LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

SSLC ಪೂರ್ವಸಿದ್ಧತಾ ಪರೀಕ್ಷೆ ಸಮಯ ಬದಲು

ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

ಫೆ.25ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ. ಮಾ.1ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಿಂದಿ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳ ಪರೀಕ್ಷಾ ಸಮಯ ಬದಲಾವಣೆ ಮಾಡಲಾಗಿದೆ.

ಫೆ.25- ಪ್ರಥಮ ಭಾಷೆ ಕನ್ನಡ, ಫೆ.27-ಗಣಿತ, ಫೆ.28- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ), ಮಾ. 1- ಹಿಂದಿ ಅಥವಾ ತೃತೀಯ ಭಾಷೆ, ಮಾ. 3- ವಿಜ್ಞಾನ, ಮಾ. 4 – ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ. ಮೊದಲ ಮೂರು ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ. ನಂತರದ ಮೂರು ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5/5.15ರವರೆಗೆ ನಡೆಯಲಿವೆ ಎಂದು ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರಥಮ ಭಾಷೆಯ ಪರೀಕ್ಷೆ ನೂರು ಅಂಕಕ್ಕೆ ನಡೆದರೆ, ಉಳಿದ ವಿಷಯಗಳ ಪರೀಕ್ಷೆಗಳು 80 ಅಂಕಗಳಿಗೆ ನಡೆಯಲಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ -1ರ ವೇಳಾಪಟ್ಟಿ ಯನ್ನು ಮಂಡಳಿ ಈಗಾಗಲೇ ಪ್ರಕಟಿಸಿದ್ದು, ಮಾ. 21 ರಿಂದ ಏ.4ರವರೆಗೆ ನಡೆಯಲಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ವಿವಿಧ ಬ್ಯಾಂಕ್ ಗಳಲ್ಲಿ 150 ಕೋಟಿ ರೂ. ಕಳ್ಳತನ : ದಾವಣಗೆರೆಯಲ್ಲಿ ಖತರ್ನಾಕ್ ವಂಚಕ ಅರೆಸ್ಟ್!ಅನಿಲ್ ಅಂಬಾನಿ ಆಪ್ತ ಸಹಾಯಕ ಅಶೋಕ್ ಕುಮಾರ್ ಅರೆಸ್ಟ್ಅ.17ಕ್ಕೆ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ1ಎ ಫೈಟರ್ ಜೆಟ್ ಮೊದಲ ಹಾರಾಟಪಿಎಫ್ಐ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ಮುಸ್ಲಿಂ ಧರ್ಮಗುರು ಬಂಧನ..!!ಮದುವೆಯಾದ ಪುರುಷರು ಪರ ಸ್ತ್ರೀಯರ ಮೇಲೆ ವ್ಯಾಮೋಹ ಹೊಂದಲು ಅಕ್ರಮ ಸಂಬಂಧಗಳ ಸುಳಿಯಲ್ಲಿ ಸಿಲುಕಲು ಕಾರಣವೇನು ತಿಳಿಯಿರಿ!ಸೈಕಲ್ ರಿಪೇರಿ ಮಾಡುತ್ತಿದ್ದ ವರುಣ್ ಬರನ್ವಾಲ್ ಐಎಎಸ್ ಅಧಿಕಾರಿಯಾದ ಕಥೆ'ನಮ್ಮಂತೆ ಪಾಕ್ ಕೂಡ ಭಯೋತ್ಪಾದನೆ ನಿರ್ನಾಮ ಮಾಡ್ಬೇಕು'- ಭಾರತದಿಂದ ತಾಲಿಬಾನ್ ಸಚಿವ ಸಲಹೆಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯಡಿಯೂರಪ್ಪರಿಗೆ ತಪ್ಪದ ಸಂಕಷ್ಟ.!ಬೆಂಗಳೂರು ಸೇರಿದಂತೆ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದೆ ಈ ಜಿಲ್ಲೆಗಳಲ್ಲಿ.!ಡ್ರಗ್ಸ್ ಜಾಲ;: ಜಿಲ್ಲೆಯಲ್ಲಿ ನಶೆ ಮುಕ್ತವಾಗಿಸಲು ಎಸ್.ಪಿ ರಂಜಿತ್ಕುಮಾರ್ ಭಂಡಾರು ಮನವಿ