LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಾಹಿತಿ ಡಾ.ಜಿ ಎಂ ಮಲ್ಲಿಕಾರ್ಜುನಪ್ಪನವರು ಬರೆದ ಜಯದೇವ ಸಿರಿ ನಾಟಕ ಕೃತಿ ಲೋಕಾರ್ಪಣೆ.!

 

ಚಿತ್ರದುರ್ಗ: ಜಯದೇವ ಸಿರಿ ನಾಟಕ ಕೃತಿಯನ್ನುಜನಾರ್ಪಣೆ ಮಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಜಯದೇವ ಜಗದ್ಗುರುಗಳ ಬಗ್ಗೆ ಹೆಚ್ಚಿನವಜನರಿಗೆ ತಿಳಿಯದಿರುವುದು ವಿಷಾದಕರ ಸಂಗತಿ ಎಂದು  ಹೇಳಿದರು.

ನಗರದ ಮಹಾಮಾನತವಾದಿ  ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರಜಯಂತಿ ನಿಮಿತ್ತ ನಗರದ ಐಎಂಎ ಸಭಾಂಗಣದಲ್ಲಿ ಶ್ರೀಮನ್ಮಹಾರಾಜ ನಿರಂಜನಜಗದ್ಗುರು ಶ್ರೀ ಜಯದೇವಮುರುಘರಾಜೇಂದ್ರ ಮಹಾಸ್ವಾಮಿಗಳವರ ಕುರಿತ ಆರ್ಥಿಕಚಿಂತಕ ಹಾಗೂ ಸಾಹಿತಿ ಡಾ.ಜಿ ಎಂ ಮಲ್ಲಿಕಾರ್ಜುನಪ್ಪನವರು ರಚಿಸಿರುವ ಜಯದೇವ ಸಿರಿ ನಾಟಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಶ್ರೀಗಳ ಅಗಾಧ ಸಾಧನೆ ಚಟುವಟಿಕೆಗಳನ್ನು ನಾವು ಮುಂದುವರಿಸಿದರೆ ಸಾಕು. ಬಸವ ಜಯಂತಿಗೆ ಮುಖ್ಯಕಾರಣ ಹರ್ಡೇಕರ್ ಮಂಜಪ್ಪನವರು. ಅವರಿಗೆ ನೈತಿಕ ಶಕ್ತಿ ನೀಡಿದವರು ಜಯದೇವ ಜಗದ್ಗುರುಗಳು. ಅವರ ಸತ್ಕಾರ್ಯಗಳಿಗೆ ಚೇತೋಹಾರಿಕಾರ್ಯ ನಡೆಯಬೇಕಾಗಿದೆ. ಶ್ರೀಮಠದಲ್ಲಿ ಜಯದೇವರ ಮೂರ್ತಿಯನ್ನು ಸ್ಥಾಪಿಸುವ ಚಿಂತನೆಯನ್ನು ಮಾಡುತ್ತಿದ್ದೇವೆ.  ಜೆ.ಎಂ.ಐ.ಟಿ.ಸರ್ಕಲ್‌ನಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿಜಯದೇವ ಸ್ವಾಮಿಗಳ ಮೂರ್ತಿ ಸ್ಥಾಪನೆಯುಅತಿ ಶೀಘ್ರದಲ್ಲಿ ಮಾಡುವವರಿದ್ದೇವೆ ಎಂದರು.

ಕೃತಿ ಆವಲೋಕನ ಮಾಡಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶಿವಕುಮಾರ್ ದಂಡಿನ, ನಾಟಕ ನಮಗೆ ಏಕೆ ಬೇಕೆಂದರೆ ಸಾಹಿತ್ಯವೆಂದರೆ ಕಾವ್ಯ ಎಂಬುದಾಗಿತ್ತು. ಕಥೆ ಕಾದಂಬರಿಗಳು ಇದ್ದವು. ನಾಟಕ ಜನ ಮನ ತಲುಪುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದರು.

ಇದುಜನರಿಗೆಸಂದೇಶಗಳನ್ನು ಬೇಗ ತಿಳಿಸಲು ಸಹಾಯಕವಾಗಿರುತ್ತದೆ.ನಾಟಕಗಳಲ್ಲಿ ಅನೇಕ ವಿಧಗಳಿವೆ ಇವುಗಳು ದೃಶ್ಯಹಾಗೂ ಶ್ರವ್ಯದ ಮೂಲಕ ಅಳವಡಿಕೆ ಆಗುತ್ತದೆ. ನಾಟಕ ಮನುಷ್ಯನ ಹುಟ್ಟಿನಿಂದ ಒಂದಲ್ಲಒಂದುರೀತಿಯ ಪಾತ್ರವಹಿಸುತ್ತದೆ.ಜಯದೇವಸಿರಿ  ನಾಟಕವುಜಯದೇವ ಶ್ರೀಗಳ ಬಗ್ಗೆ ಅವರು ತಿಳಿಸುತ್ತಾ ಗುರುವಿನ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ . ಕೃತಿಕಾರರು ಈ ಮುಂಚೆ 6 ವಿವಿಧ ನಾಟಕಗಳನ್ನುö್ನ ರಚಿಸಿ ಪ್ರದರ್ಶನಗೊಳಿಸಿದ್ದಾರೆ ಎಂದರು.

ಈ ನಾಟಕ ಲಾವಣಿಕಾರರ ಮುಖಾಂತರ ಪ್ರಾರಂಭವಾಗುತ್ತದೆ.ಕಥಾನಾಯಕರನ್ನಾಗಿಜಯದೇವ ಶ್ರೀಗಳನ್ನು ಆಯ್ದುಕೊಂಡುಜಯದೇವ ಶ್ರೀಗಳು ಶ್ರೀಮಠಕ್ಕೆ ಬರುವ ಮುಂಚೆ ಅವರಬಾಲ್ಯಾವಸ್ಥೆಯನ್ನು ತಿಳಿಸಿದ್ದಾರೆ.ಈ ನಾಟಕದಲ್ಲಿ 13 ದೃಶ್ಯಗಳನ್ನು ರಚಿಸಿದ್ದಾರೆ. ಕಾಶಿಯ ವಿದ್ಯಾಭ್ಯಾಸ, ಚಳುವಳಿಯ ಬಗ್ಗೆ ಬಾಲಗಂಗಾಧರತಿಲಕರ ಭೇಟಿ, ಸನ್ಯಾಸಿಗಳ ಜೀವನಶೈಲಿ ಬಗ್ಗೆ ತಿಳಿಸಿದ್ದಾರೆ.ಕಾಶಿಯಲ್ಲಿ ವೇದ ಉಪನಿಷತ್ತುಗಳ ಅಧ್ಯಯನ ನಂತರ ಶ್ರೀಗಳ ಸಂಚಾರ ಪ್ರವಚನ ಬಗ್ಗೆ ಅವರಉನ್ನತ ವ್ಯಾಸಂಗಕ್ಕಾಗಿ ಸಹಕರಿಸಿದವರ ಬಗ್ಗೆ ಹೇಳಲು ಈ ನಾಟಕದಲ್ಲಿ ಪ್ರಯತ್ನಿಸಿದ್ದಾರೆ.ಆಣಿ ಟಿಪ್ಪಣಿಗಳನ್ನು ನಾಟಕದಲ್ಲಿ ಚಿತ್ರಿಸಿ ನಂತರ 1906ರಲ್ಲಿ ಪೀಠಾಧ್ಯಕ್ಷರಾದ ಸನ್ನಿವೇಶ ಚಿತ್ರಿಸಿದ್ದಾರೆ.ಜ್ಞಾನ ಮತ್ತು ಜೋಳಿಗೆಯ ಪಾತ್ರದ ಬಗ್ಗೆ ಚಿತ್ರಿಸಿದ್ದಾರೆ. 12ನೇ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆಯ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನವಿದೆ.ಪ್ರಸಾದ ಶಿಕ್ಷಣದ ಬಗ್ಗೆ ವಿವರವಾಗಿ ತಿಳಿಸಲು ಪ್ರಯತ್ನಿಸಿದ್ದಾರೆ.ಮೈಸೂರುರಾಜರು ಮಹಾತ್ಮಗಾಂಧೀಜಿಯವರು ಸಾಹುಮಹಾರಾಜರ ಬಗ್ಗೆ ತಿಳಿಸಿರುವಂತದ್ದನ್ನು ಕಾಣಬಹುದು.ಜಂಗಮಪೀಠ ಸ್ಥಾವರ ಪೀಠ ಹೇಗಾಯಿತುಎಂಬುದನ್ನು ತಿಳಿಸಿದ್ದಾರೆ ಎಂದರು.

ಕೃತಿರಚನೆಕಾರರಾದಡಾ.ಜಿಎನ್ ಮಲ್ಲಿಕಾರ್ಜುನಪ್ಪ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರಾಧಕೃಷ್ಣ ಪಲ್ಲಕ್ಕಿ,  ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಕೆ.ಎಂ ವೀರೇಶ್, ಎಸ್ ನಿಜಲಿಂಗಪ್ಪ ಪ್ರತಿಷ್ಠಾನದಅಧ್ಯಕ್ಷರಾದ ಶ್ರೀ ಎಸ್‌ಷಣ್ಮುಖಪ್ಪ, ಪತ್ರಕರ್ತ ಜಡೇಕುಂಟೆ ಮಂಜುನಾಥ್, ಚಿತ್ರದುರ್ಗ ಸೈನ್ಸ್ ಫೌಂಡೇಶನ್‌ಉಪಾಧ್ಯಕ್ಷ ಟಿ ಯರಿಸ್ವಾಮಿ, ಲಿಂಗಾಯತ ಪಂಚಮಸಾಲಿ ಮಹಿಳಾ ಸಮಾಜದ ಅಧ್ಯಕ್ಷ ಉಮಾರಮೇಶ್, ಪಟೇಲ್ ಶಿವಕುಮಾರ್,ಗಾಯಕತೋಟಪ್ಪಉತ್ತಂಗಿ ಮೊದಲಾದವರು ಉಪಸ್ಥಿತರಿದ್ದರು. ಜಮುರಾಕಲಾವಿದರಾದತೋಟಪ್ಪಉತ್ತಂಗಿ, ಕೋಕಿಲ ರುದ್ರಮೂರ್ತಿಅವರಿಗೆ ಶ್ರೀ ಬಸವಕುಮಾರ ಶ್ರೀಗಳು ಸನ್ಮಾನಿಸಿದರು  ಜಮುರಾಕಲಾವಿದರು ವಚನ ಗಾಯನನಡೆಸಿ, ಶ್ರೀಮತಿ ಶೈಲಾಜಾ ನಿರೂಪಿಸಿದರು.

.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026