Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

" ಜಮ್ಮು-ಕಾಶ್ಮೀರವು ಎಂದಿಗೂ ಭಾರತದ್ದೇ..." – ಖಡಕ್ ಸಂದೇಶ:

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಮತ್ತೊಮ್ಮೆ ಕೆದಕಲು ಯತ್ನಿಸಿದ ಪಾಕಿಸ್ತಾನ ಮತ್ತು ಅದಕ್ಕೆ ಸಾಥ್ ನೀಡಿದ ಚೀನಾಗೆ ಭಾರತ ಜಾಗತಿಕ ಮಟ್ಟದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಭಾರತದ ಪರವಾಗಿ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.

ಜಂಟಿ ಸಭೆಯಲ್ಲೇ ಪಾಕ್‌ಗೆ ಶಾಕ್!:
'
ಭದ್ರತಾ ಮಂಡಳಿ ತೀರ್ಮಾನಗಳ ಜಾರಿಗೆ ಇರುವ ಅಂತರ ನಿವಾರಣೆ ಹಾಗೂ ಅಂತರರಾಷ್ಟ್ರೀಯ ಶಾಂತಿ-ಭದ್ರತೆ ಕಾಪಾಡುವುದು' ಎಂಬ ವಿಷಯದ ಕುರಿತು ಪಾಕಿಸ್ತಾನ ಮತ್ತು ಚೀನಾ ಸಂಯುಕ್ತವಾಗಿ 'ಅರಿಯಾ-ಫಾರ್ಮುಲಾ' ಸಭೆಯನ್ನು ಆಯೋಜಿಸಿದ್ದವು.

ಈ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಅಸೀಂ ಇಫ್ತಿಖಾರ್ ಅಹ್ಮದ್ ಎಂದಿನಂತೆ ಕಾಶ್ಮೀರ ರಾಗ ಹಾಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಭಾರತದ ಪ್ರತಿನಿಧಿ ಪರ್ವತನೇನಿ ಹರೀಶ್, ವೇದಿಕೆಯನ್ನು ರಾಜಕೀಯಗೊಳಿಸುತ್ತಿರುವ ಪಾಕ್ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದರು.

"ಎಂದಿಗೂ ಭಾರತದ್ದೇ..." ಖಡಕ್ ಸಂದೇಶ:
ಸಭೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಹರೀಶ್ ಅವರು:
"
ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ಎಂದಿಗೂ ಭಾರತದ್ದೇ, ಈಗಲೂ ಭಾರತದ್ದೇ ಆಗಿದೆ ಮತ್ತು ಮುಂದೆಯೂ ಭಾರತದ್ದಾಗಿಯೇ ಇರಲಿದೆ"ಎಂದು ಸಾರಿದರು. ಅಲ್ಲದೆ, ಸಭೆಯ ಸಹಾಧ್ಯಕ್ಷ ಸ್ಥಾನದಲ್ಲಿದ್ದ ಚೀನಾ-ಪಾಕಿಸ್ತಾನಗಳು ತಟಸ್ಥತೆ ಕಾಯ್ದುಕೊಳ್ಳದೆ, ವೇದಿಕೆಯನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಂಡಿರುವುದು ಅಚ್ಚರಿ ತಂದಿದೆ ಎಂದು ಚಾಟಿ ಬೀಸಿದರು. ಜಮ್ಮು-ಕಾಶ್ಮೀರ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಅಥವಾ ಅಂತರರಾಷ್ಟ್ರೀಯ ಹಸ್ತಕ್ಷೇಪವನ್ನು ಭಾರತ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದರು.

ವಿಶ್ವಸಂಸ್ಥೆಯ ಹಳೇ ನಿಯಮಗಳ ಮರುಪರಿಶೀಲನೆಗೆ ಆಗ್ರಹ:
ಯುಎನ್ ಭದ್ರತಾ ಮಂಡಳಿಯ ನಿಯಮಗಳ ಬಗ್ಗೆ ಮಾತನಾಡಿದ ಭಾರತದ ಪ್ರತಿನಿಧಿ, ವಿಶ್ವಸಂಸ್ಥೆಯ ಚಾರ್ಟರ್‌ನ ಅಧ್ಯಾಯ VI ಮತ್ತು VII ರ ನಡುವಿನ ವ್ಯತ್ಯಾಸವನ್ನು ವಿವರಿಸಿದರು.

ಅಧ್ಯಾಯ VII: ಶಾಂತಿ ಉಲ್ಲಂಘನೆಯಾದಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರ ನೀಡುತ್ತದೆ. ಇದರ ಉಲ್ಲಂಘನೆ ಗಂಭೀರ ಪರಿಣಾಮ ಬೀರುತ್ತದೆ.

ಅಧ್ಯಾಯ VI: ಸಂಧಾನ, ಮಾತುಕತೆ ಮತ್ತು ಮಧ್ಯಸ್ಥಿಕೆಯಂತಹ ರಾಜತಾಂತ್ರಿಕ ಮಾರ್ಗಗಳಿಗೆ ಅವಕಾಶ ನೀಡುತ್ತದೆ.

ಇದೇ ವೇಳೆ, "ಇಂತಹ ಮಧ್ಯಸ್ಥಿಕೆ ಕ್ರಮಗಳು ಸದಾಕಾಲಕ್ಕೂ ಅನ್ವಯಿಸುವುದಿಲ್ಲ. ಪರಿಸ್ಥಿತಿ ಬದಲಾದಂತೆ ಹಳೆಯ ಚೌಕಟ್ಟುಗಳನ್ನು ಮರುಪರಿಶೀಲಿಸಬೇಕು," ಎಂದು ಹೇಳುವ ಮೂಲಕ ಕಾಶ್ಮೀರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಹಳೆಯ ನಿರ್ಣಯಗಳ ಪ್ರಸ್ತುತತೆಯನ್ನೇ ಭಾರತ ಪರೋಕ್ಷವಾಗಿ ಪ್ರಶ್ನಿಸಿತು. ಇದಕ್ಕೆ ಪ್ಯಾಲೆಸ್ಟೈನ್ ವಿಷಯದಲ್ಲಿ ಕಾಲಕಾಲಕ್ಕೆ ಬದಲಾದ ಮಧ್ಯಸ್ಥಿಕೆ ಚೌಕಟ್ಟುಗಳನ್ನು ಉದಾಹರಣೆಯಾಗಿ ನೀಡಲಾಯಿತು.

ಭದ್ರತಾ ಮಂಡಳಿ ಸುಧಾರಣೆ ಮತ್ತು ಭಾರತದ ಶಾಶ್ವತ ಸದಸ್ಯತ್ವದ ಹಕ್ಕು: 'ಯುಎನ್80' ಉಪಕ್ರಮದಡಿಯಲ್ಲಿ ಸಾಮಾನ್ಯ ಸಭೆಯ ಹಳೆಯ ಆದೇಶಗಳನ್ನು ಮರುಪರಿಶೀಲಿಸುತ್ತಿರುವಾಗ, ಭದ್ರತಾ ಮಂಡಳಿಯ ಆದೇಶಗಳನ್ನೂ ಏಕೆ ಪರಿಶೀಲಿಸಬಾರದು ಎಂದು ಭಾರತ ಪ್ರಶ್ನಿಸಿದೆ. ಇಂದಿನ 15 ಸದಸ್ಯರ ಭದ್ರತಾ ಮಂಡಳಿಯು ಪ್ರಸ್ತುತ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತಿಲ್ಲ. ಹೀಗಾಗಿ ಭದ್ರತಾ ಮಂಡಳಿಯನ್ನು ವಿಸ್ತರಿಸಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ನವದೆಹಲಿ ಒತ್ತಾಯಿಸಿದೆ. ಭಾರತದ ಈ ಬೇಡಿಕೆಗೆ ಜಿ-4 ರಾಷ್ಟ್ರಗಳಾದ ಬ್ರೆಜಿಲ್, ಜರ್ಮನಿ, ಜಪಾನ್ ಸೇರಿದಂತೆ ಹಲವು ಪ್ರಮುಖ ಯುರೋಪಿಯನ್ ದೇಶಗಳ ಬಲವಾದ ಬೆಂಬಲವಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ