ಚಿಕ್ಕೋಡಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ಬಸದಿಯಿಂದ ಜೈನಮುನಿ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಆಶ್ರಮದಿಂದ ಇವರು ಗುರುವಾರ ಬೆಳಗ್ಗೆ 8:00 ಯಿಂದ ನಾಪತ್ತೆಯಾಗಿದ್ದಾರೆ. ಬುಧವಾರ ರಾತ್ರಿ 10:00 ರ ವರೆಗೂ ಮುನಿಗಳು ಆಶ್ರಮದ ಕೋಣೆಯಲ್ಲಿದ್ದರು ಎಂದು ಭಕ್ತರು ತಿಳಿಸಿದ್ದಾರೆ.
ಆದರೆ ಭಕ್ತರು ಗುರುವಾರ ಬೆಳಗ್ಗೆ ಬಂದು ನೋಡುವಾಗ ಮುನಿಗಳು ಇರಲಿಲ್ಲ ಎಂಬ ಸಂಗತಿ ಗೊತ್ತಾಗಿದೆ.
ಮುನಿಗಳು ಹಿರೇ ಕೋಡಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಇದ್ದರು. ಅವರು ವಾಸವಾಗಿರುವ ಕೊಠಡಿಯಲ್ಲಿ ಅವರು ಬಳಸುತ್ತಿದ್ದ ಪಿಂಚಿ, ಕಮಂಡಲ, ಮೊಬೈಲ್ ಇವೆ. ಮುನಿಗಳು ಎಲ್ಲಿಗಾದರೂ ಹೋಗುವಾಗ ಇವುಗಳನ್ನು ತೆಗೆದುಕೊಂಡೆ ಹೋಗಬೇಕು. ಆದರೆ ಇದೀಗ ಇವುಗಳು ಕೊಠಡಿಯಲ್ಲೇ ಉಳಿದುಕೊಂಡಿವೆ. ಹಾಗಾದರೆ ಮುನಿಗಳು ಹೋಗಿದ್ದಾದರೂ ಎಲ್ಲಿಗೆ ಎಂಬ ಅನುಮಾನ ಭಕ್ತರನ್ನು ಕಾಡುತ್ತಿದೆ. ಈ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಭಕ್ತರು ದೂರು ನೀಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.