ಬೆಳಗಾವಿ ; ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಇವರನ್ನು ದೆಹಲಿಯ ನೂತನ ಸಂಸತ್ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ರೈಲು ನಿಲ್ದಾಣವನ್ನು ಡಾ. ಶಿವಬಸವ ಮಾಹಾಸ್ವಾಮೀಜಿ ಬೆಳಗಾವಿ ರೈಲು ನಿಲ್ದಾಣವೆಂದು ನಾಮಕರಣ ಮಾಡುವ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿದೆ ಬೆಳಗಾವಿಯ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವಕ್ಕೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸ್ತಾಪಿತ ರೈಲು ನಿಲ್ದಾಣವನ್ನು ಡಾ. ಶಿವಬಸವ ಮಹಾಸ್ವಾಮೀಜಿ ಬೆಳಗಾವಿ ರೈಲು ನಿಲ್ದಾಣವೆಂದು ನಾಮಕರಣ ಮಾಡುವುದು ಇಲ್ಲಿನ ನಿವಾಸಿಗಳ ಅನೇಕ ದಿನಗಳ ಬೇಡಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ಸಂಬಂಧಿತ ಪ್ರಸ್ತಾವನೆ ಕರ್ನಾಟಕ ಸರಕಾರದಿಂದ ದೆಹಲಿ ಗೃಹ ಸಚಿವಾಲಯಕ್ಕೆ ತಲುಪಿದೆ.
ಈ ಬಗ್ಗೆ ರೇಲ್ವೆ ಸಚಿವಾಲಯದಿಂದಲೂ ಸಹ ಅಭಿಮತ ವ್ಯಕ್ತಪಡಿಸಿ, ಪ್ರಸ್ತಾವನೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಲ್ಲಿ ಶೀಘ್ರ ರೈಲು ನಿಲ್ದಾಣ ನಾಮಕರಣವಾಗಿದ್ದಲ್ಲಿ ಅನುಕೂಲವಾಗುವುದೆಂಬ ಪ್ರಸ್ತಾಪಕ್ಕೆ ಕೇಂದ್ರ ರೇಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದವರು ಹೇಳಿದರು.