Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮೈಸೂರಿನಲ್ಲಿ ಹಲಸಿನ ಕಂಪು

 

ಸುದ್ದಿಮೂಲ ವಾರ್ತೆ

ಮೈಸೂರು, ಜೂ. 25: ಹಲಸಿನಹಣ್ಣಿನಿಂದ ಮಾಡಿದ ಬಗೆ ಬಗೆಯ ತಿಂಡಿಗಳ ರುಚಿ, ಮತ್ತೊಂದು ಕಡೆ 25 ಮಾದರಿಯ ಹಲಸಿನ ತಳಿಗಳ ಹಣ್ಣುಗಳ ಪ್ರದರ್ಶನ. ಹೀಗೆ ಹಲಸಿನ ಮಯವಾಗಿತ್ತು ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರ. ಹಲಸು ಹಣ್ಣಿನ ಮೇಳ ಜನ-ಮನವನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.

ಐಸ್‌ ಕ್ರಿಂನಿಂದ ಮಾಡಿದ್ದ ಹಣ್ಣಿನ ಸವಿ. ಜತೆಗೆ ನಾನಾ ಬಗೆಯ ಖಾದ್ಯಗಳ ರುಚಿಯನ್ನು ಜನರು ಸವಿದರು. ಶನಿವಾರ ಹಲಸಿನ ಕಂಪು. ಇಡೀ ಸಭಾಂಗಣ ಹಲಸುಮಯವಾಗಿತ್ತು. ಸಹಜ ಸಮೃದ್ಧ ಬಳಗ ಹಾಗೂ ನಮ್ಮ ರೈತರ ಮಾರ್ಕೆಟ್ ನೇತೃತ್ವದಲ್ಲಿ ನಡೆದ ಎರಡು ದಿನಗಳ ಹಲಸಿನ ಹಬ್ಬವು ಹಲಸಿನ ಹೊಸ ಲೋಕವನ್ನೇ ತೆರೆದಿಟ್ಟಿತ್ತು.

ಇಡೀ ಮೇಳದಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯೂ ದೊರೆಯಿತು. ಜತೆಗೆ ಹಲಸು ಮಾರಾಟವೂ ಆಯಿತು. ಹಲಸಿನ ಹಣ್ಣಿನಲ್ಲಿ ಹಲವಾರು ತಳಿಗಳಿವೆ. ಅಂತಹ ತಳಿಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಹಲಸನ್ನು ಉಳಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜನೆ ಮಾಡಲಾಗಿತ್ತು. ಅನೇಕ ಸಹಜ ಕೃಷಿಕರು, ಕೃಷಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.

ಘಮ್ಮೆಂದ ಹಲಸಿನ ಬಿರಿಯಾನಿ:

ಮೇಳದಲ್ಲಿ ಹಲಸಿನ ಕಾಯಿಯ ಬಿರಿಯಾನಿ ಗ್ರಾಹಕರನ್ನು ಆಕರ್ಷಿಸಿತು. ತೂಬಗೆರೆ, ರುದ್ರಾಕ್ಷಿ ಬಕ್ಕೆ, ಬೈರಸಂದ್ರ, ಲಾಲ್ಭಾಗ್ ಮದುರ ದಂತಹ ದೇಸಿ ತಳಿಗಳ ಜತೆಗೆ ಥಾಯ್ ರೆಡ್, ವಿಯೆಟ್ನಾಂ ಸೂಪರ್ ಹರ್ಲಿ ಸೇರಿದಂತೆ 25 ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಸಿಗಳ ಬಗ್ಗೆ ಮಾಹಿತಿ ಪಡೆದ ಹಲವು ಜನ ಅವುಗಳನ್ನು ಖರೀದಿಸುವ ಮೂಲಕ ಹಲಸು ಹಬ್ಬದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ನೈಸರ್ಗಿಕವಾಗಿ ಬೆಳೆದ ಮಾವು, ನೇರಳೆ, ಬೆಣ್ಣೆ ಹಣ್ಣು ಮತ್ತಿತರರ ಉತ್ಪನ್ನಗಳ ಮಾರಾಟ, ರೈತರಿಗೆ ಉಪಯೋಗ ಆಗುವ ಹಲಸು ಕತ್ತರಿಸುವ ಯಂತ್ರ, ಮಂಗಗಳಿಗೆ ಕಲ್ಲು ಹೊಡೆಯುವ ಕೋವಿ ಮೊದಲಾದ ಕೃಷಿ ಉತ್ಪನ್ನಗಳನ್ನೂ ಮಾರಾಟಕ್ಕೆ ಇಡಲಾಗಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ