LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ʼಆಜ್‌ ತಕ್‌ʼ ನ್ಯೂಸ್ಆ್ಯಂಕರ್.!

ಮುಂಬಯಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಸುದ್ದಿಯನ್ನು ಓದುವ ಭರದಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿ ನ್ಯೂಸ್ ಆ್ಯಂಕರ್ ಒಬ್ಬರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ʼಆಜ್‌ ತಕ್‌ʼ ಸುದ್ದಿವಾಹಿನಿಯ ಮಹಿಳಾ ನ್ಯೂಸ್ ಆ್ಯಂಕರ್ ಗುರುವಾರ ರಾತ್ರಿ (ಡಿ.26 ರಂದು) ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ವಿಧಿವಶರಾದ ಸುದ್ದಿಯನ್ನು ಬ್ರೇಕ್‌ ಮಾಡುವ ಭರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದಾರೆ.

ಸುದ್ದಿ ವಾಚಕಿ ಹೇಳಿದ್ದೇನು?: “ಇದು ಏಮ್ಸ್‌ ದಿಲ್ಲಿʼ ಆಸ್ಪತ್ರೆಯ ಪ್ರತಿಕಾ ಪ್ರಕಟಣೆಯನ್ನು ನಾವು ತೋರಿಸುತ್ತಿದ್ದೇವೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 92ರ ವರ್ಷದಲ್ಲಿ.. ಎಂದು ಹೇಳುತ್ತಲ್ಲೇ ಮಾಜಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಅವರು 92ರ ವರ್ಷದಲ್ಲಿ ನಿಧನ ಹೊಂದಿದ್ದಾರೆ ಎಂದು ತಪ್ಪನ್ನು ಕೂಡಲೇ ತಿದ್ದಿಕೊಂಡಿದ್ದಾರೆ.ಆದರೆ ನೆಟ್ಟಿಗರು ಈ ಕೆಲ ಸೆಕೆಂಡ್‌ಗಳ ವಿಡಿಯೋವನ್ನು ಟ್ರೋಲ್‌ ಮಾಡಿದ್ದಾರೆ.

ಚಾನೆಲ್ ಅವರು ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ವಿರುದ್ಧ ಗುಲಾಮಗಿರಿ ತೋರುತ್ತಿದೆ ಎಂದು ಕೆಲವರು ಅಪಹಾಸ್ಯ ಮಾಡಿದ್ದಾರೆ. “ಚಾನೆಲ್ ಧೂಮಪಾನ ಮಾಡುತ್ತಿದೆ” ಎಂದು ತಮಾಷೆಯಾಗಿ ಕೆಲವರು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಚಾನೆಲ್‌ ಅವರಿಗೆ ಛೀಮಾರಿ ಹಾಕಿದ್ದಾರೆ.nನಿರೂಪಕಿ ಹೇಳಿದ ತಪ್ಪನ್ನು ವಿವಿಧ ವಿಡಿಯೋಗಳನ್ನು ಹಾಕಿ ಟ್ರೋಲ್‌ ಮಾಡಲಾಗುತ್ತಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾಟ್‌ ಮಾಡೋಕೆ 15 ಸಾವಿರ, ವಿಡಿಯೋ ಕಾಲ್‌ಗೆ 30, 3 ಲಕ್ಷ ಕೊಟ್ರೆ..! ಈ ಸ್ಟಾರ್‌ ನಟಿ ತುಂಬಾ ದುಬಾರಿಹೊಸ ಅವತಾರದಲ್ಲಿ ಮಿಂಚಿದ ರಮ್ಯಾ: ಸಖತ್ ಗ್ಲಾಮರಸ್ ಫೋಟೋಗಳು ವೈರಲ್ನಾಳೆ ವರಮಹಾಲಕ್ಷ್ಮಿ ಹಬ್ಬ ಯಾವ ಗಳಿಗೆಯಲ್ಲಿ ಪೂಜೆ ನೆರವೇರಿಸಿಬೇಕು.? ಪ್ರಸಾದ ತಯಾರಿ ಹೀಗಿರಲಿ.!ಖಾಸಗಿ ಸುದ್ದಿವಾಹಿನಿ ತಂಡದ ಮೇಲೆ ಹಲ್ಲೆ ಪ್ರಕರಣ; ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಸಮೀರ್‌ ಎಂ.ಡಿ ವಿರುದ್ಧ ಎಫ್‌ಐಆರ್ ದಾಖಲು..!ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯುವಕ ನೇಣಿಗೆ ಶರಣು.!ಗ್ರಹ ದೋಷಗಳನ್ನು ನಿವಾರಿಸಿ, ಸರ್ವ ಕಾರ್ಯ ಸಿದ್ಧಿಸುವ ಶ್ರೀ ಪ್ರತ್ಯಂಗಿರಾ ದೇವಿ ಯಂತ್ರ ಪೂಜೆ.!ಧರ್ಮಸ್ಥಳ ದೇವಾಲಯಕ್ಕೆ ಬಾಂಬ್ ಇರಿಸಿ ಸ್ಫೋಟಿಸಲು ಶಂಕಿತ ಉಗ್ರನ ಸಂಚು: ಇ.ಡಿ.ತನಿಖೆಯಲ್ಲಿ ಬಯಲುಬಾಳೆಬರೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ಪಾಸಾದ ನಿವೇದಿತಾ ಶೆಟ್ಟಿದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ..! 07-08-2025