ ಭಾವುಕನಾದ ಜಯಂತ್ ಈ ಸಂದೇಶ ನೋಡಿದ ತಕ್ಷಣ ಮರು ಸಂದೇಶ ಕಳುಹಿಸಿದ ನಾನು ಬರುತ್ತೇನೆ ವಕೀಲರೆ. ಇದಾದ ಬಹಳ ದಿನಗಳು ಆತ್ಮೀಯ ಗೆಳತಿಯ ಒಂದು ಸಂದೇಶ ರವಾನೆಯಾಗಲಿಲ್ಲ ಜಯಂತ್ ನಿಗೆ.

ಇತ್ತ ಜಯಂತ್ ವಿಧಿ ಕಾರಂತಳ ಕ್ಷಮೆ ಕೋರಿ ದೇವರಲ್ಲಿ ಪ್ರಾರ್ಥಿಸಿ ಎಲ್ಲ ಸಹಜ ಸ್ಥಿತಿಗೆ ಬರಲೆಂದು ತನ್ನ ಗೆಳತಿ ಬೇಗ ಗುಣಮುಖಳಾಗಿ ತನ್ನನ್ನು ಕಾಸರಗೋಡಿಗೆ ಕರೆಯುತ್ತಾಳೆ,ಒಮ್ಮೆ ಭೇಟಿಯಾಗಿ ಬರೋಣವೆನ್ನುವ ಭರವಸೆಯ ಜೀವನ ನಡೆಸುತ್ತಿರುವ ಜಯಂತ್ ನಿಗೆ ಕಾದಿತ್ತು ಒಂದು ಸಂದೇಶ.
ಯಾಣದ ಬೆಟ್ಟದ ತಪ್ಪಲಿನ ಚಾರಣದ ಕೊನೆಯಲ್ಲಿರುವ ಜಯಂತ್ ನಿಗೆ ಅದೊಂದು ಅನಾಮಿಕನ ಕರೆಬಂತು "ಹೆಲೋ ನಾನು ವಿಧಿ ಕಾರಂತ್ ಳ ಅಣ್ಣ ರಮೇಶ್ ಕಾರಂತ್. ನನ್ನ ತಂಗಿ ಬೆಳಿಗ್ಗೆ ಸ್ವರ್ಗಸ್ಥಳಾಗಿದ್ದಾಳೆ . ಅವಳ ಎಲ್ಲಾ ಅಂತಿಮ ಕಾರ್ಯ ಮಧ್ಯಾಹ್ನ ಮುಗಿದಿದೆ, ನಂಗೇನೇ ಆದರೂ ಈ ನಂಬರ್ ನವರಿಗೆ ವಿಷಯ ಮುಟ್ಟಿಸಿ ಎಂದು ಹೇಳಿದ್ದಳು ವಿಧಿ. ಸಾರೀ....ತಂಗಿಯ ಆಕಸ್ಮಿಕ ಮರಣದ ನೋವಿನ ಮಧ್ಯೆ ಹೇಳಲು ಸಾಧ್ಯವಾಗಲಿಲ್ಲ ಎಂದು ಕಾಲ್ ಕಟ್ ಮಾಡಿದ್ದರು ರಮೇಶ್ ಕಾರಂತರು.
ಇದನ್ನು ಕೇಳಿದ ಜಯಂತ್ ನ ಕಣ್ಣೀರಿನ ಆಣೆಕಟ್ಟು ಒಡೆದುಹೋಯಿತು . ಮನಸ್ಸಿನ ಭಾರ ತನ್ನನ್ನು ತಾನೆ ನಿಯಂತ್ರಣಕ್ಕೆ ಬಾರದೆ ಇರುವ ಸ್ಥಿತಿ ಬಂದಿತು.ಅದೆಷ್ಟೋ ಬಾರಿ ಕೇಳಿದಳು ಒಮ್ಮೆ ಭೇಟಿಯಾಗಿ ಅಂತ, ಒಮ್ಮೆ ಅವಳನ್ನು ಭೇಟಿಯಾಗಿ ಬಂದಿದ್ದರೆ ಅವಳು ಬದುಕುತ್ತಿದ್ದಳೇನೋ...??ಜಯಂತ್ ತನಗೆ ತಾನೇ ಅಂದುಕೊಳ್ಳುತ್ತಿದ್ದ ...ನನಗೆ ಅದೃಷ್ಟವಿಲ್ಲ ಕೊನೆಯ ಸರಿ ತನ್ನ ಮುಖವನ್ನು ನೋಡಿದ್ದರೆ ನನ್ನ ವಿಧಿಯ ಆತ್ಮಕ್ಕೆ ಶಾಂತಿ ಸಿಗುತ್ತಿತ್ತೇನೋ. ಜೀವನದಾದ್ಯಂತ ತನ್ನ ಮುಖ ನೋಡಲಿಲ್ಲ ಅನ್ನುವ ಕೊರಗಿನಲ್ಲಿ ಉಳಿದುಬಿಟ್ಟ ಜಯಂತ್ ಭಟ್.

ವಿಧಿಯ ಆಟವ ಬಲ್ಲವರ್ಯಾರು.
ನಮ್ಮ ಜೀವನದಲ್ಲಿ ಬರುವ ಬಹುತೇಕ ಪಾತ್ರಗಳು ನಮ್ಮ ಪ್ರಮೇಯವೇ ಇಲ್ಲದೆ ನಮ್ಮನು ಅತ್ಯಂತ ಪ್ರೀತಿ ಮಾಡಿರುತ್ತಾರೆ.ಕಾಲ ಕ್ರಮೇಣ ನಮ್ಮ ಆಯಸ್ಸು ಯಾವಾಗ ಎಲ್ಲಿ ಮುಗಿಯುತ್ತೆ ಅಂತ ಯಾರಿಗೂ ಗೊತ್ತಿಲ್ಲ.ಇರುವ ನಾಲ್ಕು ದಿನ ನಿಮನ್ನು ಪ್ರೀತಿಸುವ ವ್ಯಕ್ತಿಗೆ ನಿಮ್ಮ ಸಮಯ ಕೊಡಿ.ಇಂದು ಇರುವ ಪ್ರೀತಿ ಬಾಂಧವರು ನಾಳೆ ಇರುವರು ಅನ್ನೋ ಖಾತರಿಯಿಲ್ಲ.

ಇಂತಿ ನಿಮ್ಮ
ಲೇಖಕರು
ಜಯ ಪ್ರಕಾಶ್ ನಾರಾಯಣ್ ಪಿ.ಎಸ್.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು